Karnataka Polls: ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಪ್ರಭಾವ: ಬಿಜೆಪಿಯ 15 ಶಾಸಕರಿಗೆ ಟಿಕೆಟ್​​ ಡೌಟ್

|

Updated on: Apr 11, 2023 | 6:50 PM

ಚುನಾವಣೆ ಸಮೀಪದಲ್ಲೇ ರಾಜ್ಯ ಬಿಜೆಪಿಯಲ್ಲಿ ಯಾರೂ ಊಹಿಸದಂತಹ ಬೆಳವಣಿಗೆಗಳು ನಡೆಯುತ್ತಿವೆ. ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಬೆನ್ನಲ್ಲೇ ಜಗದೀಶ್ ಶೆಟ್ಟರ್​ಗೆ ಹೈಕಮಾಂಡ್​ನಿಂದ ದೂರವಾಣಿ ಕರೆ ಬಂದಿದೆ. ಇದೀಗ 15 ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನುವ ಮಾಹಿತಿ ಲಭ್ಯವಾಗಿದೆ.

Karnataka Polls: ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಪ್ರಭಾವ: ಬಿಜೆಪಿಯ 15 ಶಾಸಕರಿಗೆ ಟಿಕೆಟ್​​ ಡೌಟ್
ಆರ್ ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 15 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ತಪ್ಪುವ ಸಾಧ್ಯತೆ
Follow us on

ನವದೆಹಲಿ: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಂದರ್ಭದಲ್ಲಿ ಗುಜರಾತ್ ಮಾಡೆಲ್ ಪ್ರಭಾವ ರಾಜ್ಯ ಬಿಜೆಪಿ (Karnataka BJP) ಮೇಲೆ ಬೀರಿದೆ. ಈ ಬಾರಿ ಹಿರಿಯರಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಹೊಸ ಮುಖಗಳಿಗೆ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ (BJP High Commond) ಮುಂದಾಗಿದೆ. ಅದರಂತೆ ಈಗಾಗಲೇ ಕೆಎಸ್ ಈಶ್ವರಪ್ಪ (KS Eshwarappa) ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ (Jagadish Shettar) ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ಹೀಗೆ ಒಟ್ಟು 15 ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾಹಿತಿ ಟಿವಿ9ಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕ್ಷೇತ್ರ ತ್ಯಾಗ ಮಾಡುವಂತೆ ಬಿಜೆಪಿಯ ಕೆಲವು ಹಿರಿಯ ನಾಯಕರಿಗೆ ಹೈಕಮಾಂಡ್ ದೂರವಾಣಿ ಕರೆ ಮೂಲಕ ಹೈಕಮಾಂಡ್ ಸೂಚಿಸಿದ್ದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಚಿವ ಆರ್ ಅಶೋಕ್, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಎಲ್.ರವಿಸುಬ್ರಹ್ಮಣ್ಯ, ಎಸ್.ಎ.ರಾಮದಾಸ್, ವಿಧಾನಸಭೆ ಸ್ಪೀಕರ್ ಕಾಗೇರಿಗೆ ವರಿಷ್ಠರ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ ಈಗಾಗಲೇ ಈಶ್ವರಪ್ಪ ಅವರು ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ: KS Eshwarappa: ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ; ಬಿಜೆಪಿ ಹೈಕಮಾಂಡ್​ಗೆ ಟಿಕೆಟ್ ನೀಡಬೇಡಿ ಎಂದು ಮನವಿ

ಇನ್ನು, ಜಗದೀಶ್ ಶೆಟ್ಟರ್​ಗೆ ಕರೆ ಬಂದಿರುವು ಬಗ್ಗೆ ಸ್ವತಃ ಅವರೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿನ್ನೆಯವರೆಗೆ ನನಗೆ ಬಿಜೆಪಿ (BJP) ಟಿಕೆಟ್​ ಕನ್ಫರ್ಮ್​ ಎಂದು ಹೇಳಿದ್ದರು. ಆದರೆ ಇಂದು ದೂರವಾಣಿ ಕರೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಆದರೂ ನಾನು ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಗೆಲ್ಲುವ ಮಾನದಂಡದಡಿ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಚಿಂತಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪೂರ್ಣ ಪಟ್ಟಿ ಬಿಡುಗಡೆಯ ಬಳಿಕವೇ ಈ ಕ್ಷೇತ್ರಗಳ ಬಗ್ಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಹಾಗಿದ್ದರೆ ಯಾರಿಗೆಲ್ಲ ಟಿಕೆಟ್ ತಪ್ಪುವ ಸಾಧ್ಯತೆ ಇದೆ? ಇಲ್ಲಿದೆ ನೋಡಿ.

ಬಿಜೆಪಿಯ ಈ ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ಸಾಧ್ಯತೆ

  • ನೆಹರು ಓಲೇಕಾರ್ – ಹಾವೇರಿ
  • ಎಸ್.ಎ. ರವೀಂದ್ರನಾಥ್- ದಾವಣಗೆರೆ ಉತ್ತರ
  • ಜಿ.ಹೆಚ್. ತಿಪ್ಪಾರೆಡ್ಡಿ- ಚಿತ್ರದುರ್ಗ
  • ಎಂ.ಪಿ. ಕುಮಾರಸ್ವಾಮಿ- ಮೂಡಿಗೆರೆ
  • ಬಿ.ಎಂ. ಸುಕುಮಾರ್ ಶೆಟ್ಟಿ- ಬೈಂದೂರು
  • ಹಾಲಾಡಿ ಶ್ರೀನಿವಾಸ ಶೆಟ್ಟಿ- ಕುಂದಾಪುರ
  • ವೆಂಕಟರೆಡ್ಡಿ ಮುದ್ನಾಳ್- ಯಾದಗಿರಿ
  • ಕಳಕಪ್ಪ ಬಂಡಿ- ರೋಣ
  • ಸೋಮಲಿಂಗಪ್ಪ- ಸಿರುಗುಪ್ಪ
  • ರಾಮಣ್ಣ ಲಮಾಣಿ- ಶಿರಹಟ್ಟಿ
  • ಸಂಜೀವ ಮಠಂದೂರು- ಪುತ್ತೂರು
  • ಲಾಲಾಜಿ ಮೆಂಡನ್- ಕಾಪು
  • ಸುನೀಲ್ ನಾಯ್ಕ್ – ಭಟ್ಕಳ
  • ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ
  • ಎಸ್.ಎ. ರಾಮದಾಸ್ – ಕೃಷ್ಣರಾಜ
  • ಜಗದೀಶ್ ಶೆಟ್ಟರ್ – ಧಾರವಾಡ ಸೆಂಟ್ರಲ್
  • ವಿಶ್ವೇಶ್ವರ ಹೆಗಡೆ ಕಾಗೇರಿ – ಶಿರಸಿ
  • ಸುರೇಶ್ ಕುಮಾರ್ – ರಾಜಾಜಿನಗರ
  • ರಮೇಶ್​ ಜಾರಕಿಹೊಳಿ – ಗೋಕಾಕ್

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Tue, 11 April 23