ಸಿದ್ದರಾಮಯ್ಯಗೆ ತಾರಾಬಲ: ವರುಣಾ ಕ್ಷೇತ್ರದಲ್ಲಿ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ

ಈ ಬಾರಿ ವರುಣಾ ವಿಧಾನಸಭೆ ಚುನಾವಣೆ ಭಾರೀ ಕುತೂಹಲ ಮೂಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಅಳಿವು ಉಳಿವಿನ ಪ್ರತಿಷ್ಠೆಯಾಗಿದೆ. ಇನ್ನು ಸಿದ್ದರಾಮಯ್ಯನವರ ಪರ ಸಿನಿಮಾ ನಟ-ನಟಿಯರು ಪ್ರಚಾರಕ್ಕಿಳಿಯಲಿದ್ದಾರೆ.

ಸಿದ್ದರಾಮಯ್ಯಗೆ ತಾರಾಬಲ: ವರುಣಾ ಕ್ಷೇತ್ರದಲ್ಲಿ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ

Updated on: May 01, 2023 | 3:00 PM

ಮುಖ್ಯಾಂಶಗಳು

  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾರಾ ಮೆರುಗು
  • ವರುಣಾ ಕ್ಷೇತ್ರದಲ್ಲಿ ಶಿವಣ್ಣ, ರಮ್ಯಾ, ದುನಿಯಾ ವಿಜಯ್ ಪ್ರಚಾರ
  • ಮೇ 4ರಂದು ಸಿದ್ದರಾಮಯ್ಯ ಪರ ವರುಣಾದಲ್ಲಿ ಶಿವಣ್ಣ, ರಮ್ಯಾ ಕ್ಯಾಂಪೇನ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣೆಯ (Election 2023) ಕಾವು ಜೋರಾಗಿದ್ದು, ಕನ್ನಡ ಚಿತ್ರರಂಗದ (Kannada Cinema Industry) ಘಟಾನುಘಟಿ ನಾಯಕರು ಈ ಬಾರಿ ಎಲೆಕ್ಷನ್ ಅಖಾಡಕ್ಕಿಳಿದು ನೆಚ್ಚಿನ ನಾಯಕರ ಪರ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ನಾಯಕರ ಪರ ಸ್ಟಾರ್ ಪ್ರಚಾರಕರಾಗಿ ನಟ ಕಿಚ್ಚ ಸುದೀಪ್ (Actor Sudeep)​ ಎಲ್ಲೆಡೆ ಅಬ್ಬರಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್​ ಪರ ಪ್ರಚಾರಕ್ಕೆ ಶಿವರಾಜ್​ ಕುಮಾರ್, ರಮ್ಯಾ ​ ಎಂಟ್ರಿ ಕೊಟ್ಟಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯನವರ ಪರವಾಗಿ ವರುಣಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ರಮ್ಯಾ, ನಟ ದುನಿಯಾ ವಿಜಯ್ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿಗಳ ಪರ ಶಿವಣ್ಣ ಪ್ರಚಾರ

ಹೌದು..ಅತ್ತ ಬಿಜೆಪಿ ಪರ ಕಿಚ್ಚ ಸುದೀಪ್​ ಪ್ರಚಾರಕ್ಕಿಳಿದಿದ್ದರೆ, ಮತ್ತ ಹ್ಯಾಟ್ರಿಕ್ ಶಿವರಾಜ್​ ಕುಮಾರ್ ಸಹ ಕಾಂಗ್ರೆಸ್​ನ ಕೆಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ತಮ್ಮ ಪತ್ನಿಯ ಸಹೋದರ ಮಧುಬಂಗಾರಪ್ಪ ಪರ ಸೊರಬದಲ್ಲಿ ಶಿವಣ್ಣ ಪ್ರಚಾರ ಮಾಡಲಿದ್ದಾರೆ. ಹಾಗೇ ಹೆಂಡತಿ ಕಡೆಯಿಂದ ಸಂಬಂಧಿಯಾಗುವ ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರದ ಜಗದೀಶ್ ಶೆಟ್ಟರ್​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿರುವ ವರುಣಾದಲ್ಲಿ ಮೇ 04ರಂದಯ ಪ್ರಚಾರ ಮಾಡಲಿದ್ದಾರೆ. ಇನ್ನು ಬೀದರ್​ನಲ್ಲಿ ಅಶೋಕ್ ಖೇಣಿ ಪರ ಪ್ರಚಾರಕ್ಕಿಳಿಯಲಿದ್ದಾರೆ.

ವರುಣಾದಲ್ಲಿ ತಾರಾ ಮೆರುಗು

ಕಾಂಗ್ರೆಸ್ (Congress) ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ (Ramya) ಈ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಕಾಂಗ್ರೆಸ್​​ನ ಸ್ಟಾರ್​ ಪ್ರಚಾರಕಿಯಾಗಿರುವ ರಮ್ಯಾ ಮೇ 4ರಂದು ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರ ಪ್ರಚಾರ ಮಾಡಲಿದ್ದಾರೆ. ಹಾಗೇ ನಟ ದುನಿಯಾ ವಿಜಯ್ ಸಹ ಸಿದ್ದರಾಮಯ್ಯ ಪರ ಕ್ಯಾಂಪೇನ್ ಮಾಡಲಿದ್ದಾರೆ. ಮೇ 4ರಂದು
ಸಿದ್ದರಾಮಯ್ಯ ಜೊತೆಗೆ ಶಿವಣ್ಣ, ರಮ್ಯಾ, ರೋಡ್ ಶೋ ನಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಇನ್ನು ದುನಿಯಾ ವಿಜಿ ಮೇ 5ರಂದು ವರುಣಾದಲ್ಲಿ ಪ್ರಚಾರ ಮಾಡಲಿದ್ದಾರೆ.

ಹಲವೆಡೆ ರಮ್ಯಾ ಪ್ರಚಾರ

ಮೇ 6ರಂದು ಬಬಲೇಶ್ವರ (Babaleshwar) ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಪರ ಮತಯಾಚಿಸಲಿದ್ದಾರೆ. ನಂತರ ಬೆಂಗಳೂರಿನ (Bengaluru) ಸರ್ವಜ್ಞ ನಗರದಲ್ಲಿ (Sarvagnanagar) ಕೆ.ಜೆ.ಜಾರ್ಜ್ (K.J.George) ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ ಮಂಡ್ಯ (Mandya) ಜಿಲ್ಲೆಯಲ್ಲೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ.

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us