Karnataka Assembly Elections 2023: ಇಂದು ಕಿಚ್ಚ ಸುದೀಪ್​ ಪ್ರಚಾರ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ

|

Updated on: Apr 28, 2023 | 7:03 AM

ನಟ ಕಿಚ್ಚ ಸುದೀಪ್​ ಇಂದು (ಏ.28) ಧಾರವಾಡ ಮತ್ತು ಗದಗನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

Karnataka Assembly Elections 2023: ಇಂದು ಕಿಚ್ಚ ಸುದೀಪ್​ ಪ್ರಚಾರ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ
ನಟ ಸುದೀಪ್​
Follow us on

ಧಾರವಾಡ: ಕರ್ನಾಟಕ ವಿಧಾಸಭಾ ಚುನಾವಣೆ (Karnataka Assembly Election 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಬ್ಬರದ ಪ್ರಚಾರ, ಆಶ್ವಾಸನೆಗಳು ಮತ್ತು ಟೀಕೆ-ಟಿಪ್ಪಣಿಗಳಿಗೆ ಎಲ್ಲೆ ಇಲ್ಲದೆ ಹೊರಬರುತ್ತಿವೆ. ಬಿಜೆಪಿಯ ಸ್ಟಾರ್​ ಪ್ರಚಾರಕರು ರಾಜ್ಯಾದ್ಯಂತ ಸುತ್ತಿ ಮತಬೇಟೆ ನಡೆಸಿದ್ದಾರೆ. ಈ ಪ್ರಚಾರಕ್ಕೆ ಚಂದನವನದ ಸ್ಟಾರ್​​​ ನಟರೂ ಕೂಡ ಕೈ ಜೋಡಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraj Bommai) ಪರವಾಗಿ ನಿಂತಿರುವ ನಟ ಕಿಚ್ಚ ಸುದೀಪ್ (Sudeep)​ ಬಿಜೆಪಿ (BJP) ಅಭ್ಯರ್ಥ್ಯಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ನಿನ್ನೆ (ಏ.27) ರಂದು ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದರು. ಇಂದು (ಏ.28) ಪಕ್ಕದ ಜಿಲ್ಲೆಗಳಾದ ಧಾರವಾಡ (Dharwad) ಮತ್ತು ಗದಗನಲ್ಲಿ (Gadag) ಮತಬೇಟೆ ನಡೆಸಲಿದ್ದಾರೆ.

​ಮೊದಲು ಧಾರವಾಡ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿರುವ ನಟ ಕಿಚ್ಚಾ ಸುದೀಪ್​ ರಾಜ್ಯದ ಗಮನ ಸೆಳೆದಿರುವ ಮತ್ತು ಸಾಕಷ್ಟು ಚರ್ಚೆಯಾಗುತ್ತಿರುವ ಹುಬ್ಬಳಿ-ಧಾರವಾಡ ಕೇಂದ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ನಂತರ ಕಲಘಟಗಿ, ಮಧ್ಯಾಹ್ನ ಧಾರವಾಡ ಮತ್ತು ಗದಗನಲ್ಲಿ ಮತಯಾಚಿಸಲಿದ್ದಾರೆ.

ನಟ ಕಿಚ್ಚ ಸುದೀಪ್ ಪ್ರಚಾರದ ವೇಳಾಪಟ್ಟಿ​​

1. ಹುಬ್ಬಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್​ ಟೆಂಗಿನಕಾಯಿ ಪರ ಬೆಳಗ್ಗೆ 9.30ಕ್ಕೆ ಮತಯಾಚಿಸಲಿದ್ದಾರೆ
2. ಕಲಘಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಚಾರ ಆರಂಭಿಸುವ ನಟ ಸುದೀಪ್​​ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಮತಯಾಚಿಸಲಿದ್ದಾರೆ.
3. ಮಧ್ಯಾಹ್ನ 12.20ಕ್ಕೆ ಧಾರವಾಡ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರ ಜೊತೆ ನಟ ಸುದೀಪ್ ರೋಡ್ ಶೋ ನಡೆಸಲಿದ್ದಾರೆ
4. ಮಧ್ಯಾಹ್ನ 3 ಗಂಟೆಗೆ ಗದಗದಲ್ಲಿ ರೋಡ್ ಶೋ ನಟ ಸುದೀಪ್‌ ನಡೆಸಲಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:03 am, Fri, 28 April 23