ಗದಗ: ಪ್ರಧಾನಿ ಮೋದಿ(Narendra Modi) ವಿಷ ಸರ್ಪ, ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ ಮತಯಾಚನೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಭಾಷಣದ ವೇಳೆ, ಪ್ರಧಾನಿ ಮೋದಿಯನ್ನು ವಿಷದ ಸರ್ಪಕ್ಕೆ ಹೋಲಿಸಿದ್ದಾರೆ. ನಿಮ್ಮ ಮನೆಯಲ್ಲಿ ದೇಶಕ್ಕಾಗಿ ಒಂದೂ ನಾಯಿ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡಿಗೆ ಏನು ಅಂತಾ ಹೇಳಲಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಉಚಿತ ಅಕ್ಕಿ ಕೊಡುವ ಕೆಲಸ ಮಾಡಿದ್ದು ಸೋನಿಯಾ ಗಾಂಧಿ. ನರೇಗಾ ಮಾಡಿದ್ದು ನಾವು. ರಾಜ್ಯದಲ್ಲಿ ಬಿಜೆಪಿ ಮಾಡಿದ ಸಾಧನೆ ಅಂದ್ರೆ 40% ಕಮಿಷನ್. ಇಂತಹವರನ್ನು ಮೋದಿ ತನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಒಬ್ಬ ಪ್ರಧಾನಿಯಾಗಿ ಹಳ್ಳಿ, ತಾಲೂಕಿಗೆ ಬಂದು ಓಡಾಡುತ್ತಿದ್ದಾರೆ. ಮೋದಿ ಮುಖ ನೋಡಿ ಮತ ಹಾಕಿ ಅಂತೀರಾ. ನೀವು ರಾಜ್ಯದ ಮುಖ್ಯಮಂತ್ರಿ ಆಗ್ತೀರಾ, ಮುನ್ಸಿಪಾಲ್ಟಿ, ಮೇಯರ್, ಸಿಎಂ, ಪ್ರಧಾನಿ ಎಲ್ಲವೂ ನೀವೇ ಆಗ್ತೀರಾ. ಆಸೆ ಬುರುಕ ಮೋದಿ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಇದನ್ನು ಓದಿ: Mallikarjun Kharge; ಮಲ್ಲಿಕಾರ್ಜುನ ಖರ್ಗೆ ಹಣೆಗೆ ಹಚ್ಚಿದ ಕುಂಕುಮವನ್ನು ಬಾಡಿಗಾರ್ಡ್ ಒರೆಸಿದ್ಯಾಕೆ?
ಕಪ್ಪು ಹಣ ತಂದು 15 ಲಕ್ಷ ಕೊಡ್ತಿನಿ ಅಂದ್ರು. ಇನ್ನೂ ಕೊಟ್ಟಿಲ್ಲ. ಎಲ್ಲ ಹಣ ಅದಾನಿ ಹತ್ತಿರ ಇಟ್ಟಾರೆನೋ. ಉದ್ಯೋಗ ಕೊಟ್ಟಿಲ್ಲ. 18 ಕೋಟಿ ಯುವಕರಿಗೆ ನೌಕರಿ ಕೊಡಬೇಕಿತ್ತು. ಸುಳ್ಳಿನ ಸರ್ದಾರ. ಹಗಲಿಗೆ ರಾತ್ರಿ, ರಾತ್ರಿಗೆ ಹಗಲು ಅಂತಾನೆ. ಡಬಲ್ ಇಂಜಿನ ಎರಡು ಕಡೆ ಫೇಲ್ ಆಗಿದೆ. ಡಬಲ್ ಇಂಜೀನ್ ಯಾಕೇ ನೌಕರಿ ಕೊಡ್ತಿಲ್ಲ. ಮೋದಿ ದೊಡ್ಡ ಸುಳ್ಳುಗಾರ. ನಮ್ಮ ಸರ್ಕಾರ ಇದ್ದಾಗ ದೊಡ್ಡ ದೊಡ್ಡ ಡ್ಯಾಂ, ದೊಡ್ಡ ದೊಡ್ಡ ನೀರಾವರಿ ಯೋಜನೆ ಮಾಡಿದ್ದೇವೆ. ಒಂಬತ್ತು ವರ್ಷದಲ್ಲಿ ಮೋದಿ ಏನ್ ಮಾಡಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಚುನಾವಣೆ ಗೆದ್ದರೆ ಇಡೀ ದೇಶದಲ್ಲೇ ಗೆಲ್ಲುತ್ತೇವೆ. ದೇಶದಲ್ಲಿ ಮತ್ತೆ ಬದಲಾವಣೆ ಆಗಲಿದೆ. ಉರಿಬಿಸಿಲಿನಲ್ಲಿ ಜನ ನಿಂತಿದ್ದನ್ನು ನೋಡಿದ್ರೆ ಬದಲಾವಣೆ ಪಕ್ಕಾ ಅನಿಸುತ್ತೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನರೇಗಲ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:48 pm, Thu, 27 April 23