ತಮ್ಮ ವಿರುದ್ಧ ಚುನಾವಣೆಯಲ್ಲಿ ಸೆಣೆಸಿದ್ದ ನಾಯಕನನ್ನೇ ಸೆಳೆದ ಕೆಪಿಸಿಸಿ ಅಧ್ಯಕ್ಷ, ಕನಕಪುರದಲ್ಲಿ ಡಿಕೆ ಶಿವಕುಮಾರ್​ ಹಾದಿ ಸುಗಮ

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೂಡಿದ್ದ ತಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿತಂತ್ರ ಹೆಣೆದು ಸಕ್ಸಸ್ ಕಂಡಿದ್ದಾರೆ. ಇದರೊಂದಿಗೆ ಕನಕಪುರದಲ್ಲಿ ತಮ್ಮ ಹಾದಿಯನ್ನು ಸುಗಮ ಮಾಡಿಕೊಂಡಿದ್ದಾರೆ.

ತಮ್ಮ ವಿರುದ್ಧ ಚುನಾವಣೆಯಲ್ಲಿ ಸೆಣೆಸಿದ್ದ ನಾಯಕನನ್ನೇ ಸೆಳೆದ ಕೆಪಿಸಿಸಿ ಅಧ್ಯಕ್ಷ, ಕನಕಪುರದಲ್ಲಿ ಡಿಕೆ ಶಿವಕುಮಾರ್​ ಹಾದಿ ಸುಗಮ
ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ
Follow us
ರಮೇಶ್ ಬಿ. ಜವಳಗೇರಾ
|

Updated on:Apr 27, 2023 | 2:32 PM

ರಾಮನಗರ: ಇದೇ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ (Karnataka Assembly Elections 2023) ರಾಜಕೀಯ ನಾಯಕರು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ವಿವಿಧ ಪಕ್ಷಗಳ ನಾಯಕರಿಗೆ ಗಾಳ ಹಾಕಿತ್ತಿದ್ದು, ಪಕ್ಷಾಂತರಗಳು ಸಹ ಜೋರಾಗಿವೆ. ಅದರಂತೆ ಕನಕಪುರದಲ್ಲಿ ಈ ಹಿಂದೆ ತಮ್ಮ ವಿರುದ್ಧ ಸೆಣಸಿದ್ದವರನ್ನೇ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಯಶಸ್ವಿಯಾಗಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್​ ಆಪ್ತರಿಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಗಾಳ ಹಾಕಿದ್ದರು. ಪ್ರಭಾಕರ್ ರೆಡ್ಡಿ ಬದಲು ಡಿಕೆ ಶಿವಕುಮಾರ್​ ಆಪ್ತೆ ಸುಷ್ಮಾ ರಾಜಗೋಪಾಲ್ ರೆಡ್ಡಿ ಅವರಿಗೆ ಕುಮಾರಸ್ವಾಮಿ ಟಿಕೆಟ್​ ನೀಡಿದ್ದರು. ಇದೀಗ ಡಿಕೆ ಬ್ರದರ್ಸ್ , ಕುಮಾರಸ್ವಾಮಿ ಆಪ್ತರನ್ನು ಕಾಂಗ್ರೆಸ್​​ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Kanakapura Assembly Constituency: ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಬಂಡೆಗಳ ನಾಡು ಕನಕಪುರ ಕ್ಷೇತ್ರ ರಾಜಕೀಯವಾಗಿ ಹೇಗಿದೆ?

ನಾರಾಯಣಗೌಡ ಹಾಗೂ ಪ್ರಭಾಕರ್ ರೆಡ್ಡಿ ಅವರು ಜೆಡಿಎಸ್​ ತೊರೆದು ಇಂದು(ಏಪ್ರಿಲ್ 27) ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾರಾಯಣಗೌಡ ಅವರು ಕಳೆದ ಬಾರಿ ಅಂದರೆ 2018ರಲ್ಲಿ ಕನಕಪುರ ಜೆಡಿಎಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್​ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಅವರನ್ನು ಡಿಕೆ ಶಿವಕುಮಾರ್​ ಕಾಂಗ್ರೆಸ್​ಗೆ​ ಸೇರಿಕೊಂಡಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ರೆಡ್ಡಿ ಅವರು ಸಹ ಇಂದು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಈ ಬಾರಿ ಡಿಕೆ ಶಿವಕುಮಾರ್​ ಅವರಿಗೆ ಪ್ರಬಲ ಪೈಪೋಟಿ ಕೊಡಲೇಬೇಕೆಂದು ಸಚಿವ ಆರ್ ಅಶೋಕ್​ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ಇದರ ಮಧ್ಯೆ ಈ ಹಿಂದೆ ತಮ್ಮ ವಿರುದ್ಧ ಸ್ಪರ್ಧಿಸಿ 47,643 ಮತಗಳನ್ನು ಪಡೆದುಕೊಂಡಿದ್ದ ನಾರಾಯಣಗೌಡ ಅವರು ಕಾಂಗ್ರೆಸ್​ ಸೇರಿದ್ದರಿಂದ ಡಿಕೆ ಶಿವಕುಮಾರ್ ಅವರಿಗೆ ಆನೆ ಬಲಬಂದಂತಾಗಿದೆ.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ ಪಣ, ಮಾಜಿ ಸಿಎಂಗೆ ಮೊದಲ ಶಾಕ್ ಕೊಟ್ಟ ಪ್ರಲ್ಹಾದ್ ಜೋಶಿ

ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ತವರು ಕ್ಷೇತ್ರದಲ್ಲಿ (Kanakapura Assembly Constituency) ಕಟ್ಟಿಹಾಕಬಲ್ಲ ಸಮರ್ಥ ಎದುರಾಳಿ ಪ್ರತಿಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲ. 2008 ರ ಚುನಾವಣೆಯಲ್ಲಿ ಶಿವಕುಮಾರ್‌ಗೆ ಸೋಲಿನ ಭೀತಿ ಹುಟ್ಟಿಸಿ ಕೇವಲ 8 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿ.ಎಂ. ವಿಶ್ವನಾಥ್‌ ಡಿಕೆಶಿ ಪಾಳಯ ಸೇರಿದ್ದರು. ಕಳೆದ ಬಾರಿಯ ಜೆಡಿಎಸ್​ ಪರಾಜಿತ ಅಭ್ಯರ್ಥಿ ನಾರಾಯಣ ಗೌಡ ಸಹ ಇದೀಗ ಡಿಕೆ ಶಿವಕುಮಾರ್​ಗೆ ಜೈ ಎಂದಿದ್ದು, ಈ ಮೂಲಕ ಕನಕಪುರದಲ್ಲಿ ತಮ್ಮ ಹಾದಿಯನ್ನು ಮತ್ತಷ್ಟು ಸುಗಮ ಮಾಡಿಕೊಂಡಿದ್ದಾರೆ.

ಕನಕಪುರ ಕ್ಷೇತ್ರದ ಜಾತಿವಾರು ಲೆಕ್ಕಚಾರ ಹೀಗಿದೆ

ಒಕ್ಕಲಿಗ- ಒಂದು ಲಕ್ಷದ ಹತ್ತು ಸಾವಿರ, ಎಸ್ ಸಿ-ಎಸ್ ಟಿ- 45 ಸಾವಿರ, ಮುಸ್ಲಿಂಮರು 15 ಸಾವಿರ, ಲಿಂಗಾಯತ- 10 ಸಾವಿರ, ಕುರುಬ- 6 ಸಾವಿರ, ಕ್ರಿಶ್ಚಿಯನ್- 4 ಸಾವಿರ, ಲಂಬಾಣಿ- 5 ಸಾವಿರ, ಕುಂಬಾರ 4 ಸಾವಿರ, ಬಣಜಿಗ- 3 ಸಾವಿರ, ಇತರೆ- 20 ಸಾವಿರ ಮತದಾರರು ಇದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Thu, 27 April 23