ನಿಮಗೆ ತೊಂದ್ರೆ ಕೊಡಲ್ಲ ಆದರೆ… ಆದರೆ…ನನ್ನನ್ನು ಗೌರವದಿಂದ ನಡೆಸಿಕೊಳ್ಳಿ: ಪರೋಕ್ಷವಾಗಿ ರೇವಣ್ಣಗೆ ಎಚ್ಚರಿಸಿದ ಮಂಜು

|

Updated on: Mar 17, 2023 | 3:18 PM

ಅರಕಲಗೂಡಿನಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಎ. ಮಂಜು, ಹೆಚ್​ಡಿ ರೇವಣ್ಣಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟು ಬಳಿಕ ಅವರನ್ನು ಗುಣಗಾನ ಮಾಡಿದ್ದಾರೆ. ಅಷ್ಟಕ್ಕೂ ಮಂಜು ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ನೋಡಿ.

ನಿಮಗೆ ತೊಂದ್ರೆ ಕೊಡಲ್ಲ ಆದರೆ... ಆದರೆ...ನನ್ನನ್ನು ಗೌರವದಿಂದ ನಡೆಸಿಕೊಳ್ಳಿ:  ಪರೋಕ್ಷವಾಗಿ ರೇವಣ್ಣಗೆ ಎಚ್ಚರಿಸಿದ ಮಂಜು
Follow us on

ಹಾಸನ: 1989 ರಲ್ಲಿ ದೇವೇಗೌಡರಿಗೆ (HD Devegowda) ಲೋಕಸಬಾ ಚುನಾವಣೆಯಲ್ಲಿ ನಾನು ಸೋತಿದ್ದೆ. ಆಗ ನನ್ನನ್ನ ನಿಮ್ಮೊಟ್ಟಿಗೆ ಸ್ವೀಕಾರ ಮಾಡಿ ಎಂದಿದ್ದೆ. ಆದರೆ ಏಕೋ ‌ಗೊತ್ತಿಲ್ಲ ಅವರು ನನ್ನನ್ನ ಸ್ಚೀಕಾರ ಮಾಡಿರಲಿಲ್ಲ. ಈಗ ಅವರು ನನಗೆ ನಾಯಕರಾಗಿ ಸಿಕ್ಕಿದ್ದಾರೆ ಎಂದು ದೇವೇಗೌಡರನ್ನ ಹಾಡಿ‌ ಹೊಗಳಿದ್ದಾರೆ. ಇಂದುಶ್ರ(ಮಾರ್ಚ್ 17) ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆ(pancharatna yatra) ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಮಂಜು, ನಾನು ದೇವೇಗೌಡರು ಅನಾರೋಗ್ಯ ದಿಂದ‌ ಇದ್ದಾಗ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ನೀವು ನನ್ನೊಟ್ಟಿಗೆ ಇರಬೇಕು ಎಂದರು. ನಾನು ಸಮಯ ಬೇಕು ಎಂದು ಹೇಳಿದ್ದೆ, ಗೌಡರು ಕೂಡಲೇ ಕುಮಾರಣ್ಣರಿಂದ ಫೋನ್ ಮಾಡಿಸಿದ್ದರು. ಫೋನ್ ಮಾಡಿದ್ದ ಕುಮಾರಣ್ಣ ನಿಮಗೆ ಕಾಂಗ್ರೆಸ್ ನಿಂದ‌ ಟಿಕೆಟ್ ಸಿಗಲ್ಲ . ನಾನು ನಿಮಗೆ ಟಿಕೆಟ್​​ ಕೊಡುತ್ತೇನೆ ಎಂದು ನನಗೆ ಆಹ್ವಾನ ನೀಡಿದ್ರು ಎಂದು ಹೇಳಿದರು.

ಇದನ್ನೂ ಓದಿ: ಹಾಸನ ಜೆಡಿಎಸ್​ ಟಿಕೆಟ್​ ಫೈಟ್: ಭವಾನಿ ರೇವಣ್ಣ-ಸ್ವರೂಪ್​ ಮಧ್ಯೆ ತೇಲಿಬಂತು ಹೊಸ ಹೆಸರು

ಮೊದಲು ಅವರು ಆಹ್ವಾನ ಮಾಡಿದಾಗಲು ನನಗೆ ನಂಬಲಾಗಲಿಲ್ಲ. ಕುಮಾರಣ್ಣ ನಾವು ನೀವು ಹೇಗೋ ಚನ್ನಾಗಿದ್ದೇವೆ. ಆದರೆ ರೇವಣ್ಣ ಒಪ್ಪಿಕೊಳ್ಳಬೇಕಲ್ಲ ಎಂದು ಹೇಳಿದ್ದೆ. ಬ್ರದರ್ ಅದನ್ನ ನನಗೆ ಬಿಡಿ ರೇವಣ್ಣಗೆ ನಾನು ಹೇಳುತ್ತೇನೆ ಅಂದಿದ್ದರು. ಕಡೆಗೆ ರೇವಣ್ಣ ಅವರು ನನ್ನ ಕರೆಯಿಸಿಕೊಂಡು ಚರ್ಚೆ ಮಾಡಿದ್ದರು ಎಂದು ಜೆಡಿಎಸ್​ ಸೇರಲು ಬಂದಿದ್ದ ಆಹ್ವಾನದ ಪ್ರಸಂಗವನ್ನು ಮೆಲುಕು ಹಾಕಿದರು.

ರಾಜಕೀಯದಲ್ಲಿ ನನಗೆ ನಾಯಕರಿಲ್ಲ. ನನ್ನ ಸಾಕಿದ್ದು ಬೆಳೆಸಿದ್ದು ನನ್ನ ಜನ. ನಾಯಕರಿಲ್ಲದೆ ಯಾರು ಉಳಿಯಲು ಆಗಲ್ಲ. ಆದರೆ ನನ್ನ ಕ್ಷೇತ್ರದ ಜನ ನನ್ನ ಉಳಿಸಿದ್ದಾರೆ. ಗೌಡರ ಆಶೀರ್ವಾದ, ಕುಮಾರಣ್ಣನ ವಿಶ್ವಾಸ ರೇವಣ್ಣರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳುತ್ತ ರೇವಣ್ಣೋರೆ ತಾವು ನಿದ್ರೆ ಮಾಡುತ್ತಿದ್ದೀರಿ ಸ್ವಲ್ಪ ಕೇಳಿಸಿಕೊಳ್ಳಿ ಎಂದು ಮಾತಿನಲ್ಲೇ ಕಾಲೆಳೆದರು.

ನಾನು ನಮ್ಮ ಎಲ್ಲಾ ತಾಲ್ಲೂಕಿನ ಜನರ ಮೂಲಕ ಹೇಳುತ್ತೇನೆ. ಕುಮಾರಣ್ಣ ರಾಜ್ಯಕ್ಕೆ ಹಾಸನ ಜಿಲ್ಲೆಗೆ ನೀವೇ ನಾಯಕ. ನಿಮಗೆ ನಾನು ಯಾವುದೇ ರೀತಿಯಲ್ಲಿ ತೊಂದರೆ ಕೊಡುವುದಿಲ್ಲ ಎಂದು ಈ ಮೂಲಕ ಹೇಳುತ್ತೇನೆ ಎಂದು ಹೇಳು ಮೂವಲ ತಮ್ಮ 25 ವರ್ಷದ ರಾಜಕೀಯ ಎದುರಾಳಿ ಎದುರು ಬಹಿರಂಗವಾಗಿ ಶರಣಾಗತಿ ಮಾತುಗಳನ್ನಾಡಿದರು.

ನಾನು ನಿಮಗೆ ತೊಂದರೆ ಕೊಡುವುದಿಲ್ಲ. ಆದರೆ… ಆದರೆ…ಆದರೆ ….ಎಂದು ಮೂರು ಬಾರಿ ಹೇಳಿ ನನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು ಅಷ್ಟೇ. ಪ್ರೀತಿಯಿಂದ ಹೇಳುತ್ತೇನೆ. ಪ್ರೀತಿ ಇಲ್ಲದಿದ್ದರೆ ಬಹುಶಃ ಭಾರೀ ಕಷ್ಟ ಆಗುತ್ತೆ ಎಂದು ಪರೋಕ್ಷವಾಗಿ ಎಚ್ಚರಿಸಿ, ಕುಮಾರಸ್ವಾಮಿ ಎದುರೇ ಬಹಿರಂಗ ಸಭೆ ವೇದಿಕೆಯಲ್ಲಿ ತಮ್ಮನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಕಡ್ಡಿಮುರಿದಂತೆ ಹೇಳಿದರು.

ದೇವೇಗೌಡರು ದೇವರ ಮೂಲಕ ಬಂದು ನನಗೆ ಆಶೀರ್ವಾದ ಮಾಡಿದ್ರು. ನಾನು ರಾಜಕೀಯ ವಾಗಿ ಬಹಳ ಹಠವಾದಿ ಆದರೆ ದೇವೇಗೌಡರ ಮನಸಿಗೆ ಸೋತಿದ್ದೇನೆ ಅಷ್ಟೇ. ಅವರ ಕುಟುಂಬದ ಏಳಿಗೆಗೆ ಶ್ರಮಿಸುತ್ತೇನೆ. ಅಭಿವೃದ್ಧಿಯಲ್ಲಿ ರೇವಣ್ಣರನ್ನ ಮೀರಿಸುವವರು ಯಾರೂ ಇಲ್ಲ. ರಾಜಕೀಯವಾಗಿ ಅವರು ನಾನು ಏನೇನೋ ಮಾತನಾಡಿರಬಹುದು. ಆದರೆ ಅಭಿವೃದ್ಧಿ ವಿಷಯದಲ್ಲಿ ರೇವಣ್ಞ ಮುಂದು. ಮುಂದೆ ಅಭಿವೃದ್ಧಿಗೆ ಸಹಕಾರ ಕೊಡುತ್ತಾರೆ, ಹೊಳೆನರಸೀಪುರವನ್ನು ಒಂದು ಕಣ್ಣು ಎಂದು ನೊಡುಕೊಳ್ಳುತ್ತೀರಾ, ಅರಕಲಗೂಡನ್ನು ಒಂದು ಕಣ್ಣು ಎಂದು ನೋಡಿಕೊಳ್ಳಿ ಮರಿಯಬೇಡಿ ಎಂದು ವೇದಿಕೆಯಲ್ಲಿ ಕುಟುಕಿ ಕಡೆಗೆ ರೇವಣ್ಣರನ್ನ ಹಾಡಿ ಹೊಗಳಿದರು.