ಕೆಲವರಿಗೆ ವೋಟ್ ಮೊದಲು, ನಮಗೆ ರಾಷ್ಟ್ರ ಮೊದಲು; ಕಾಂಗ್ರೆಸ್ ವಿರುದ್ದ ಸಿಟಿ ರವಿ ವಾಗ್ದಾಳಿ

ರಾಜ್ಯದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಮಾಡಿದ್ದೇವೆ, ವಿಜಯಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಬಿಜೆಪಿ ಅತಿ ಹೆಚ್ಚು ಸೀಟ್ ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದ ಬಿಜೆಪಿ ಶಾಸಕ ಸಿ.ಟಿ ರವಿ.

ಕೆಲವರಿಗೆ ವೋಟ್ ಮೊದಲು, ನಮಗೆ ರಾಷ್ಟ್ರ ಮೊದಲು; ಕಾಂಗ್ರೆಸ್ ವಿರುದ್ದ ಸಿಟಿ ರವಿ ವಾಗ್ದಾಳಿ
ಕಾಂಗ್ರೆಸ್ ವಿರುದ್ದ ಸಿಟಿ ರವಿ ವಾಗ್ದಾಳಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 17, 2023 | 1:06 PM

ಧಾರವಾಡ: ರಾಜ್ಯದ 140ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಮಾಡಿದ್ದೇವೆ, ವಿಜಯಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಬಿಜೆಪಿ ಅತಿ ಹೆಚ್ಚು ಸೀಟ್ ಗೆದ್ದು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೆ, ಕೆಲವರಿಗೆ ವೋಟ್ ಮೊದಲು ಆದರೆ ನಮಗೆ ರಾಷ್ಟ್ರ ಮೊದಲು ಎಂದು ಬಿಜೆಪಿ ಶಾಸಕ ಸಿ.ಟಿ ರವಿ(C. T. Ravi)ಹೇಳಿದ್ದಾರೆ. ಅಭಿವೃದ್ಧಿಯಲ್ಲಿ ಯಾರೂ ನಮ್ಮನ್ನ ಹಿಂದೆ ಹಾಕುವುದಕ್ಕೆ ಆಗುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಶೇ.70 ರಿಂದ 80 ರಷ್ಟು ಸರ್ಕಾರದ ಫಲಾನುಭವಿಗಳಿದ್ದಾರೆ. ಫಲಾನುಭವಿಗಳಷ್ಟೇ ಮತ ಹಾಕಿದ್ರೆ ಸಾಕು ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುತ್ತದೆ ಎಂದಿದ್ದಾರೆ.

ಜಿಲ್ಲೆಯ ಕುಂದಗೋಳದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಶಾಸಕ ಸಿ.ಟಿ.ರವಿ ‘ನಾವು ಸರ್ಕಾರದ ಅಭಿವೃದ್ಧಿ ರಿಪೋರ್ಟ್ ಕಾರ್ಡ್ ಜನರ ಮುಂದೆ ಇಟ್ಟಿದ್ದೇವೆ. ಜೊತೆಗೆ ಪಕ್ಷದ ಸಿದ್ಧಾಂತ ಮತ್ತು ಬದ್ಧತೆ ಮುಂದಿಟ್ಟು ಬಹುಮತ ಕೇಳ್ತಿದ್ದೇವೆ. ನಾವು ಯಾವುದೇ ಜಾತಿ ತಾರತಮ್ಯ ಮಾಡದೆ ಯೋಜನೆ ತಲುಪಿಸಿದ್ದೇವೆ. ಯಾವತ್ತೋ ಸಾಲ ಮನ್ನಾ ಮಾಡಿರೋದನ್ನೆ ಇಂದಿಗೂ ಕೆಲವರು ಹೇಳುತ್ತಿದ್ದಾರೆ ಎಂದು ಸಿಟಿ ರವಿ ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ದ ವ್ಯಂಗ್ಯವಾಡಿದ್ದಾರೆ. ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ತಗೆದಿಟ್ಟಿದ್ದೇವೆ. ಒಂದು ಕಾಲದಲ್ಲಿ ನಾವು ಕಳಸಾ ಬಂಡೂರಿಗಾಗಿ ಹೋರಾಟ ಮಾಡಿದ್ವಿ. ಅಧಿಕಾರಕ್ಕೆ ಬಂದ ಮೇಲೆ ಸುಮ್ಮನೆ ಕೂರಲಿಲ್ಲ. ನಮ್ಮ ಬದ್ದತೆ ತೋರಿಸಿ DPR ಗೆ ಅನುಮತಿ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಅಸ್ತಿತ್ವದ ಬಗ್ಗೆ ಇತಿಹಾಸ ಹೇಳುವುದೇನು?

ನಮ್ಮ ವಿರೋಧಿಗಳು ನಮ್ಮನ್ನ ಮೀಸಲಾತಿ ವಿರೋಧಿ ಎಂದು ಹೇಳುತ್ತಿದ್ದರು. ನಾವು ಮೀಸಲಾತಿ ವಿರೋಧಿ ಅಲ್ಲ. ಅನುಭವ ಮಂಟಪದ ಪುನರುತ್ಥಾನಕ್ಕೆ ನಮ್ಮ ಸರ್ಕಾರ ಕೈ ಹಾಕಿದೆ. ಕೆಲವರಿಗೆ ವೋಟ್ ಮೊದಲು ಆದರೆ ನಮಗೆ ರಾಷ್ಟ್ರ ಮೊದಲು. ವೋಟ್ ಮೊದಲು ಅನ್ನೋರು ಕುಕ್ಕರ್ ಬಾಂಬ್ ಬ್ಲಾಸ್ಟ್​ನಲ್ಲಿ ಎಷ್ಟು ವೋಟ್ ಬರುತ್ತೆ ಅಂತಾ ಲೆಕ್ಕ ಹಾಕ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಇನ್ನು ನಮ್ಮ  ಯಡಿಯೂರಪ್ಪನವರ ಮಾರ್ಗದರ್ಶನ ಹಾಗೂ ಬೊಮ್ಮಾಯಿಯವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ವಾರೆಂಟಿನೇ ಮುಗಿದು ಹೋಗಿದೆ. ವಾರೆಂಟಿ ಇಲ್ಲದವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಮೋಸ ಮಾಡಿಯಾದ್ರೂ ATM ಚಾಲು ಇಡೋಕೆ ನೋಡುತ್ತಿದ್ದಾರೆ. ಕೆಲವರಿಗೆ ಈ ಸಾರಿ ಅಂದ್ರೆ ಮುಂದೆ ಆಗಲ್ಲ ಅನ್ನೋದ ಇದೆ. ಅದಕ್ಕೆ ಟೆಂಟ್ ಹಾಕಿ ಗುಡಿಸಿಬಿಡೋಣ ಎಂದು ಕಾಯುತ್ತಿದ್ದಾರೆ. ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ‌ಮುಖ್ಯಗಳು. ಮೋಸ ಒಡೆದಾಳೋ ಟೂಲ್ ಕಿಟ್ ಕಾಂಗ್ರೆಸ್ ನೀತಿ ಎಂದಿದ್ದಾರೆ.

ಇದನ್ನೂ ಓದಿ:ಸಂಧಾನ ಯಶಸ್ವಿ: ಅಂತಿಮವಾಗಿ ತಮ್ಮ ರಾಜಕೀಯ ನಿಲುವು ಪ್ರಕಟಿಸಿದ ಸೋಮಣ್ಣ, ಬಿಜೆಪಿ ನಾಯಕರಿಗಿದ್ದ ಆತಂಕ ದೂರ

ITI ಕಾಂಗ್ರೆಸ್ ನಮ್ಮ ಕೊಡುಗೆ ಎನ್ನುವ ಸಿದ್ದು ಹೇಳಿಕೆಗೆ ಸಿಟಿ ರವಿ ಕೌಂಟರ್

ಸಿದ್ದರಾಮಯ್ಯ ಲಜ್ಜೆ ಬಿಟ್ಟು ಸುಳ್ಳು ಹೇಳುತ್ತಾರೆ. ಸಾರ್ವಜನಿಕವಾಗಿ ಸಿದ್ದರಾಮಯ್ಯ ಇಷ್ಟು ಸುಳ್ಳು ಹೇಳ್ತಾರೆ ಅಂದ್ರೆ ನೀವೆ ಯೋಚನೆ ಮಾಡಿ. ನಾವು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ನಾಲ್ಕು ದಿನ ಹಿಂದೆ ಮುಂದೆ ಆಗಬಹುದು. ಇನ್ನು ಲಿಂಗಾಯತರ ವಿಚಾರವಾಗಿ ಮಾತನಾಡಿದ ಸಿಟಿ ರವಿ ಇದಕ್ಕೆ ಅಪ್ಪ ಅಮ್ಮ ಇಲ್ಲ. ಇದು ಕಾಂಗ್ರೆಸ್ ಟೂಲ್ ಕಿಟ್ ಪ್ರಚಾರ. ನಮ್ಮ ಕಡೆ ಇಂದ ಸೈಬರ್ ಕ್ರೈಮ್ ವಿರುದ್ದ ದೂರು ಕೊಟ್ಟಿದ್ದೇವೆ. ನನ್ನ ಡಿಕ್ಷನರಿಯಲ್ಲಿ ಹಿಂದುತ್ವ ಇದೆ, ಜಾತಿ ಇಲ್ಲ. ಇವರು ನನ್ನ ಟಾರ್ಗೆಟ್ ಮಾಡಿದ್ದಾರೆ. ಲಿಂಗಾಯತ ಸಮುದಾಯ ನನ್ನ ಮನೆ ಮಗನ ತರಹ ನೋಡಿದೆ. ಅದರಲ್ಲಿ ಹುಳಿ ಹಿಂಡುವ ಕೆಲಸ ಆಗ್ತಿದೆ. ಸತ್ಯ ಹೊಸಲು ದಾಟಿ ಬರೋ ಅಷ್ಟರಲ್ಲಿ ಸುಳ್ಳು ಊರೆಲ್ಲ ಸುತ್ತಿ ಬರತ್ತೆ. ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಯಾವುದಕ್ಕೂ ಹೇಸಲ್ಲ ಎಂದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ