AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್: ಉರಿಗೌಡ, ನಂಜೇಗೌಡ‌ ಬೆನ್ನಲ್ಲೇ ಮತ್ತೊಂದು ಚರ್ಚೆ ಹುಟ್ಟುಹಾಕಿದ ಸಿಟಿ ರವಿ

ಉರಿಗೌಡ, ನಂಜೇಗೌಡ‌ ಬೆನ್ನಲ್ಲೇ ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮತ್ತೊಂದು ಹೊಸ ವಿಷಯವನ್ನು ತೇಲಿಬಿಟ್ಟಿದ್ದಾರೆ.

ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್:  ಉರಿಗೌಡ, ನಂಜೇಗೌಡ‌  ಬೆನ್ನಲ್ಲೇ ಮತ್ತೊಂದು ಚರ್ಚೆ ಹುಟ್ಟುಹಾಕಿದ ಸಿಟಿ ರವಿ
ಸಿಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
Follow us
ರಮೇಶ್ ಬಿ. ಜವಳಗೇರಾ
|

Updated on:Mar 17, 2023 | 2:40 PM

ಧಾರವಾಡ: ಟಿಪ್ಪು ಸುಲ್ತಾನ್​ನನ್ನು ಮಂಡ್ಯದ ಉರಿಗೌಡ, ನಂಜೇಗೌಡ‌ ಕೊಂದಿರುವುದು ಎಂದು ಬಿಜೆಪಿ ಬಿಜೆಪಿ ನಾಯರು ವಾದಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದ್ದು, ರಾಜಕೀಯ ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮತ್ತೊಂದು ಹೊಸ ವಿಷಯವನ್ನು ತೇಲಿಬಿಟ್ಟಿದ್ದಾರೆ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್ ಎಂದು ಸಿಟಿ ರವಿ ಹೇಳಿದ್ದಾರೆ. ಇಂದು (ಮಾರ್ಚ್ 17) ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಸಿಟಿ ರವಿ, ಉರಿಗೌಡ, ನಂಜೇಗೌಡ್ರು ಟಿಪ್ಪುನನ್ನು ಕೊಂದಿರುವುದು ಐತಿಹಾಸಿಕ ಸತ್ಯ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್, ಹಾಸನಕ್ಕೆ ಕೈಮಾಬಾತ್ ಎಂದು ಕರೆಯುವುದಕ್ಕೆ ಕುಮಾರಸ್ವಾಮಿಗೆ ಇಷ್ಟ ಇರಬಹುದು ಎಂದು  ಟಾಂಗ್​ ಕೊಟ್ಟರು.

ಇದನ್ನೂ ಓದಿ: ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಎಂಬ ಇತಿಹಾಸ ಸೃಷ್ಟಿಸಿದ ಬಿಜೆಪಿ: ಕುಮಾರಸ್ವಾಮಿ

ಉರಿಗೌಡ ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಟಿಪ್ಪುವನ್ನ ಉರಿಗೌಡ ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ. ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದ. ಹೆಚ್.ಡಿ ಕುಮಾರಸ್ವಾಮಿಗೂ ಹಾಸನವನ್ನ ಕೈಮಾಬಾದ್ ಎಂದು ಕರೆಯಲು ಇಷ್ಟವೇನು…? ಎಂದು ವ್ಯಂಗ್ಯವಾಡಿದರು.

ಟಿಪ್ಪು ಸಿದ್ದಾಂತ ಬದುಕಿದ್ರೆ ಹಾಸನ ಕೈಮಾಬಾತ್ ಆಗುತ್ತೆ. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ..? ಎಂದು ಸಿ.ಟಿ ರವಿ ಕುಹಕವಾಡಿದರು.

ಕುಮಾರಸ್ವಾಮಿ ಹೇಳಿದ್ದೇನು?

ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಎಂದು ಪ್ರಚಾರ ಮಾಡುವ ಮೂಲಕ ಬಿಜೆಪಿಯವರು ಈ ಸಮಾಜದ ಗೌರವ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ರಾಜಕೀಯ ಕಿಡಿಗೆ ಕಾರಣರಾದ ಉರಿಗೌಡ, ನಂಜೇಗೌಡ ಅಸ್ತಿತ್ವದ ಬಗ್ಗೆ ಇತಿಹಾಸ ಹೇಳುವುದೇನು?

ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ. ಕುತಂತ್ರದಿಂದ ಕೊಂದಿದ್ದಾರೆ ಎನ್ನುವುದಕ್ಕೆ ಇತಿಹಾಸ ಇದೆ. ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬ ಇತಿಹಾಸವನ್ನು ನಿರ್ಮಿಸಿದವರು ಬಿಜೆಪಿಯವರು. ಈ ಇತಿಹಾಸ ಸೃಷ್ಟಿ ಮಾಡಿ ಅದಕ್ಕೆ ನಮ್ಮ ಸಮುದಾಯದ ಇಬ್ಬರ ಹೆಸರು ಇಟ್ಟಿದ್ದಾರೆ. ಆ ಮೂಲಕ ಒಕ್ಕಲಿಗರ ಸಮುದಾಯಕ್ಕೆ ಇವರು ಅಗೌರವ ತೋರಿದ್ದಾರೆ. ಹೀಗಾಗಿ ಒಕ್ಕಲಿಗರು ಇದರ ವಿರುದ್ಧ ಹೋರಾಟ ಮಾಡಿ ದಿಕ್ಕರಿಸಬೇಕು. ಬಿಜೆಪಿ ಪಕ್ಷದವರನ್ನ ಎಚ್ಚರಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದ್ದರು.

Published On - 2:40 pm, Fri, 17 March 23