Hubballi Thanjavur Train: ನೈಋತ್ಯ ರೈಲ್ವೆ ವಲಯದಿಂದ ಹುಬ್ಬಳ್ಳಿಯಿಂದ ತಂಜಾವುರ, ಬನಾರಸ್​ಗೆ ಹೊಸ ರೈಲು ಸಂಚಾರ ಆರಂಭ

ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಿಂದ-ತಂಜಾವುರಗೆ (ಗಾಡಿ ಸಂಖ್ಯೆ 07325 ಮತ್ತು 07326) ರೈಲು ಸಂಚಾರ ಆರಂಭಿಸಲು ನಿರ್ಧಿಸಿದೆ.

Hubballi Thanjavur Train: ನೈಋತ್ಯ ರೈಲ್ವೆ ವಲಯದಿಂದ ಹುಬ್ಬಳ್ಳಿಯಿಂದ ತಂಜಾವುರ, ಬನಾರಸ್​ಗೆ ಹೊಸ ರೈಲು ಸಂಚಾರ ಆರಂಭ
ಹುಬ್ಬಳ್ಳಿ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Mar 17, 2023 | 11:55 AM

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ (South Western Railway) ಹುಬ್ಬಳ್ಳಿಯಿಂದ (Hubli Railway Station)-ತಂಜಾವುರಗೆ (Tanjavur Railway Station) (ಗಾಡಿ ಸಂಖ್ಯೆ 07325 ಮತ್ತು 07326) ರೈಲು ಸಂಚಾರ ಆರಂಭಿಸಲು ನಿರ್ಧಿಸಿದೆ. ರೈಲು ವಾರಕ್ಕೆ 5 ಬಾರಿ ಮಾತ್ರ ಸಂಚರಿಸಲಿದ್ದು, ಮಾರ್ಚ್​ 20 ರಿಂದ ಸಂಚಾರ ಆರಂಭಾವಾಗಲಿದೆ. ಎಪ್ರಿಲ್ ತಿಂಗಳಲ್ಲಿ ದಿನಾಂಕ​ 3, 10, 17 ಮತ್ತು 24 ರಂದು ಹುಬ್ಬಳ್ಳಿಯಿಂದ ತಂಜಾವುರಗೆ ತೆರಳುತ್ತದೆ. ಹುಬ್ಬಳ್ಳಿ-ತಂಜಾವುರ ವೀಕ್ಲಿ ಸ್ಪೆಷಲ್​ ಎಕ್ಸ್ಪ್ರೆಸ್​ (ಗಾಡಿ ಸಂಖ್ಯೆ 07325) ಸೋಮವಾರ (ಮಾ.20) ರಂದು ರಾತ್ರಿ 8:25 ನಿಮಿಷಕ್ಕೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಂಗಳವಾರ ಮಧ್ಯಾಹ್ನ 2:15ಕ್ಕೆ ತಂಜಾವುರ ತಲುಪುತ್ತದೆ.

ರೈಲು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರುರ, ಅರಸಿಕೇರೆ, ತುಮಕೂರು, ಚಿಕ್ಕಬಾಣವಾರ, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟ, ಸೇಲಂ ಜಂಕ್ಷನ್​, ಕರೂರ ಜಂಕ್ಷನ್​, ತಿರುಚಿರಾಪಲ್ಲಿ ಜಂಕ್ಷನ್​, ಬುದಲುರ್ ಮಾರ್ಗವಾಗಿ ತಂಜಾವುರ ತಲುಪುತ್ತದೆ.

ಹುಬ್ಬಳ್ಳಿ-ತಂಜಾವುರ ವೀಕ್ಲಿ ಸ್ಪೆಷಲ್​ ಎಕ್ಸಪ್ರೆಸ್​ (ಗಾಡಿ ಸಂಖ್ಯೆ 07326) ಮಂಗಳವಾರ (ಮಾ.21) ರಂದು ತಾಜಾವುರನಿಂದ ಸಾಯಂಕಾಲ 7:40ಕ್ಕೆ ಹೊರಟು ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣಕ್ಕೆ (Shree Siddaroodha Swamji Railway Station) ಬುಧವಾರ ಮಧ್ಯಾಹ್ನ 12:30ಕ್ಕೆ ತಲುಪುತ್ತದೆ. ಈ ರೈಲು ಕೂಡ ಮೇಲೆ ಹೇಳಿದ ಮಾರ್ಗವಾಗಿಯೇ ಸಂಚಿರಿಸುತ್ತದೆ. ರೈಲಿನ ಪ್ರಾಥಮಿಕ ನಿರ್ವಹಣೆ ಹುಬ್ಬಳ್ಳಿ ಮತ್ತು ರೈಲಿನ ದ್ವಿತೀಯ ನಿರ್ವಹಣೆ ತಂಜಾವೂರಿನಲ್ಲಿ ಇರುತ್ತದೆ.

ಇದನ್ನೂ ಓದಿ: ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ ಅನುಕೂಲಗಳೇನು?

ಈ ರೈಲು 1 ಎಸಿ 2-ಟೈರ್ ಕೋಚ್, 3 ಎಸಿ 3-ಟೈರ್ ಕೋಚ್‌ಗಳು, 9 ಸ್ಲೀಪರ್ ಕೋಚ್‌ಗಳು ಮತ್ತು ವಿಕಲಾಂಗ  ವಿಭಾಗವನ್ನು ಒಳಗೊಂಡಿರುವ 20 ಕೋಚ್‌ಗಳನ್ನು ಹೊಂದಿದೆ. ಈ ಸಂಚಾರ ಉತ್ತಮ ಪ್ರತಿಕ್ರಿಯೆಯನ್ನು ಪಡೆದರೆ ಸೇವೆಯನ್ನು ಕ್ರಮಬದ್ಧಗೊಳಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ.

Hubballi Banaras Train: ಹುಬ್ಬಳ್ಳಿ-ಬನಾರಸ್​ ವಿಶೇಷ ರೈಲು

ನೈಋತ್ಯ ರೈಲ್ವೆ ಬೇಸಿಗೆ ಕಾಲಕ್ಕೆ ವಿಶೇಷ ರೈಲೊಂದು ಬಿಡಲು ನಿರ್ಧರಿಸಿದೆ. ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣದಿಂದ ಬನಾರಸ್​​ಗೆ ವಿಶೇಷ ರೈಲನ್ನು ಬಿಟ್ಟಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ನಿಯಂತ್ರಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲನ್ನು ಬಿಡಲಾಗಿದೆ.

ಗಾಡಿ ಸಂಖ್ಯೆ (07347) ಮಾರ್ಚ್​ 27 ರಂದು ರಾತ್ರಿ 8:30ಕ್ಕೆ ಹುಬ್ಬಳ್ಳಿಯಿಂದ ಹೊರಟು ಬನಾರಸ್​ ಅನ್ನು ಮಾರ್ಚ್​ 29 ರಂದು ಬೆಳಿಗ್ಗೆ 9:10 ಕ್ಕೆ ತಲುಪುತ್ತದೆ. ಗಾಡಿ ಸಂಖ್ಯೆ (07348) ಬನಾರಸ್​ನಿಂದ ಮಾರ್ಚ್​ 29 ರಂದು ರಾತ್ರಿ 8:40 ಕ್ಕೆ ಹೊರಟು, ಮಾರ್ಚ್​ 31 ರಂದು ಬೆಳಿಗ್ಗೆ 11:45ಕ್ಕೆ ಹುಬ್ಬಳ್ಳಿ ತಲಪುತ್ತದೆ.

ಈ ರೈಲು ಗದಗ, ಬದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರಸ್ತೆ, ವಿಜಯಪುರ, ಇಂಡಿ ರಸ್ತೆ, ಸೊಲ್ಲಾಪುರ. ದಾವುಂದ, ಅಹಮೆದಾನಗರ, ಕೊಪಅರಂಗಾವ, ಮಾನಮದ್​, ಬುಸವಾಲ್​, ಖಂಡವಾ, ಇಟಸ್ರಿ, ಪಿಪ್ರರಿಯಾ, ಜಲಬಾಪುರ, ಕತನಿ, ಮೈಹಾರ್​, ಸತ್ನಾ, ಮಾನಿಕಪುರ, ಪ್ರಯಾಗರಾಜ ಚೌಕ್​ ಜಂಕ್ಷನ್​ ಮೂಲಕ ವಾರಣಾಸಿ ತಲಪುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Fri, 17 March 23

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್