AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ ಅನುಕೂಲಗಳೇನು?

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣ ವಿಶ್ವದಲ್ಲೇ ಅತಿ ಉದ್ದವಾದ ರೈಲು ಪ್ಲಾಟ್​ಫಾರಂ ಹೊಂದಿದ್ದು, ಈ ಪ್ಲಾಟ್​ಫಾರಂನಿಂದ ಆಗುವ ಉಪಯೋಗಗಳು ಇಲ್ಲಿವೆ.

ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ಪ್ಲಾಟ್ ಫಾರಂ, ಇದರ  ಅನುಕೂಲಗಳೇನು?
ಹುಬ್ಬಳ್ಳಿ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on:Mar 17, 2023 | 2:18 PM

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣ (Hubli Shree Siddaroodha Swamiji Railway Station) ಇತಿಹಾಸ ಸೃಷ್ಟಿಸಿದೆ. ವಿಶ್ವದಲ್ಲೆ ಅತಿ ಉದ್ದವಾದ ರೈಲ್ವೆ ಪ್ಲಾಟ್​​ಫಾರಂ (World Longest Platfrom) ಹೊಂದಿರುವ ಖ್ಯಾತಿ ಹುಬ್ಬಳ್ಳಿ ಜಂಕ್ಷನ್​​ಗೆ ಸಲ್ಲುತ್ತದೆ. ಬೆಂಗಳೂರು ರೈಲು ನಿಲ್ದಾಣವನ್ನು ಹೊರತುಪಡಿಸಿದರೆ, ಹುಬ್ಬಳ್ಳಿ ರೈಲು ನಿಲ್ದಾಣ ಅತ್ಯಂತ ಜನಬಿಡ ರೈಲ್ವೆ ನಿಲ್ದಾಣವಾಗಿದೆ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಇದೆ. ಇಂದು (ಮಾ.12) ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಧಾರವಾಡದಲ್ಲಿ ಐಐಟಿಯನ್ನು ಲೋಕಾರ್ಪಣೆಗೊಳಿಸುವುದರ ಜೊತೆಗೆ ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್​​ಫಾರಂನ್ನು ಉದ್ಘಾಟಿಸಲಿದ್ದಾರೆ.

ಹುಬ್ಬಳ್ಳಿ ರೈಲು ನಿಲ್ದಾಣ ನವೀಕರಣ, ನವ ಹೆಸರು

ರೈಲು ನಿಲ್ದಾಣ ನವೀಕರಣ ಮಾಡುವ ನಿರ್ಧಾರ ಮಾಡಲಾಗಿತ್ತು. 115 ಕೋಟಿ ರೂಪಾಯಿ ಅನುದಾನದಲ್ಲಿ 2019ರಲ್ಲಿ ಪ್ರಾರಂಭವಾದ ನವೀಕರಣ ಕಾರ್ಯ ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಂಡು 24 ಫೆಬ್ರವರಿ 2021ರಂದು ಲೋಕಾರ್ಪಣೆಗೊಂಡಿತು. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ ಈಗಾಗಲೇ 5 ಪ್ಲಾಟಫಾರಂ ಹೊಂದಿದ್ದ ನಿಲ್ದಾಣದಲ್ಲಿ ಇನ್ನೂ 3 ಪ್ಲಾಟಫಾರಂ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಂಕ್ಷನ್ ಆಗಿರುವ ಈ ನಿಲ್ದಾಣ, ದಕ್ಷಿಣದಲ್ಲಿ ಬೆಂಗಳೂರು, ಮೈಸೂರು ಹಾಗು ಉತ್ತರದಲ್ಲಿ ಪುಣೆ, ಮುಂಬೈ, ದೆಹಲಿಗೆ ಪ್ರಯಾಣಿಸುವವರಿಗೆ ಕೇಂದ್ರವಾಗಿದೆ. 2020ರ ಸೆಪ್ಟೆಂಬರ್​ ತಿಂಗಳಲ್ಲಿ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲು ನಿಲ್ದಾಣವೆಂದು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ಭಾರತದ ಪ್ರಥಮ ಹಸಿರು ಐಐಟಿ ಲೋಕಾರ್ಪಣೆಗೆ ಸಜ್ಜು, ಕ್ಯಾಂಪಸ್​ನಲ್ಲಿದೆ ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಉದ್ದವಾದ ಪ್ಲಾಟ್​ಫಾರಂ

ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖ್‌ಪುರ ನಿಲ್ದಾಣದಲ್ಲಿರುವ 1366 ಮೀಟರ್‌ (1.36 ಕಿ.ಮೀ.) ಉದ್ದದ ಪ್ಲಾಟ್‌​ಫಾರಂ ಅತಿ ಉದ್ದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಒಟ್ಟು 5 ಪ್ಲಾಟ್​ಫಾರಂಗಳಿವೆ. 5ರಲ್ಲಿ 1ನೇ ಪ್ಲಾಟ್​ಫಾರಂನ್ನು ಅತಿ ಉದ್ದವಾಗಿ ವಿಸ್ತರಿಸಲಾಗಿದೆ. ಈ ಹಿಂದೆ 1ನೇ ಪ್ಲಾಟ್‌​ಫಾರಂ 550 ಮೀಟರ್‌ ಉದ್ದವಿತ್ತು. ಇದನ್ನು ವಿಸ್ತರಿಸಿ 10 ಮೀಟರ್‌ ಅಗಲದೊಂದಿಗೆ 1505 ಮೀಟರ್‌ ವರೆಗೆ (1.5 ಕಿಮೀ) ವಿಸ್ತರಿಸಲಾಗಿದೆ. ಇದು ಜಗತ್ತಿನಲ್ಲೇ ಅತಿ ಉದ್ದದ ಪ್ಲಾಟ್‌​ಫಾರಂ ಆಗಿ ಹೊರಹೊಮ್ಮಿದೆ.

ಉದ್ದವಾದ ಪ್ಲಾಟ್​ಫಾರಂ ನಿರ್ಮಾಣದ ಅನುಕೂಲಗಳು

1. ಪ್ಲಾಟಫಾರಂಗೆ ವಿರುದ್ಧ ದಿಕ್ಕಿನಿಂದ ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿನಿಂದ ಪ್ರವೇಶಿಸಬಹು ಮತ್ತು ನಿರ್ಗಮಿಸಬಹುದು.

2. ಏಕಕಾಲಕ್ಕೆ ಎರಡು ರೈಲುಗಳು ವಿರುದ್ಧ ದಿಕ್ಕಿಗೆ ಸಂಚರಿಸಲು ಅನುಕೂಲವಾಗುತ್ತದೆ.

3. ಎರಡು ರೈಲು ಒಂದೇ ಪ್ಲಾಟ್​ಫಾರಂನಿಂದ ನಿರ್ಗಮಿಸುವುದರಿಂದ, ಈ ಎರಡು ರೈಲಿನ ಪ್ರಯಾಣಿಕರು ಮತ್ತೊಂದು ಪ್ಲಾಟ್​ಫಾರಂಗೆ ಹೋಗುವುದು ತಪ್ಪುತ್ತದೆ.

4. ಪಾಟ್ಲಾಫಾರಂನಲ್ಲಿ ಹೋಟೆಲ್​ಗಳನ್ನು ಹಾಕಬಹುದು, ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡಬಹುದು.

5. ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಅನುಕೂಲವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Sun, 12 March 23