AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ರಾಜಕೀಯದಿಂದ ಹಿಂದೆ ಸರಿಯಲು ಕಾರಣರಾದ ವ್ಯಕ್ತಿಯ ಹೆಸರಿಸಿದ ರಜನೀಕಾಂತ್

2021 ರ ತಮಿಳುನಾಡು ವಿಧಾನಸಭೆ ಚುನಾವಣೆ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದ ರಜನೀಕಾಂತ್​ರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮನವೊಲಿಸಿದ ವ್ಯಕ್ತಿಯ ಬಗ್ಗೆ ರಜನಿ ಮಾತನಾಡಿದ್ದಾರೆ.

Rajinikanth: ರಾಜಕೀಯದಿಂದ ಹಿಂದೆ ಸರಿಯಲು ಕಾರಣರಾದ ವ್ಯಕ್ತಿಯ ಹೆಸರಿಸಿದ ರಜನೀಕಾಂತ್
ರಜನೀಕಾಂತ್
ಮಂಜುನಾಥ ಸಿ.
|

Updated on:Mar 12, 2023 | 8:24 PM

Share

ರಜನೀಕಾಂತ್ (Rajinikanth) ತಮ್ಮ ರಾಜಕೀಯ (Politics) ಮಹಾತ್ವಾಕಾಂಕ್ಷೆಯನ್ನು ಆರೋಗ್ಯ ಸಮಸ್ಯೆಯಿಂದಾಗಿ ಕೈಬಿಡಬೆಕಾಯಿತು. ರಾಜಕೀಯ ಪಕ್ಷ (Political Party) ಘೋಷಿಸಿದ್ದ ನಟ ರಜನೀಕಾಂತ್ ಆ ನಂತರ ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದರು. ತಮ್ಮ ರಾಜಕೀಯ ಪಕ್ಷವನ್ನು ಸಮಾಜ ಸೇವಾ ಸಂಸ್ಥೆಯನ್ನಾಗಿ ಬದಲಾವಣೆ ಮಾಡಿದರು. ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ರಜನೀಕಾಂತ್ ಪಾಲಿಗೆ ಬಹಳ ಕಠಿಣವಾಗಿತ್ತು, ಆದರೆ ಅವರು ಆ ನಿರ್ಧಾರ ಮಾಡಲು ಕಾರಣರಾದ ವ್ಯಕ್ತಿಯನ್ನು ರಜನಿ ಇದೀಗ ಹೆಸರಿಸಿದ್ದಾರೆ.

ರಜನೀಕಾಂತ್, ರಾಜಕೀಯ ಪ್ರವೇಶ ನಿರ್ಧಾರ ಕೈಬಿಡುವ ನಿರ್ಣಯಕ್ಕೆ ಬರಲು ಪ್ರಮುಖ ಕಾರಣ ಹಾಗೂ ರಾಜಕೀಯದಿಂದ ಹಿಂದೆ ಸರಿಯುವಂತೆ ರಜನೀಕಾಂತ್​ರ ಮನವೊಲಿಸಿದ್ದು ವೈದ್ಯ ರವಿಚಂದ್ರನ್. ಇತ್ತೀಚೆಗೆ ನಡೆದ ಸಾಪಿನ್ಸ್ ಹೆಲ್ತ್ ಫೌಂಡೇಶನ್​ನ ಬೆಳ್ಳಿಮಹೋತ್ಸವದಲ್ಲಿ ಮಾತನಾಡಿದ ರಜನೀಕಾಂತ್, ನಾನು ರಾಜಕೀಯದಿಂದ ದೂರ ಉಳಿಯುವಂತೆ ನನ್ನ ಮನಃಪರಿವರ್ತನೆ ಮಾಡಿದ್ದು ವೈದ್ಯ ರವಿಚಂದ್ರನ್ ಎಂದು ಹೇಳಿದ್ದಾರೆ.

”2010 ರಿಂದಲೂ ನನಗೆ ವೈದ್ಯ ರವಿಚಂದ್ರನ್ ಪರಿಚಯವಿದೆ. ನನಗೆ ಕಿಡ್ನಿ ಸಮಸ್ಯೆಯಾದಾಗ ಅವರು ನನಗೆ ಸಹಾಯ ಮಾಡಿದರು. ಕೋವಿಡ್ ಸಮಯದಲ್ಲಿ ಸಹ ಅವರು ನನಗೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ನೀಡಿದ್ದರು. ರಾಜಕೀಯಕ್ಕೆ ಬರಬೇಕೆಂದರೆ ಈ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದರು. ಅವರ ಎಚ್ಚರಿಕೆಗಳನ್ನು ಪಾಲಿಸಿ ಕೋವಿಡ್ ಅನ್ನು ದಾಟಿಕೊಂಡೆ” ಎಂದಿದ್ದಾರೆ.

ಆದರೆ ಅನಾರೋಗ್ಯದಿಂದ ರಾಜಕೀಯದಿಂದ ಹಿಂದೆ ಸರಿಯಲೇ ಬೇಕಾದ ಸಮಯ ಬಂದಾಗ ಆರೋಗ್ಯದ ಕಾರಣ ನೀಡಿ ರಾಜಕೀಯದಿಂದ ಹಿಂದೆ ಸರಿದರೆ, ”ರಜನೀ ತಾನು ನೀಡಿದ ಭರವಸೆಗಳನ್ನು ಪೂರೈಸಲಿಲ್ಲ, ಮಾತುಕೊಟ್ಟು ಹಿಂದೆ ಸರಿದ” ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ನಾನು ಅವರ ಬಳಿ ಬೇಸರ ತೋಡಿಕೊಂಡೆ. ಆಗ ಅವರು, ”ನಾನೇ ಬೇಕಾದರೆ ಪ್ರೆಸ್ ಮೀಟ್ ಮಾಡಿ ನಿಮ್ಮ ಆರೋಗ್ಯ ಸ್ಥಿತಿಯನ್ನು ವಿವರಿಸುತ್ತೇನೆ, ನಾನೇ ನಿಮ್ಮನ್ನು ಬಲವಂತ ಮಾಡಿದೆ ಎಂಬುದನ್ನು ಹೇಳುತ್ತೇನೆ” ಎಂದಿದ್ದರು ಎಂದು ರಜನೀಕಾಂತ್ ನೆನಪಿಸಿಕೊಂಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಹಾಜರಿದ್ದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ”ನಾನು ರಜನೀಕಾಂತ್​ಗೆ ಮೊದಲೇ ಸಲಹೆ ನೀಡಿದ್ದೆ. ಆರೋಗ್ಯವಾಗಿರಬೇಕೆಂದರೆ ರಾಜಕೀಯಕ್ಕೆ ಬರಬಾರದೆಂದು. ರಾಜಕೀಯಕ್ಕೆ ಬರದೇ ಸಮಾಜ ಸೇವೆ ಮಾಡುವ ಹಲವು ದಾರಿಗಳಿವೆ. ರಜನೀಕಾಂತ್​ಗೆ ಶಕ್ತಿಯಿದೆ, ಒಳ್ಳೆಯ ಮನಸ್ಸಿದೆ ರಾಜಕೀಯದ ಹೊರಗಿದ್ದೂ ಅವರು ಸಮಾಜ ಸೇವೆ ಮುಂದುವರೆಸಬೇಕು” ಎಂದಿದ್ದಾರೆ.

2017 ರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಘೋಷಿಸಿದ್ದ ರಜನೀಕಾಂತ್, 2021ರ ತಮಿಳುನಾಡು ಚುನಾವಣೆಗೆ ಸ್ಪರ್ಧಿಸಲು ಪಕ್ಷವನ್ನು ಸಜ್ಜು ಮಾಡುತ್ತಿದ್ದರು. ಇದಕ್ಕಾಗಿ ತಮಿಳುನಾಡು ರಾಜ್ಯ ಸುತ್ತಿ ಹಲವು ಸಭೆಗಳನ್ನು ಮಾಡಿದ್ದರು. ಪಕ್ಷದ ಹೆಸರು ಘೋಷಣೆಯೆಲ್ಲ ಮುಗಿದಿತ್ತು ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ಪಕ್ಷದ ಮೂಲಕ ಭಾರಿ ಸಭೆ ನಡೆಸಲು ತಯಾರಾಗಿದ್ದರು, ಆ ನಡುವೆ ಸಿನಿಮಾ ಒಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನೀಕಾಂತ್ ರ ಆರೋಗ್ಯದಲ್ಲಿ ಹಠಾತ್ ವ್ಯತ್ಯಾಸವಾಗಿ ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಕೆಲವು ದಿನಗಳ ಚಿಕಿತ್ಸೆ ಬಳಿಕ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಯ್ತು. ಆ ಬಳಿಕ ಅನಾರೋಗ್ಯದ ಕಾರಣ ನೀಡಿ ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದರು ರಜನೀಕಾಂತ್. ರಾಜಕೀಯ ಪಕ್ಷವನ್ನು ಸಮಾಜ ಸೇವಾ ಪಕ್ಷವನ್ನಾಗಿ ಬದಲಾಯಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Sun, 12 March 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?