AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ಕೊನೆಗಾಲದಲ್ಲಿ ಕಷ್ಟಕ್ಕೆ ಸಿಲುಕಿದ ಖ್ಯಾತ ನಿರ್ಮಾಪಕ, ರಜನೀಕಾಂತ್ ಸಹಾಯ

ತಮಿಳು ಚಿತ್ರರಂಗದ ಜನಪ್ರಿಯ ನಿರ್ಮಾಪಕ ವಿಎ ದೊರೈ ಕೊನೆಗಾಲದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ನಟ ರಜನೀಕಾಂತ್ ಸಹಾಯ ಹಸ್ತ ಚಾಚಿದ್ದಾರೆ.

Rajinikanth: ಕೊನೆಗಾಲದಲ್ಲಿ ಕಷ್ಟಕ್ಕೆ ಸಿಲುಕಿದ ಖ್ಯಾತ ನಿರ್ಮಾಪಕ, ರಜನೀಕಾಂತ್ ಸಹಾಯ
ದೊರೈಗೆ ರಜನಿ ಸಹಾಯ
ಮಂಜುನಾಥ ಸಿ.
|

Updated on:Mar 09, 2023 | 10:12 PM

Share

ದಶಕದ ಹಿಂದೆಯಷ್ಟೆ ತಮಿಳು ಚಿತ್ರರಂಗದ (Kollywood) ಟಾಪ್ ನಿರ್ಮಾಪಕರಲ್ಲಿ ಒಬ್ಬರೆಂದು ಹೆಸರು ಮಾಡಿದ್ದ ವಿಎ ದೊರೈ (VA Durai) ಇಂದು ಹೀನಾಯ ಸ್ಥಿತಿ ತಲುಪಿದ್ದು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಅವರು ನಿರ್ಮಿಸಿದ ಸಿನಿಮಾಗಳ ನಾಯಕರು ಅವರ ಕೈ ಹಿಡಿದಿದ್ದು, ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ.

ಬ್ಲಾಕ್ ಬಸ್ಟರ್ ಸಿನಿಮಾ ಪಿತಾಮಗನ್ ಸೇರಿದಂತೆ ತಮಿಳಿನಲ್ಲಿ ಇನ್ನೂ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಜೊತೆಗೆ ನಿರ್ಮಾಪಕರಿಗೆ ಫೈನ್ಯಾನ್ಸ್ ಸಹ ಒದಗಿಸುತ್ತಿದ್ದ, ಸಿನಿಮಾ ವಿತರಣೆ ಮಾಡುತ್ತಿದ್ದ ವಿಎ ದೊರೈ ಸಂಕಷ್ಟದಲ್ಲಿದ್ದು, ತಮಿಳುನಾಡಿನ ಸಾಲಿಗ್ರಾಮ ಎಂಬಂಲ್ಲಿ ತಮ್ಮ ಗೆಳೆಯನ ಮನೆಯಲ್ಲಿ ವಾಸವಿದ್ದಾರೆ.

ಅವರ ಗೆಳೆಯ ಇತ್ತೀಚೆಗೆ ದೊರೈ ಅವರ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ತಾವು ಖಾಯಿಲೆಯಿಂದ ಬಳಲುತ್ತಿದ್ದು, ಕಾಲಿನಲ್ಲಿ ತೀವ್ರತರವಾದ ಗಾಯವುಂಟಾಗಿರುವುದರಿಂದ ನಡೆಯಲು ಸಹ ಕಷ್ಟವಾಗುತ್ತಿದೆ ತಮಗೆ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದ್ದರು.

ನಿರ್ಮಾಪಕನ ಮನವಿಗೆ ಸ್ಪಂದಿಸಿದ ನಟ ಸೂರ್ಯ ಚಿಕಿತ್ಸೆಗಾಗಿ ಎರಡು ಲಕ್ಷ ರುಪಾಯಿ ಹಣವನ್ನು ಸಹಾಯವಾಗಿ ನೀಡಿದ್ದರು. ಇದೀಗ ನಟ ರಜನೀಕಾಂತ್ ಸಹ ದೊರೈ ಅವರ ಚಿಕಿತ್ಸೆಗೆ ಹಣ ನೀಡುವ ಜೊತೆಗೆ ಆರ್ಥಿಕ ಸಹಾಯ ನೀಡುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ, ಜೈಲರ್ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್ ಮುಗಿದ ಬಳಿಕ ಬಂದು ಭೇಟಿಯಾಗುವ ಭರವಸೆಯನ್ನು ರಜನೀಕಾಂತ್ ನೀಡಿದ್ದಾರೆ.

ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಜೊತೆ ಸೇರಿ ಎವರ್​ಗ್ರೀನ್ ಹೆಸರಿನ ನಿರ್ಮಾಣ ಸಂಸ್ಥೆ ಕಟ್ಟಿದ್ದ ದೊರೈ ಹಲವು ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದರು. ಅವರು ನಿರ್ಮಿಸಿದ್ದ ಪಿತಾಮಗನ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರಾದ ಸೂರ್ಯ ಹಾಗೂ ವಿಕ್ರಂ ನಟಿಸಿದ್ದರು. ರಜನೀಕಾಂತ್​ರ ಬಾಬಾ ಸಿನಿಮಾಕ್ಕೆ ದೊರೈ ಫೈನ್ಯಾನ್ಸ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ರಜನೀಕಾಂತ್​ ಜೊತೆಗೆ ಮೊದಲಿನಿಂದಲೂ ದೊರೈ ಆಪ್ತ ಬಂಧವನ್ನು ಹೊಂದಿದ್ದರು. ಇದೇ ಕಾರಣಕ್ಕೆ ಈಗ ರಜನೀಕಾಂತ್ ದೊರೈ ಸಹಾಯಕ್ಕೆ ಧಾವಿಸಿದ್ದಾರೆ.

ದೊರೈ ಈ ಹಿಂದೆ ತಮಿಳಿನ ಜನಪ್ರಿಯ ನಿರ್ದೇಶಕ ಬಾಲಾಗೆ ಅಡ್ವಾನ್ಸ್ ಆಗಿ 25 ಲಕ್ಷ ಹಣ ನೀಡಿದ್ದರಂತೆ. ಆದರೆ ಬಾಲಾ ಸಿನಿಮಾ ನಿರ್ದೇಶಿಸಿ ಕೊಡಲಿಲ್ಲ. ಆ ಘಟನೆ ಆಗಿ ಒಂದು ದಶಕದ ಬಳಿಕ ದೊರೈ ಅವರ ಆರ್ಥಿಕ ಸ್ಥಿತಿ ಕುಂಟಿತವಾಗುತ್ತಾ ಸಾಗಿದಾಗ, ಬಾಲಾ ಕಚೇರಿ ಮುಂದೆ ದೊರೈ ಪ್ರತಿಭಟನೆ ನಡೆಸಿದ್ದರು. ಆದರೆ ಆಗಲೂ ಬಾಲಾ ಹಣ ವಾಪಸ್ ನೀಡಲಿಲ್ಲ. ಈಗ ಧುರಾನಿ ಪರಿಸ್ಥಿತಿ ಹೀನಾಯವಾಗಿದ್ದು, ಈಗಲಾದರು ಬಾಲಾ ಹಣ ಮರಳಿಸುತ್ತಾರೆಯೇ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Thu, 9 March 23

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ