Arsikere Election 2023 Winner: ಅರಸೀಕೆರೆಯಲ್ಲಿ ಜೆಡಿಎಸ್​ನಿಂದ ಕಾಂಗ್ರೆಸ್ ಹೋಗಿಯೂ ಗೆಲುವು ಕಂಡ ಕೆಎಂ ಶಿವಲಿಂಗೇಗೌಡ

|

Updated on: May 13, 2023 | 1:31 PM

KM Shivalinge Gowda Wins: ರಾಜ್ಯ ವಿಧಾನಸಭಾ ಚುನಾವಣೆ 2023 ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್​ನ ಕೆ.ಎಂ. ಶಿವಲಿಂಗೇಗೌಡರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪರ ಮಾಜಿ ರಾಜಕೀಯ ಕಾರ್ಯದರ್ಶಿ ಹಾಗು ಜೆಡಿಎಸ್ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ಎನ್.ಆರ್. ಸಂತೋಷ್ ಅವರನ್ನು ಶಿವಲಿಂಗೇಗೌಡರು ಸೋಲಿಸಿದ್ದಾರೆ.

Arsikere Election 2023 Winner: ಅರಸೀಕೆರೆಯಲ್ಲಿ ಜೆಡಿಎಸ್​ನಿಂದ ಕಾಂಗ್ರೆಸ್ ಹೋಗಿಯೂ ಗೆಲುವು ಕಂಡ ಕೆಎಂ ಶಿವಲಿಂಗೇಗೌಡ
ಕೆಎಂ ಶಿವಲಿಂಗೇಗೌಡ
Follow us on

Arsikere Assembly Election Result 2023: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Assembly Elections 2023 Results) ಇಂದು ಪ್ರಕಟವಾಗಿದ್ದು ಕಾಂಗ್ರೆಸ್ ಬಹುಮತ ಸಾಧಿಸಿದೆ. ಈ ಚುನಾವಣೆಯಲ್ಲಿ, ಕುತೂಹಲ ಮೂಡಿಸಿದ ಕ್ಷೇತ್ರಗಳಲ್ಲಿ ಅರಸೀಕೆರೆಯೂ (Arsikere Constituency) ಒಂದು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಂ ಶಿವಲಿಂಗೇಗೌಡರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್​ನಿಂದ ಕಾಂಗ್ರೆಸ್​ಗೆ ವಲಸೆ ಹೋಗಿದ್ದ ಶಿವಲಿಂಗೇಗೌಡರು ಹೆಚ್ಚೂಕಡಿಮೆ 20 ಸಾವಿರ ಮತಗಳ ಭಾರೀ ಅಂತರದಿಂದ ಗೆಲುವು ಪಡೆದಿದ್ದಾರೆ. ಯಡಿಯೂರಪ್ಪರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕೆಎಂ ಶಿವಲಿಂಗೇಗೌಡರನ್ನು ಸೋಲಿಸುವ ಪ್ರಯತ್ನ ವಿಫಲವಾಗಿದೆ.

ಕೆಎಂ ಶಿವಲಿಂಗೇಗೌಡರು 92 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಜೆಡಿಎಸ್​ನ ಎನ್ ಆರ್ ಸಂತೋಷ್ ಕೇವಲ 73 ಸಾವಿರ ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಬಿಜೆಪಿಯ ಜಿ.ವಿ.ಟಿ. ಬಸವರಾಜು ಮೂರನೇ ಸ್ಥಾನಕ್ಕೆ ಬಂದರಾದರೂ ಠೇವಣಿ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರ ಚುನಾವಣೆ 2023 ಫಲಿತಾಂಶ ವಿವರ

  • ಕಾಂಗ್ರೆಸ್: ಕೆ.ಎಂ. ಶಿವಲಿಂಗೇಗೌಡ– 97,099 ಮತಗಳು
  • ಜೆಡಿಎಸ್: ಎನ್.ಆರ್. ಸಂತೋಷ್– 77,006 ಮತಗಳು
  • ಬಿಜೆಪಿ: ಜಿ.ವಿ.ಟಿ. ಬಸವರಾಜು– 6,456 ಮತಗಳು

ಅರಸೀಕೆರೆ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿ ಬೇರೆ ಸಮುದಾಯದವರು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವಂಥ ಕಾಲ ಇತ್ತು. 1994ರಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಾರನಹಳ್ಳಿ ರಾಮಸ್ವಾಮಿ ಅವರನ್ನು ಜೆಡಿಎಸ್​ನ ಜಿಎಸ್ ಪರಮೇಶ್ವರಪ್ಪ ಸೋಲಿಸಿ ಅಚ್ಚರಿ ಮೂಡಿಸಿದ್ದರು. ಒಕ್ಕಲಿಗ ಸಮುದಾಯದ ಕೆಎಂ ಶಿವಲಿಂಗೇಗೌಡರು 2008ರಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದರೂ ಶಿವಲಿಂಗೇಗೌಡರು ಗೆಲುವಿನ ದಡ ತಲುಪಿದ್ದಾರೆ

ಎನ್ ಆರ್ ಸಂತೋಷ್ ಅವರು ಯಡಿಯೂರಪ್ಪರ ಮಾಜಿ ರಾಜಕೀಯ ಕಾರ್ಯದರ್ಶಿ ಆಗಿದ್ದಷ್ಟೇ ಅಲ್ಲ, ಅವರ ಸಂಬಂಧಿಯೂ ಹೌದು. ಲಿಂಗಾಯತ ಸಮುದಾಯಕ್ಕೆ ಸೇರಿದ ಸಂತೋಷ್ ಅವರಿಗೆ ಕ್ಷೇತ್ರದ ವೀರಶೈವ ಲಿಂಗಾಯತ ಮತದಾರರು ಕೈಹಿಡಿಯುವ ನಿರೀಕ್ಷೆ ಇತ್ತು. ಆದರೆ, ಆದರೆ ಶಿವಲಿಂಗೇಗೌಡರ ಎದುರು ಅವರ ನಿರೀಕ್ಷೆ ಹುಸಿಯಾಗಿದೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ