ಬಂಟ್ವಾಳ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ (Bantwala Assembly Constituency) ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಟ್ ನಡೆದಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಎರಡನೇ ಬಾರಿಗೆ ವಿಜಯ ಸಾಧಿಸಿದ್ದಾರೆ. ಬಂಟ್ವಾಳ ಸೂಕ್ಷ್ಮ ಪ್ರದೇಶವಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜೇಶ್ ನಾಯಕ್ ಭಾರೀ ಮತಗಳಿಂದ ವಿಜಯ ಸಾಧಿಸಿದರು. ಇದೀಗ ಮತ್ತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಮಾನಾಥ್ ರೈ ಅವರನ್ನು ಸೋಲಿಸಿ ವಿಜಯ ಸಾಧಿಸಿದರು, ಇದೀಗ ರಮಾನಾಥ್ ರೈ ಅವರನ್ನು ಸೋಲಿ ವಿಜಯ ಸಾಧಿಸಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ವಿಜಯಲಕ್ಷ್ಮೀ ಒಳಿಯಲಿದ್ದಾಳೆ. ರಾಜೇಶ್ ನಾಯಕ್ 2013ರಲ್ಲಿ ರಮಾನಾಥ್ ರೈ ಮುಂದೆ ಸೋತಿದ್ದರು. ನಂತರ 2018ರಲ್ಲಿ ಬಿಜೆಪಿಯಿಂದ ಗೆದ್ದರು. ರಾಜೇಶ್ ನಾಯಕ್ ಒಬ್ಬ ಕೃಷಿಕರಾಗಿ ಕೆಲಸ ಮಾಡಿದರವರು ಹಾಗೂ ತಮ್ಮ ಕೃಷಿಯಿಂದಲ್ಲೇ ದೇಶದ್ಯಾಂತ ಅನೇಕರಿಗೆ ಚಿರಪರಿಚಿತರು. ಇದರ ಜತೆಗೆ ಧಾರ್ಮಿಕ ಕ್ಷೇತ್ರದಲ್ಲೂ ಹೆಚ್ಚು ಪ್ರಚಲಿತದಲ್ಲಿದ್ದವರು, ಇದೀಗ ಗೆದ್ದು ರಮಾನಾಥ ರೈ ಮುಂದೆ ತೊಡೆತಟ್ಟಿದ್ದಾರೆ. ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಮತ್ತು ರಮಾನಾಥ್ ರೈ ನಡುವೆ ಬಹಳ ಜಿದ್ದಾಜಿದ್ದಿ ನಡೆದಿದ್ದು. 2018ರ ಚುನಾವಣೆಯಲ್ಲಿ ಹಿಂದುತ್ವ ಮತ್ತು ಅನೇಕ ಹತ್ಯೆ ಪ್ರಕರಣದಿಂದ ಯಾರು ಗೆಲ್ಲುತ್ತಾರೆ ಎಂಬ ಗೊಂದಲ ಇತ್ತು, ಆದರೆ ಈ ಬಾರಿಯು ಆ ರೀತಿಯ ಗೊಂದಲ ಇರಲಿಲ್ಲ. ಆದರೆ ರಾಜೇಶ್ ನಾಯಕ್ ಪರ-ವಿರೋಧ ಅಲೆ ಎರಡು ಇದ್ದರು. ಬಂಟ್ವಾಳದ ಜನ ಮತ್ತೆ ಗೆಲ್ಲಿಸಿದ್ದಾರೆ.
ಇನ್ನೂ ರಾಜೇಶ್ ನಾಯಕ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ರಮಾನಾಥ್ ರೈ, ಆದರೆ ಈ ಬಾರಿ ಅವರು ಸೋತಿದ್ದಾರೆ. 2013ರ ಚುನಾವಣೆಯಲ್ಲಿ ರಾಜೇಶ್ ನಾಯಕ್ ಮುಂದೆ ಭಾರೀ ಅಂತರದಿಂದ ಗೆಲ್ಲುವು ಸಾಧಿಸಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು, ಇದರ ಜತೆಗೆ ಬಂಟ್ವಾಳದ ಅನೇಕ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು. 2018ರಲ್ಲಿ ಶರತ್ ಮಡಿವಾಳ ಹತ್ಯೆ, ಆಶ್ರಫ್ ಹತ್ಯೆಗಳಿಂದ ಇವರ ವಿರುದ್ಧ ಅಕ್ರೋಶಗಳು ಕೇಳಿ ಬಂದಿತ್ತು. ಈ ಕಾರಣದಿಂದಲ್ಲೇ ಅಂದಿನ ಚುನಾವಣೆಯಲ್ಲಿ ರಮಾನಾಥ್ ಸೋಲಿಗೆ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ಇದೀಗ ಮತ್ತೆ ಬಂಟ್ವಾಳ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ.
ಇದನ್ನೂ ಓದಿ: Kapu Election 2023 Winner: ಭರ್ಜರಿ ಗೆಲುವು ಸಾಧಿಸಿದ ಗುರ್ಮೆ ಸುರೇಶ್ ಶೆಟ್ಟಿ
ಇನ್ನೂ ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಮತ್ತು ರಮಾನಾಥ್ ರೈ ವಿರುದ್ಧ ಜೆಡಿಎಸ್ನಿಂದ ಪ್ರಕಾಶ್ ರಫಾಯಲ್ ಗೊಮ್ಸ್ ಸ್ಪರ್ಧಿಸಿ ಸೋತಿದ್ದಾರೆ. ಇದೀಗ ಈ ಸೂಕ್ಷ್ಮ ಪ್ರದೇಶ ಬಂಟ್ವಾಳದಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪ್ರತಿಸ್ಪರ್ಧೆಯ ನಡುವೆ ಬಿಜೆಪಿ ಭಾರೀ ಗೆಲುವು ಸಾಧಿಸಿದೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ