ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು(Karnataka Assembly Elections 2023 Result)ಇಡೀ ರಾಜ್ಯದ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ. ಇಂದು ರಾಜಕೀಯ ನಾಯಕರ ಭವಿಷ್ಯ ಹೊರ ಬೀಳಲಿದ್ದು ಘಟಾನುಘಟಿ ನಾಯಕರು ದೇವರ ಮೊರೆ ಹೋಗಿದ್ದಾರೆ. ಬೆಳ್ಳಂ ಬೆಳಗ್ಗೆಯೇ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿಯವರು(Basavaraj Bommai) ಕೂಡ ಹುಬ್ಬಳ್ಳಿಯ ವಿಜಯನಗರದಲ್ಲಿರೋ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಶಿಗ್ಗಾಂವಿಗೆ ತೆರಳೋ ಮುನ್ನ ಆಂಜನೇಯನ ದರ್ಶನ ಮಾಡಿದ್ದಾರೆ.
ಇನ್ನು ಮಾಧ್ಯಮಗಳಿಗೆ ಪ್ರಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಇವತ್ತು ಕರ್ನಾಟಕ ವಿಧಾನ ಸಭೆಯ ಫಲಿತಾಂಶದ ದಿನ. ಈ ಫಲಿತಾಂಶ ಬಹಳಷ್ಟು ಮುಖ್ಯ. ರಾಜ್ಯ, ಅಭಿವೃದ್ಧಿ, ಜನರ, ರಾಜಕೀಯ ದೃಷ್ಟಿಯಿಂದ ಬಹಳಷ್ಟು ಮುಖ್ಯ. ಮುಂದಿನ ಐದು ವರ್ಷದ ರಾಜ್ಯ ಅಭಿವೃದ್ಧಿ ಮತ್ತು ಸುರಕ್ಷಿತವಾಗಿ ನಾಡು ಮಾಡುವ ನಿಟ್ಟಿನಲ್ಲಿ ಜನ ಮತ ನೀಡಿದ್ದಾರೆಂಬ ನಂಬಿಕೆಯಿದೆ. ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯಸಾಧಿಸಲಿದೆ ಎಂಬ ವಿಶ್ವಾಸವಿದೆ.
ಜನ ಶಾಂತಿಯುತ ಮತದಾನ ಮಾಡಿದ್ದಾರೆ. ಶಾಂತಿಯುತ ಮತದಾನ ಮಾಡಿದ್ದಕ್ಕೆ ಕೃತಜ್ಞತೆ. ಅದೇ ರೀತಿ ಮತ ಎಣಿಕೆಯಲ್ಲಿ ಸಹ ಎಲ್ಲರೂ ಶಾಂತಿಯುತವಾಗಿ ವರ್ತನೆ ಮಾಡಬೇಕು. ಕೆಲವೇ ತಾಸುಗಳಲ್ಲಿ ಹಲವಾರು ಟ್ರೆಂಡ್ ಗಳು ಹೊರ ಬರುತ್ತವೆ. ಅಂಕಿ ಅಂಶಗಳು ಸಹ ಹೊರ ಬರುತ್ತವೆ. ಇದರ ಆಧಾರದ ಮೇಲೆ ಅಧಿಕಾರ ನಿರ್ಧಾರವಾಗುತ್ತದೆ. ಆದರೆ ನಮ್ಮ ಪಕ್ಷ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ. ಜೆಡಿಎಸ್ ನವರು ಯಾರು ಸಂಪರ್ಕದಲ್ಲಿ ಇಲ್ಲ ಎಂದ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
Published On - 9:16 am, Sat, 13 May 23