ಬಸವರಾಜ ಬೊಮ್ಮಾಯಿ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ: ಸಿಎಂ ಬೊಮ್ಮಾಯಿ

|

Updated on: Apr 24, 2023 | 4:42 PM

ಸವರಾಜ ಬೊಮ್ಮಾಯಿ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಬರೀ ಘೋಷಣೆ ಭರವಸೆ ಅಲ್ಲ, ಅನುಷ್ಠಾನ ಕೂಡ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಕ್ಷೇತ್ರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ರಕ್ಷಣೆ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ: ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಹಾವೇರಿ: ಬಸವರಾಜ ಬೊಮ್ಮಾಯಿ (Basavaraj Bommai) ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಬರೀ ಘೋಷಣೆ ಭರವಸೆ ಅಲ್ಲ, ಅನುಷ್ಠಾನ ಕೂಡ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ಕ್ಷೇತ್ರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ರಕ್ಷಣೆ ಮಾಡಿದ್ದಾರೆ. ಸ್ವಚ್ಛ ಭಾರತ್​​ ಯೋಜನೆಯಡಿ 14 ಲಕ್ಷ ರೂ. ಶೌಚಾಲಯ ನಿರ್ಮಾಣ ಮಾಡಲಾಗಿದೆ. ರೈತರು ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಿದ್ದೇವೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದು ನಾವು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕ ನಿರ್ಲಕ್ಷ ಮಾಡಿದರು ಎಂದು ವಾಗ್ದಾಳಿ ಮಾಡಿದರು.

ದೇಶ, ಸಮಾಜ ಒಡೆದವರು ಕಾಂಗ್ರೆಸ್​ನವರು

ಉತ್ತರ ಕರ್ನಾಟಕ ಅಂದರೆ ಜಿಲೇಬಿ ಅಂತಾ ಇದ್ದರು, ಜಿಲೆಬಿ ಅಂದರೆ ಗೌಡ್ರು, ಲಿಂಗಾಯತರು, ಬ್ರಾಹ್ಮಣರು,
ರಾಹುಲ್ ಗಾಂಧಿಗೆ ಬಸವಣ್ಣ ಅಂದರೂ ಗೊತ್ತಿಲ್ಲ, ಕೂಡಲ ಸಂಗಮನೂ ಗೊತ್ತಿಲ್ಲ. ಇವನ್ಯಾರವ ಇವನ್ಯಾರವ ಅನ್ನೋದು‌ ಬಿಟ್ಟು ಏನು ಅಂದಿದ್ದ ರಾಹುಲ್ ಗಾಂಧಿ? ಇಂಥವರನ್ನು ಕಟ್ಟಿಕೊಂಡು ಬಸವಣ್ಣನ ಬಗ್ಗೆ ಮಾತಾಡೋದು ಕೇಳಬೇಕಾ ಎಂದು ಪ್ರಶ್ನಿಸಿದರು. ಒಡೆದು ಆಳುವ ಬ್ರಿಟೀಷರ ನೀತಿ ಕಾಂಗ್ರೆಸ್​ನದ್ದು. ದೇಶ ಒಡೆದವರು ಕಾಂಗ್ರೆಸ್​ನವರು. ಸಮಾಜ ಒಡೆದವರು ಕಾಂಗ್ರೆಸ್​ನವರು ಎಂದು ಕಿಡಿಕಾರಿದರು.

ಇದನ್ನೂ ಓದಿ: Chamarajanagar: ಯಾರ ಮೀಸಲಾತಿ ಕಡಿಮೆ ಮಾಡುತ್ತೀರಿ; ಡಿಕೆ ಶಿವಕುಮಾರ್​ಗೆ ಅಮಿತ್ ಶಾ ಪ್ರಶ್ನೆ

2023ರ ಚುನಾವಣೆಯಲ್ಲಿ ಬಿಜೆಪಿಯ ಸುನಾಮಿ ಇದೆ. ಇಂದು ರಾಣೇಬೆನ್ನೂರಿನಲ್ಲಿ 24*7 ಕುಡಿಯುವ ನೀರಿನ‌ ವ್ಯವಸ್ಥೆ ಮಾಡಲಾಗಿದೆ. ರಾಣೇಬೆನ್ನೂರ ಪಟ್ಟಣದ ಪ್ರತಿ ವಾರ್ಡ್​ಗೆ 24*7 ನೀರು ಕೊಡುವುದಾಗಿ ಹೇಳಿದ್ದೇವೆ. ನುಡಿದಂತೆ ನಮ್ಮ ಸರ್ಕಾರ ನಡೆದಿದೆ ಎಂದು ಹೇಳುತ್ತೇನೆ. ನಾವು ಏನು ಮಾತು ಕೊಟ್ಟದೆವು ಅದನ್ನು ಪೂರೈಸಿರುವ ಸರ್ಕಾರ ಬಿಜೆಪಿ ಸರ್ಕಾರ ಎಂದರು.

ಅಭಿವೃದ್ಧಿ ಮಾಡಿದ್ದು ಡಬಲ್ ಇಂಜಿನ್ ಸರ್ಕಾರ

30 ಸಾವಿರ ಲೀಡ್​ನಿಂದ ಅರುಣಕುಮಾರ ಗೆಲ್ಲುತ್ತಾರೆ. ನಾನು ಎಲ್ಲಿ ಹೋದರು ಅಪರೂಪದ ಜನ ಬೆಂಬಲ ಸಿಗುತ್ತಿದೆ. ರಾಣೇಬೆನ್ನೂರಿಗೆ 24/7 ಕುಡಿಯೊ ನೀರಿನ ವ್ಯವಸ್ಥೆ ಆಗಿದೆ. ಇದಕ್ಕೆ ಯಡಿಯೂರಪ್ಪನವರ ಸರ್ಕಾರ ಹಾಗೂ ಯುವ ಮಿತ್ರ ಅರುಣಕುಮಾರ ಪೂಜಾರ್ ಕೆಲಸ ಮಾಡಿದ್ದಾರೆ. ಇಲ್ಲಿಯ ಅಭಿವೃದ್ಧಿ ಮಾಡಿದ್ದು ಡಬಲ್ ಇಂಜಿನ್ ಸರ್ಕಾರ. ವಚನ ಕೊಟ್ಟಂತೆ ನಡೆದುಕೊಂಡಿದ್ದು ಬಿಜೆಪಿ ಸರ್ಕಾರ ಎಂದರು.

ಇದನ್ನೂ ಓದಿ: ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಗರಂ

ಗ್ಯಾರಂಟಿ ಆಮೇಲೆ ಗಳಗಂಟೆ

ಕಾಂಗ್ರೆಸ್ ಸುಳ್ಳು ಭರವಸೆ ಕೊಡುವ ಪಕ್ಷ. ಕಾಂಗ್ರೆಸ್ ಸರ್ಕಾರ ಒಂದು ದೌರ್ಭಾಗ್ಯ. ಅದಕ್ಕೆ 2018ರಲ್ಲಿ ಮನೆಗೆ ಕಳುಹಿಸಿದ್ದಾರೆ. ಈಗ ಹೊಸದಾಗಿ ಅಡ್ಡಸೋಗು ತಕ್ಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್​ನ ಪ್ರಣಾಳಿಕೆಯ ಬಗ್ಗೆ ಸಿಎಂ ಲೇವಡಿ ಮಾಡಿದರು. ಮೋಸ ಮಾಡುವಂತದ್ದು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್ ಅಂತಾ ಬಂದಿದೆ. ಅದು ಬೋಗಸ್ ಕಾರ್ಡ್ ಉಪ್ಪಿನಕಾಯಿ ಹಾಕಬಹುದು ಅಷ್ಟೇ. ಚುನಾವಣೆ ಆಗುವವರೆಗೂ ಗ್ಯಾರಂಟಿ ಆಮೇಲೆ ಗಳಗಂಟೆ ಎಂದು ವ್ಯಂಗ್ಯವಾಡಿದರು.

ಜನರಿಗೆ ಇವರ ಮೇಲೆ ಭರವಸೆ ಇಲ್ಲ

ಆ ಭಾಗ್ಯ ಈ ಭಾಗ್ಯ ಅಂತಾ ಹೇಳಿದರು. ಯಾವ ಭಾಗ್ಯನು ಜನರಿಗೆ ಮುಟ್ಟಲಿಲ್ಲ. ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆ ಅಂತಾ ಕೈ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿಯವರ 30 ರೂಪಾಯಿ ಕೆ‌.ಜಿ ಅಕ್ಕಿ. ಸಿದ್ದರಾಮಯ್ಯದು 3 ರೂಪಾಯಿ ಗೋಣಿ ಚೀಲ. ಅನ್ನ ಭಾಗ್ಯ ನಮ್ದು ಅಂತಾ ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಇವರ ಮೇಲೆ ಭರವಸೆ ಇಲ್ಲ. ಅದಕ್ಕೆ ಇವರು ಗ್ಯಾರಂಟಿ ಕಾರ್ಡ್ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Mon, 24 April 23