ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ, ಏ.8ಕ್ಕೆ ಅಂತಿಮ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ

|

Updated on: Apr 04, 2023 | 10:41 AM

ಟಿಕೆಟ್​ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆ ಆಗಿದೆ. ಇಂದು, ನಾಳೆ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏ.8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ, ಏ.8ಕ್ಕೆ ಅಂತಿಮ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆ ಟಿಕೆಟ್​ ಹಂಚಿಕೆ ವಿಚಾರವಾಗಿ ಕಳೆದ 2-3 ದಿನಗಳಿಂದ ಬಿಜೆಪಿಯಲ್ಲಿ (BJP) ಕಸರತ್ತು ನಡೆದಿದ್ದು, 2 ದಿನದ ಸಭೆ ಅಂತ್ಯವಾಗಿದೆ. ಇಂದು (ಏ.04) ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಮೀಟಿಂಗ್​ನಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಕೈ ಸೇರಿ, ಅಲ್ಲಿಂದ ಅಧಿಕೃತ ಪಟ್ಟಿ ಹೊರಬೀಳಲಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಮಾತನಾಡಿ, ಟಿಕೆಟ್​ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆ ಆಗಿದೆ. ಇಂದು, ನಾಳೆ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏ.8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಲವು ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಉತ್ಸಾಹದಲ್ಲಿ ಇದ್ದಾರೆ. ಕಳೆದ 3-4 ತಿಂಗಳ ಬೆಳವಣಿಗೆ ಗಮನಿಸಿದರೆ ನಮಗೆ ಬಹುಮತ ಬರಲಿದೆ. ಕೆಲವು ಕ್ಷೇತ್ರಗಳಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ. ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಆತ್ಮವಿಶ್ವಾಸದಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಡಿಕೆ ಶಿವಕುಮಾರ್​ಗೆ ಎದುರಾಯ್ತು ಸಂಕಷ್ಟ!

ಅಚ್ಚರಿ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದು ಗ್ಯಾರೆಂಟಿ

ಟಿಕೆಟ್ ಕೊಡುವಾಗಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‌ನೀಡಲಾಗುತ್ತೆ. ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟ, ರಾಜ್ಯ ಮಟ್ಟದಿಂದ ಮಾಹಿತಿ ಪಡೆದು ಗ್ರೌಂಡ್ ರಿಯಾಲಿಟಿ ಮೇಲೆ ಪಟ್ಟಿ ಮಾಡಲಾಗುತ್ತಿದೆ. ಟಿಕೆಟ್ ಹಂಚಿಕೆ ಸರಳವಾಗಿ ಆಗುತ್ತೆ. ಈ ಬಾರಿಯ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳು ಕಣಕ್ಕೆ ಇಳಿಯುವುದು ಗ್ಯಾರೆಂಟಿ. ಹಲವು ಕಡೆ ಹೊಸ ಪ್ರಯೋಗ ಆಗುತ್ತೆ. ಬೇರೆ ಬೇರೆ ಕಡೆ ಇದು ಯಶಸ್ವಿಯಾಗಿದೆ. ರಾಜ್ಯದಲ್ಲೂ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದರು.

ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಯಕೆ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್​ನವರಿಗೆ ಜನರ ಅಭಿವೃದ್ಧಿ ಬೇಕಿಲ್ಲ. ಅಧಿಕಾರ, ಸಿಎಂ ಆಗುವುದೇ ಕಾಂಗ್ರೆಸ್​​ನವರ ಗುರಿಯಾಗಿದೆ. ಜನರ ಬೆಂಬಲ ಇದ್ದರೆ ಸಿಎಂ ಆಗುತ್ತಾರೆ. ಅದು ಗೊತ್ತಿರುವ ವಿಚಾರ ಎಂದು ವಾಗ್ದಾಳಿ ಮಾಡಿದರು.

ಆಯನೂರು ಮಂಜುನಾಥ್​ ಬಂಡಾಯ, ಶಾಸಕರು ಪಕ್ಷ ಬಿಟ್ಟು ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು 125 ಶಾಸಕರು ಈಗ ಇದ್ದಾರೆ. ಅದರಲ್ಲಿ ಕೆಲವು ಕಡೆ ಇಬ್ಬರು ಆಕಾಂಕ್ಷಿಗಳು ಇದ್ದಾರೆ. ಅಲ್ಲಿ ಸೀಟು ಸಿಗೊಲ್ಲ ಅಂತ ಕೆಲವರು ಬಿಟ್ಟು ಹೋಗಿದ್ದಾರೆ ಅಷ್ಟೆ. ಇದರಿಂದ ಬಿಜೆಪಿಯ ಚುನಾವಣೆ ಮೇಲೆ ಯಾವುದೇ ಎಫೆಕ್ಟ್ ಆಗೊದಿಲ್ಲ. ಬಿಜೆಪಿಯಿಂದ ಮತ್ತೆ ಯಾರು ಹೋಗಲ್ಲ. ಸುಮ್ಮನೆ ಡಿಕೆ ಶಿವಕುಮಾರ್ ಹೆಸರುಗಳನ್ನು ಬಿಡುತ್ತಿದ್ದಾರೆ ಅಷ್ಟೆ ಎಂದು ಕಿಡಿಕಾರಿದರು.

ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿ, ರಾಜ್ಯ ಚುನಾವಣಾ ಸಮಿತಿಯಿಂದ ಸಂಭಾವ್ಯ ಪಟ್ಟಿ ಕೇಂದ್ರದ ಕೈ ಸೇರುತ್ತಿದ್ದಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಏಪ್ರಿಲ್ 7 ಮತ್ತು 8 ರಂದು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಜ್ಯದ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ