ಶಿವಮೊಗ್ಗ: ವಿಧಾನಸಭೆ ಚುನಾವಣೆ (Karnataka Assembly Elections 2023) ಹತ್ತಿರವಾಗುತ್ತಿದ್ದಂತೆಯೇ ಶಕ್ತಿ ಕೇಂದ್ರ ಶಿವಮೊಗ್ಗ(Shivamogga) ಕ್ಷೇತ್ರದಲ್ಲೇ ಬಿಜೆಪಿ ನಾಯಕರ ಮಧ್ಯೆಯೇ ಟಿಕೆಟ್ ಫೈಟ್ ಶುರುವಾಗಿದೆ. ಮಾಜಿ ಸಚಿವ, ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ (KS EshwarappaP ಹಾಗೂ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್(ayanur manjunath) ನಡುವೆ ಶಿವಮೊಗ್ಗ ಟಿಕೆಟ್ಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆಯನೂರು ಮಮಜುನಾಥ್, ಈಶ್ವರಪ್ಪ ವಿರುದ್ಧ ಫ್ಲೆಕ್ಸ್ ವಾರ್ ಶುರು ಮಾಡಿದ್ದಾರೆ. ಹೌದು… ನಗರ ತುಂಬೆಲ್ಲ ಸೌಹಾರ್ದತೆ ಸಂದೇಶ ಮತ್ತು ಕೋಮುವಾದಿಗಳಿಗೆ ಟೀಕಿಸಿರುವ ಆಯನೂರು ಮಂಜುನಾಥ್ ಫ್ಲೆಕ್ಸ್ಗಳು ರಾರಾಜಿಸುತ್ತಿವೆ. ಈ ಮೂಲಕ ಹೆಸರು ಹೇಳದೆ ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಆಯನೂರು ಮಂಜುನಾಥ್ ಭಾವೈಕ್ಯತೆಯ ಬ್ಯಾನರ್ಗಳನ್ನು ಹಾಕಿಸಿದ್ದು ಭಾರೀ ಸಂಚಲನ ಮೂಡಿಸಿದೆ, ಯಾಕಂದ್ರೆ ಈಶ್ವರಪ್ಪ ಸದಾ ಮುಸ್ಲಿಂ ಸಮುದಾಯವನ್ನು ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಆಯನೂರು ಮಂಜುನಾಥ್ ಸೌಹಾರ್ದತೆ ಸಂದೇಶ ಬ್ಯಾನರ್ಗಳನ್ನು ಹಾಕಿಸಿದ್ದು, ಆಡಳಿತರೂಢ ಬಿಜೆಪಿಗೆ ಇರುಸು ಮುರಸು ಉಂಟಾಗಿದೆ. ಅಲ್ಲದೇ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: BS Yediyurappa: ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಯಾರೆಂಬ ತೀರ್ಮಾನ; ಯಡಿಯೂರಪ್ಪ
ಶಿವಮೊಗ್ಗ ನಗರದ ಪ್ರಮುಖ ರಸ್ತೆ ಹಾಗೂ ಸರ್ಕಲ್ಗಳಲ್ಲಿ ಆಯನೂರು ಮಂಜುನಾಥ್ ಅವರ ಪರವಾದ ಫೆಕ್ಸ್ಗಳು ರಾರಾಜಿಸುತ್ತಿದ್ದು, ಹರಕು ಬಾಯಿಗಳಿಗೆ ಬೀಗ ಬೀಳಲಿ, ಮುರಿದ ಮನಸುಗಳ ಬೇಸುಗೆಯಾಗಲಿ. ಈ ಬಾರೀ ಆಯನೂರು ಮಂಜುನಾಥ್ ಎಂದು ಬ್ಯಾನರ್ಗಳಲ್ಲಿ ಬರೆಯಲಾಗಿದ್ದು, ಬಿಜೆಪಿಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಜೊತೆಗೆ ನಾನೂ ಟಿಕೆಟ್ ಆಕಾಂಕ್ಷಿ ಎಂದು ಆಯನೂರು ಮಂಜುನಾಥ್ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಕೋಮುಗಲಭೆ ಹಾಗೂ ಹಕು ಬಾಯಿಯ ಮಾತಿನಿಂದ ಎರಡೂ ಧರ್ಮದ ಕನರು ಆತಂಕದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಫ್ಲೆಕ್ಸ್‌ನಲ್ಲಿ ಈ ಅಂಶಗಳು ಪ್ರಸ್ತಾಪಗೊಂಡಿವೆ ಎಂದು ಆಯನೂರು ಮಂಜುನಾಥ್ ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ. ಮೊದಲ ಫ್ಲೆಕ್ಸ್‌ನಲ್ಲಿ ಬಿಜೆಪಿ ಚಿಹ್ನೆ, ನಾಯಕರ ಭಾವಚಿತ್ರ ಅಳವಡಿಕೆ ಮಾಡಿದ್ದರು. ಆದರೆ, 2ನೇ ಫ್ಲೆಕ್ಸ್‌ನಲ್ಲಿ ಬಿಜೆಪಿ ಚಿಹ್ನೆಯೂ ಇಲ್ಲ ನಾಯಕರ ಚಿತ್ರವನ್ನೂ ಹಾಕಿಲ್ಲ. ಈ ಹಿನ್ನೆಲೆ ಆಯನೂರು ಮಂಜುನಾಥ್ ಫ್ಲೆಕ್ಸ್ ಸ್ಟ್ರಾಟಜಿ ಏನಿರಬಹುದು? ಅವರು ಬಿಜೆಪಿಯನ್ನು ಬಿಡುವ ಮುನ್ಸೂಚನೆಯಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿವೆ.
ಈ ನಡುವೆ ಬಿಎಸ್ ಯಡಿಯೂರಪ್ಪನವರ ಆಪ್ತ ಜ್ಯೋತಿ ಪ್ರಕಾಶ್ ಮತ್ತು ವೈದ್ಯ ಡಾ . ಧನಂಜಯ ಸರ್ಜಿ ಶಿವಮೊಗ್ಗ ಟಿಕೆಟ್ ರೇಸ್ನಲ್ಲಿದ್ದಾರೆ. ಒಂದು ವೇಳೆ ಈಶ್ವರಪ್ಪನವರಿಗೆ ಟಿಕೆಟ್ ನೀಡದಿದ್ದರೆ ಪುತ್ರ ಕಾಂತೇಶ್ ತಮಗೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶಿಮವೊಗ್ಗ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಅಲ್ಲದೇ ಈ ಬಾರಿ ಶಿವಮೊಗ್ಗ ಬಿಜೆಪಿ ಟಿಕೆಟ್ನಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಅವರು ಈಗಾಗಲೇ ತಮ್ಮ ರಾಜಕೀಯ ಗುರುಗಳೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಇದಕ್ಕೆ ಯಡಿಯೂರಪ್ಪ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸಂಸದ ರಾಘವೇಂದ್ರ ಕೂಡ ಯಾವುದೇ ಮಾತನ್ನು ಆಡುತ್ತಿಲ್ಲ. ಇದರಿಂದ ತೀವ್ರ ನಿರಾಶೆಗೆ ಒಳಗಾಗಿರುವ ಆಯನೂರು ಮಂಜುನಾಥ್ ತಮ್ಮದೇ ಆದ ದಾರಿ ಕಂಡುಕೊಳ್ಳಲು ನಿರ್ಧರಿಸಿದಂತೆ ಕಂಡುಬರುತ್ತಿದೆ. ತಮಗೆ ಪಕ್ಷದ ಟಿಕೆಟ್ ಬೇಕೇ ಬೇಕು ಎಂಬ ಮಾಹಿತಿಯನ್ನು ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ರವಾನಿಸಿರುವ ಅವರು ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ