AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ, ನಾನು ಮೆಟ್ಟಿಲಾಗುತ್ತೇನೆ: ಸಚಿವ ಸೋಮಣ್ಣ

ಬಸವರಾಜ ಬೊಮ್ಮಾಯಿ ಅವರು ಜನಪರ ಮುಖ್ಯಮಂತ್ರಿಯಾಗಿದ್ದು, ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂದು ಸಚಿವ ಸೋಮಣ್ಣ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೋಮಣ್ಣ ಅವರು ಜನಪರ ಕೆಲಸ ಮಾಡಿದವರು ಎಂದು ಸಿಎಂ ಬೊಮ್ಮಾಯಿ ಅವರು ಸಚಿವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ, ನಾನು ಮೆಟ್ಟಿಲಾಗುತ್ತೇನೆ: ಸಚಿವ ಸೋಮಣ್ಣ
ಬಸವರಾಜ ಬೊಮ್ಮಾಯಿ ಮತ್ತು ವಿ.ಸೋಮಣ್ಣ
Rakesh Nayak Manchi
|

Updated on:Mar 23, 2023 | 9:06 PM

Share

ಬೆಂಗಳೂರು: ಕರ್ನಾಟಕ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದರೆ, ಇದೀಗ ಬಿಜೆಪಿಯಲ್ಲೂ ಬಿಸಿಬಿಸಿ ಚರ್ಚೆ ಆರಂಭಗೊಂಡಿದೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸ್ವತಃ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿಕೆ ನೀಡಿದ್ದರು. ಬಳಿಕ ಸ್ವಪಕ್ಷದಲ್ಲಿ ಚರ್ಚೆಗಳು ಹುಟ್ಟಿಕೊಂಡವು. ಆದರೆ ಸಿಎಂ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಯಡಿಯೂರಪ್ಪ ಹೇಳಿದ್ದರು. ಈ ನಡುವೆ ಸಚಿವ ವಿ. ಸೋಮಣ್ಣ (V Somanna) ಅವರು, ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ. ಸಾಧ್ಯವಾದರೆ ನಾನು ಅದರ ಮೆಟ್ಟಿಲಾಗುತ್ತೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಬಳಿಕ ಅಮಿತ್ ಶಾ, ಸಿಎಂ ಬೊಮ್ಮಾಯಿ, ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಸೋಮಣ್ಣ ಅವರ ಮನವೋಲಿಸುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಕಂಡಿದ್ದರು. ನಂತರ ತಾನು ಎಲ್ಲಿಯೂ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಸೋಮಣ್ಣ ಹೇಳಿದ್ದರು. ಇದೀಗ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Priyakrishna Vs Somanna: ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಸತಿ ಖಾತೆ ಸಚಿವ ಸೋಮಣ್ಣ!

ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಅವರು, ಇಷ್ಟು ವರ್ಷದಲ್ಲಿ ನನ್ನ ಬಹುದೊಡ್ಡ ಗೆಳೆಯ ಅಂದರೆ ಬೊಮ್ಮಾಯಿ. ನಾನು ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ತಂದೆ ಜೊತೆಗೂ ಕೆಲಸ ಮಾಡಿದ್ದೇನೆ. ಆದರೆ ಬೊಮ್ಮಾಯಿಯಷ್ಟು ಜನಪರ ಸಿಎಂ ನಾನು ನೋಡಿಯೇ ಇಲ್ಲ ಎಂದು ಹೇಳುವ ಮೂಲಕ ಸೋಮಣ್ಣ ಅವರು ಬೊಮ್ಮಾಯಿಯನ್ನು ಹಾಡಿ ಹೊಗಳಿದರು.

ಸೋಮಣ್ಣರನ್ನು ಹೊಗಳಿದ ಸಿಎಂ ಬೊಮ್ಮಾಯಿ

ಸಚಿವ ಸೋಮಣ್ಣ ಅವರು ಅಧಿಕಾರದ ಕೆಲಸ ಮಾಡಿಲ್ಲ, ಅವರು ಸದಾ ಜನರ ಕೆಲಸ ಮಾಡಿದವರು. ಅದು ಇದು ಅಭಿವೃದ್ಧಿ ಅಂತ ಬಂದು ಹೋಗುತ್ತಿರುತ್ತಾರೆ. ಸ್ಲಂ ಜನಕ್ಕೆ ಮನೆ ಕೊಡಬೇಕು ಅಂತ ಬರುತ್ತಾರೆ. ಗೋವಿಂದರಾಜನಗರಕ್ಕೆ ಸೋಮಣ್ಣ ಬರುವ ಮುನ್ನ ಹೇಗಿತ್ತು? ಈಗ ಹೇಗಿದೆ ಅಂತ ನೋಡಬೇಕು. ಬೇರೆ ನಗರಗಳಿಗೆ ಹೋಲಿಸಿಕೊಂಡರೆ ಬೆಂಗಳೂರು ಹತ್ತು ಪಟ್ಟು ಹೆಚ್ಚು ಅಭಿವೃದ್ಧಿ ಆಗಿದೆ. ಬ್ರಾಂಡ್ ಬೆಂಗಳೂರು ಅಂತ ಹೆಸರಾಗಿದೆ. ಬ್ರ್ಯಾಂಡ್ ಬೆಂಗಳೂರು ಹೆಸರನ್ನು ಯಾರೂ ಕೆಡಿಸಲು ಆಗುವುದಿಲ್ಲ ಎಂದರು.

ಡಾ.ಪುನೀತ್ ರಾಜ್​ಕುಮಾರ್ ಸ್ಮಾರಕ ಮಾಡುತ್ತೇವೆ: ಸಿಎಂ

ಈ ವರ್ಷವೇ ಡಾ.ಪುನೀತ್ ರಾಜ್​ಕುಮಾರ್ ಸ್ಮಾರಕ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವರನಟ ಡಾ.ರಾಜ್​ಕುಮಾರ್​ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ. ಮಾ.27ರಂದು ರೇಸ್​ಕೋರ್ಸ್​ ರಸ್ತೆಗೆ ಅಂಬರೀಶ್ ಹೆಸರಿಡುತ್ತೇವೆ ಎಂದು ಮಾಹಿತಿ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Thu, 23 March 23