ಕ್ಷೇತ್ರ ಗೊಂದಲ ನಡುವೆ ಸಿದ್ದರಾಮಯ್ಯ ಮತ್ತೊಂದು ಮೆಗಾ ಪ್ಲ್ಯಾನ್, ಆಪ್ತರ ಮೂಲಕ ಹೈಕಮಾಂಡ್​ಗೆ ಸಂದೇಶ

ಸಿದ್ದರಾಮಯ್ಯರ ಕ್ಷೇತ್ರ ಯಾವುದು ಎನ್ನುವುದು ಇನ್ನೂ ನಿಗೂಢವಾಗಿದೆ. ಇದರ ಮಧ್ಯೆಯೇ ಸಿದ್ದು ಮತ್ತೊಂದು ಭರ್ಜರಿ ಪ್ಲ್ಯಾನ್ ಮಾಡಿ, ಆಪ್ತರ ಮೂಲಕ ಹೈಕಮಾಂಡ್‌ ಮುಂದಿಟ್ಟಿದ್ದಾರೆ. ಹಾಗಾದ್ರೆ ಸಿದ್ದು ಪ್ಲ್ಯಾನ್ ಏನು? ಅದಕ್ಕೆ ಹೈಕಮಾಂಡ್ ಕೊಟ್ಟು ಉತ್ತರವೇನು ನೋಡೋಣ ಬನ್ನಿ.

ಕ್ಷೇತ್ರ ಗೊಂದಲ ನಡುವೆ ಸಿದ್ದರಾಮಯ್ಯ ಮತ್ತೊಂದು ಮೆಗಾ ಪ್ಲ್ಯಾನ್, ಆಪ್ತರ ಮೂಲಕ ಹೈಕಮಾಂಡ್​ಗೆ ಸಂದೇಶ
ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: Mar 24, 2023 | 9:16 AM

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka Assembly Elections 2023) ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ರಾಜಕೀಯ ನಾಯಕರು ತಮ್ಮ-ತಮ್ಮ ಕ್ಷೇತ್ರದಲ್ಲಿ ಬಿಡುಬಿಟ್ಟಿದ್ದು, ಭರ್ಜರಿ ಮತಬೇಟೆ ಆರಂಭಿಸಿದ್ದಾರೆ. ಆದ್ರೆ, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರೂ ಆಗಿರುವ ಸಿದ್ದರಾಮಯ್ಯನವರು((Siddaramaiah)) ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗುತ್ತಿಲ್ಲ. ಕೋಲಾರರಿಂದ (Kolar Constituency) ಸ್ಪರ್ಧೆ ಮಾಡದಂತೆ ರಾಹುಲ್​ ಗಾಂಧಿ (Rahul Gandhi) ಸಲಹೆ ನೀಡಿದ್ದೆ ತಡ ಸಿದ್ದರಾಮಯ್ಯಗೆ ಕ್ಷೇತ್ರ ಗೊಂದಲ ಶುರುವಾಗಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಕಳೆದ ಬಾರಿಯಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಚರ್ಚೆ ಕಳೆದ ಎರಡು ದಿನಗಳಿಂದ ಜೋರಾಗಿದೆ.

ಇದನ್ನೂ ಓದಿ: ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ; ಪ್ರತಾಪ್​​ ಸಿಂಹ

ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಪ್ಲ್ಯಾನ್?

ಸಿದ್ದರಾಮಯ್ಯ ಕ್ಷೇತ್ರ ಯಾವುದು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸಿದ್ದರಾಮಯ್ಯನವರ ಕ್ಷೇತ್ರ ಗೊಂದಲದಿಂದಾಗಿ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೂ ವಿಳಂಬವಾಗುತ್ತಿದೆ. ಸಿದ್ದು ಎಲ್ಲಿ ನಿಲ್ಲಬೇಕು ಎನ್ನುವುದು ಹೈಕಮಾಂಡ್​ಗೂ ದೊಡ್ಡ ತಲೆನೋವಾಗಿದೆ. ಈ ಹೊತ್ತಲ್ಲೇ ಸಿದ್ದರಾಮಯ್ಯ ಆಪ್ತರಿಂದಲೇ ಹೊಸ ಆಪ್ಶನ್​ ಬಂದಿದೆ. ಹೌದು, ಮೊದಲನೇಯದ್ದು ಚುನಾವಣೆಗೆ ಸ್ಪರ್ಧಿಸದೇ ಸಿಎಂ ಆಗುವ ಲೆಕ್ಕಾಚಾರವಾದ್ರೆ, ಎರಡನೇಯದ್ದು ಈ ಬಾರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಪ್ಲ್ಯಾನ್ ಮಾಡಿದ್ದಾರೆ.

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಆದ್ರೆ, ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಬಾದಾಮಿಯಲ್ಲಿ ಅಲ್ಪಮತಗಳಿಂದ ಗೆದ್ದಿದ್ದರು. ಈ ಬಾರಿ ಸಹ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದು ಅವರ ಕೊನೆ ಚುನಾವಣೆ ಆಗಿದ್ದರಿಂದ ಹೇಗಾದರೂ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎನ್ನುವ ಪ್ಲ್ಯಾನ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಾರಿಯ ಚುನಾವಣೆ ಸಿದ್ದರಾಮಯ್ಯಗೆ ಮಾಡು ಇಲ್ಲವೇ ಮಡಿ ಎನ್ನುವಂತಿದೆ. ಮತ್ತೊಂದೆಡೆ ವರುಣಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆಗೆ ಸಿದ್ದರಾಮಯ್ಯ ಒಲವು ತೋರುತ್ತಿಲ್ಲ. ಯಾಕಾಂದ್ರೆ ಪುತ್ರನ ರಾಜಕೀಯಕ್ಕೆ ಅಂತ್ಯ ಹಾಡಿದಂತಾಗುತ್ತದೆ ಎನ್ನುವುದು ಸಿದ್ದರಾಮಯ್ಯನವರನ್ನು ಕಾಡುತ್ತಿದೆ. ಆದ್ದರಿಂದ ಬಾದಾಮಿ ಹಾಗೂ ವರುಣಾದಿಂದ ಸ್ಪರ್ಧಿಸಲು ಸಿದ್ದು ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಬಾದಾಮಿ ಉಳಿಸಿಕೊಂಡು ವರುಣಕ್ಕೆ ರಾಜೀನಾಮೆ ನೀಡಿ ಪುತ್ರನಿಗೆ ಅವಕಾಶ ಮಾಡಿಕೊಡುವ ಲೆಕ್ಕಾಚಾರಗಳು ಸಹ ಸಿದ್ದರಾಮಯ್ಯ ಆಪ್ತ ವಲಯಗಳಲ್ಲಿ ನಡೆದಿವೆ.

ಅಂದಹಾಗೆ ಸಿದ್ದರಾಮಯ್ಯ ತಮ್ಮ ಆಪ್ತ ಕೆ.ಜೆ.ಜಾರ್ಜ್ ಮೂಲಕ ಎರಡು ಕ್ಷೇತ್ರದ ಆಸೆಯನ್ನ ಹೈಕಮಾಂಡ್ ಮುಂದೆ ಬಿಚ್ಚಿಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಂದ್ರೆ ವರುಣಾ ಮತ್ತು ಬಾದಾಮಿಯಿಂದ ಕಣಕ್ಕಿಳಿಯುವ ಚಿಂತನೆ ಮಾಡಿದೆ. ಈ ವಿಷಯವಾಗಿ ಕೆ.ಜೆ ಜಾರ್ಜ್, ಸಿದ್ದು ನಿರ್ಧಾರವನ್ನ ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೇವಾಲ ಮುಂದಿಟ್ಟಿದ್ದಾರೆ. ಆದ್ರೆ, ಎರಡು ಕ್ಷೇತ್ರ ಸ್ಪರ್ಧೆಗೆ ಅನುಮತಿಸಲು ಸುರ್ಜೇವಾಲ ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಯಾಕಂದ್ರೆ ಪಕ್ಷದೊಳಗೆ ಇತರೆ ನಾಯಕರು 2 ಕ್ಷೇತ್ರ ಕೇಳಬಹುದು, ಆಗ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ ಅಂತಾ, ಸಿದ್ದು ಡಬಲ್ ಕ್ಷೇತ್ರ ಕನಸಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ ಎನ್ನಲಾಗಿದೆ.

ಹೈಕಮಾಂಡ್ ಎರಡು ಕ್ಷೇತ್ರದ ಆಸೆಗೆ ಸದ್ಯ ಬ್ರೇಕ್ ಹಾಕಿದ್ರೂ ಸಿದ್ದು ಸುಮ್ಮನೆ ಕೂತಿಲ್ಲ. ಇಂದು ತಮ್ಮ ಕ್ಷೇತ್ರ ಬಾದಾಮಿಗೆ ಹೋಗು್ತತಿದ್ದು, ಅಲ್ಲಿ ಸಿದ್ದು ಬೆಂಬಲಿಗರು 2ಕಿ.ಮೀ ರೋಡ್ ಶೋ ನಡೆಸುವುದಕ್ಕೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ 30 ಸಾವಿರಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಯಿದ್ದು, ಈ ಮೂಲಕ ಸಿದ್ದು ಬಾದಾಮಿಯಿಂದ ಹೈಕಮಾಂಡ್​ಗೆ ಹೊಸ ಸಂದೇಶ ಕೊಡುವ ಲೆಕ್ಕಾಚಾರದಲ್ಲಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ