ಕೊರಟಗೆರೆ ವಿಧಾನಸಭಾ ಕ್ಷೇತ್ರದ 13 ಗ್ರಾಮಗಳಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ: ಮನವೊಲಿಕೆಗೆ ಮುಂದಾದ ಜಿ ಪರಮೇಶ್ವರ

|

Updated on: Apr 11, 2023 | 10:48 AM

ಕ್ರಷರ್ ತೆರೆಯಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗದ ಹಿನ್ನೆಲೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ 13 ಗ್ರಾಮದ ಜನರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದು, ಗ್ರಾಮಸ್ಥರ ಮನವೊಲಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರು ಮುಂದಾಗಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದ 13 ಗ್ರಾಮಗಳಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ: ಮನವೊಲಿಕೆಗೆ ಮುಂದಾದ ಜಿ ಪರಮೇಶ್ವರ
ಚಿನಿವಾರನಹಳ್ಳಿ ಗ್ರಾಮದಲ್ಲಿ ಡಾ. ಜಿ ಪರಮೇಶ್ವರ
Follow us on

ತುಮಕೂರು: ಕ್ರಷರ್ ತೆರೆಯಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗದ ಹಿನ್ನೆಲೆ ಕೊರಟಗೆರೆ (Kortagere) ವಿಧಾನಸಭಾ ಕ್ಷೇತ್ರದ 13 ಗ್ರಾಮದ ಜನರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದು, ಗ್ರಾಮಸ್ಥರ ಮನವೊಲಿಕೆಗೆ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ (G Parmeshwar) ಅವರು ಮುಂದಾಗಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿನಿವಾರನಹಳ್ಳಿ ಗ್ರಾಮಕ್ಕೆ ಪರಮೇಶ್ವರ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದ್ದಾರೆ. ಈ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ನನ್ನ ಅವಧಿಯಲ್ಲಿ ಕ್ರಷರ್​ ಮಂಜೂರು ಆಗಿಲ್ಲ. 2015ರಲ್ಲಿ ಪ್ರಕ್ರಿಯೆ ಆರಂಭವಾಗಿ 2018ರ ವೇಳೆಗೆ ಮಂಜೂರಾಗಿದೆ. ಈ ಹಿಂದೆ ಇದ್ದ ಶಾಸಕರ ಅವಧಿಯಲ್ಲಿ ಕ್ರಷರ್​​ ಮಂಜೂರಾಗಿದೆ. ನನಗೆ ಈವರೆಗೂ ಈ ಕ್ರಷರ್ ವಿಚಾರ ಗಮನಕ್ಕೆ ಬಂದಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದರೇ ಬಸವಣ್ಣನ ಮೇಲೆ ಆಣೆ ಇದನ್ನ ಆರಂಭಿಸಲು ಬಿಡೋಲ್ಲ. ಮತದಾನ ನಿಮ್ಮ ಹಕ್ಕು ದಯವಿಟ್ಟು ಮತದಾನ ಮಾಡಿ ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥರು ಜಿಲ್ಲಾಧಿಕಾರಿ ಆದೇಶ ಬರುವವರೆಗೂ ಮತದಾನ ಮಾಡಲ್ಲ ಎಂದಿದ್ದಾರೆ. ತಕ್ಷಣವೇ ಪರಮೇಶ್ವರ್​​ ಜಿಲ್ಲಾಧಿಕಾರಿ ಡಿಸಿ ವೈ.ಎಸ್.ಪಾಟೀಲ್​ ಅವರಿಗೆ ಕರೆ ಮಾಡಿ ಕ್ರಷರ್ ಮಂಜೂರಾತಿ ರದ್ದು ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ: ತುಮಕೂರು: ದೇವಸ್ಥಾನದ ದಲಿತ ಅರ್ಚಕನ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ

ಕ್ರಷರ್ ತೆರೆಯಲು 13 ಗ್ರಾಮಗಳ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿರಲಿಲ್ಲ. ಹಾಗಾಗಿ ಅಧಿಕಾರಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಈ ಬಾರಿ ನಾವು ಮತದಾನ ಮಾಡುವುದಿಲ್ಲ ಎಂದು ಗ್ರಾಮಗಳಲ್ಲಿ ಬ್ಯಾನರ್​ ಅಳವಡಿಸಿದ್ದಾರೆ. ತುಮಕೂರು ತಾಲೂಕಿನ ವ್ಯಾಪ್ತಿಯ ಬೆಳಧರ ಗ್ರಾಮ ಪಂಚಾಯಿತಿ ಚಿನಿವಾರನಹಳ್ಳಿ, ಜಕ್ಕೆನಹಳ್ಳಿ, ಅನ್ನದಾನಿಪಾಳ್ಯ, ಸೀಗೇಹಳ್ಳ, ಗೌಡನಕಟ್ಟೆ, ಮಲ್ಲಯ್ಯನಪಾಳ್ಯ, ಚನ್ನಮುದ್ದನಹಳ್ಳಿ, ಮಸಣಿಪಾಳ್ಯ, ಹಿರೇಕೊಡತಕಲ್ಲು, ಅಹೋಬಲ ಅಗ್ರಹಾರ, ಮುದ್ದರಾಮಯ್ಯನಪಾಳ್ಯ ಸೇರಿ 13 ಹಳ್ಳಿಗಳ 5,000ಕ್ಕೂ ಹೆಚ್ಚು ನಿವಾಸಿಗಳಿಂದ ಮತದಾನ ಬಹಿಷ್ಕಾರ ಬಗ್ಗೆ ಬ್ಯಾನರ್‌ ಅಳವಡಿಕೆ ಮಾಡಲಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Tue, 11 April 23