ಬಿಎಸ್​ ಯಡಿಯೂರಪ್ಪನವರ ಲಕ್ಕಿ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಬಿವೈ ವಿಜಯೇಂದ್ರ

|

Updated on: Apr 19, 2023 | 3:30 PM

ಶಿಕಾರಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಬಿವೈ ವಿಜಯೇಂದ್ರ ಅವರು ಇಂದು (ಏ.19) ರಂದು ನಾಮಪತ್ರ ಸಲ್ಲಿಸಲು ಬಿಎಸ್​ ಯಡಿಯೂರಪ್ಪ ಅವರ ಹಳೆಯ ಲಕ್ಕಿ ಅಂಬಾಸಿಡರ್​ ಕಾರಿನಲ್ಲಿ ಹೋಗಿದ್ದು ವಿಶೇಷವಾಗಿತ್ತು.

ಬಿಎಸ್​ ಯಡಿಯೂರಪ್ಪನವರ ಲಕ್ಕಿ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಬಿವೈ ವಿಜಯೇಂದ್ರ
ಬಿಎಸ್​ ಯಡಿಯೂರಪ್ಪ ಅವರೊಂದಿಗೆ ಲಕ್ಕಿ ಅಂಬಾಸಿಡರ್ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಬಿವೈ ವಿಜಯೇಂದ್ರ
Follow us on

ಶಿವಮೊಗ್ಗ: ಶಿಕಾರಪುರ ವಿಧಾನಸಭಾ ಕ್ಷೇತ್ರ (Shikaripur Assembly Constituency) ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಅವರು ಇಂದು (ಏ.19) ರಂದು ನಾಮಪತ್ರ ಸಲ್ಲಿಸಲು ಬಿಎಸ್​ ಯಡಿಯೂರಪ್ಪ (BS Yediyurappa) ಅವರೊಂದಿಗೆ ಲಕ್ಕಿ ಅಂಬಾಸಿಡರ್​ ಕಾರಿನಲ್ಲಿ ಹೋಗಿದ್ದು ವಿಶೇಷವಾಗಿತ್ತು. ಬಿವೈ ವಿಜಯೇಂದ್ರ ಅವರು ಈ ಅಂಬಾಸಿಡರ್ (Ambassador) ಕಾರಿನಲ್ಲಿ ಹೋಗಲು ಕಾರಣವೂ ಇದೆ. ಬಿಎಸ್​ ಯಡಿಯೂರಪ್ಪ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಇದೇ ಅಂಬಾಸಿಡರ್ ಕಾರನ್ನು ಬಳಸಿದ್ದರು. ಈ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್​ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ​ಕಾರನ್ನು ಬಳಸುತ್ತಿದ್ದರು. ಈ ಕಾರು ಬಿಎಸ್​ ಯಡಿಯೂರಪ್ಪ ಅವರಗೆ ಲಕ್ಕಿ ಕಾರ್ ಆಗಿದೆ. ಈ ಹಿನ್ನೆಲೆ ಪುತ್ರನ ನಾಮಪತ್ರಿಕೆ ಸಲ್ಲಿಕೆಗೆ ಹೋಗುವಾಗಲೂ ಲಕ್ಕಿ ಕಾರನ್ನೇ ಬಳಸಿದ್ದಾರೆ.

ಇನ್ನು ಬಿಎಸ್​ ಯಡಿಯೂರಪ್ಪ ಅವರು ಈ ಬಾರಿ ಚುನಾಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದು, ತಮ್ಮ ಕ್ಷೇತ್ರವನ್ನು ಶಿಕಾರಿಪುರವನ್ನು ಪತ್ರ, ಬಿವೈ ವಿಜಯೇಂದ್ರ ಅವರಿಗೆ ಬಟ್ಟುಕೊಟ್ಟಿದ್ದಾರೆ. ಈ ಹಿನ್ನೆಲೆ ಈ ಬಾರಿ ಬಿವೈ ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆಗೆ ತೆರಳುವಾಗ ತಂದೆಯವರ ಲಕ್ಕಿ ಕಾರನ್ನೇ ಬಳಸಿದ್ದು, ವಿಶೇಷವಾಗಿತ್ತು.

ಇದನ್ನೂ ಓದಿ: ಲಿಂಗಾಯತರನ್ನು ಹಿಡಿಟ್ಟುಕೊಳ್ಳಲು ರಣತಂತ್ರ, ಯಡಿಯೂರಪ್ಪರನ್ನ ಮುಂದೆ ಬಿಟ್ಟ ಬಿಜೆಪಿ

ಬಿವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಕೆಗೆ ಹೋಗುವ ಮುಂಚೆ ತಂದೆ ಬಿಎಸ್​ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಲಕ್ಕಿ ಕಾರಿನಲ್ಲಿ ತಂದೆ ಮತ್ತು ಸಹೋದರನೊಂದಿಗೆ ಒಟ್ಟಿಗೆ ಹೋಗಿ ಬಿವೈ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದಾರೆ.

ಬಿಎಸ್​ ಯಡಿಯೂರಪ್ಪ ಅವರ ಗುರುತು CKR45 ಕಾರು

ಈ ಬಗ್ಗೆ ಪುತ್ರ ಬಿವೈ ವಿಜಯೇಂದ್ರ ಮಾತನಾಡಿ, ಬಿಎಸ್​ ಯಡಿಯೂರಪ್ಪ ಅವರ ರಾಜಕಾರಣ ಪ್ರಾರಂಭವಾಗಿದ್ದು ಅಂಬಾಸಿಡರ್​ (CKR 45) ಕಾರಿನಲ್ಲಿ. ಈ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಈ ಕಾರನ್ನು ನೋಡಿದರೇ ರಾಜ್ಯದ ಕಾರ್ಯಕರ್ತರಿಗೆ ರೋಮಾಂಚನವಾಗುತ್ತದೆ. ಬಿಜೆಪಿಯ ಗುರುತು ಕಮಲವಾಗಿದ್ದರೇ, ಬಿಎಸ್​ ಯಡಿಯೂರಪ್ಪ ಅವರ ಗುರುತು CKR45 ಕಾರು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Wed, 19 April 23