Byadagi Election 2023 Winner: ಬ್ಯಾಡಗಿಯಲ್ಲಿ ಗೆದ್ದುಬೀಗಿದ ಕಾಂಗ್ರೆಸ್​ನ ಬಸವರಾಜ್‌ ಎನ್‌ ಶಿವಣ್ಣನರ್​

|

Updated on: May 13, 2023 | 4:21 PM

Basavaraj N Sivannanar: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದ್ದಿದ್ದು, ಬ್ಯಾಡಗಿ ವಿಧಾನಸಭಾ ಕ್ಷೇತ್ರದ (Byadgi Assembly Constituency) ಕಾಂಗ್ರೆಸ್​​ ಅಭ್ಯರ್ಥಿ ಬಸವರಾಜ್‌ ಎನ್‌ ಶಿವಣ್ಣನರ್‌ ಗೆಲುವಿನ ನಗೆ ಬೀರಿದ್ದಾರೆ.

Byadagi Election 2023 Winner: ಬ್ಯಾಡಗಿಯಲ್ಲಿ ಗೆದ್ದುಬೀಗಿದ  ಕಾಂಗ್ರೆಸ್​ನ ಬಸವರಾಜ್‌ ಎನ್‌ ಶಿವಣ್ಣನರ್​
ಬಸವರಾಜ್‌ ಎನ್‌ ಶಿವಣ್ಣನರ್‌
Follow us on

Byadagi Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದ್ದಿದ್ದು, ಬ್ಯಾಡಗಿ ವಿಧಾನಸಭಾ ಕ್ಷೇತ್ರದ (Byadgi Assembly Constituency) ಕಾಂಗ್ರೆಸ್​​ ಅಭ್ಯರ್ಥಿ ಬಸವರಾಜ್‌ ಎನ್‌ ಶಿವಣ್ಣನರ್‌ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ 2013 ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದು, ಅದಾದ ಬಳಿಕ ಇದೀಗ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆಗಿಳಿದಿದ್ದರು. ಇನ್ನು ಕ್ಷೇತ್ರದಲ್ಲಿ ಉತ್ತಮ ಜನಬೆಂಬಲ ಹೊಂದಿರುವ ಇವರು ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸ್ಪರ್ಧಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ 91,721 ಮತಗಳನ್ನ ಪಡೆದಿದ್ದು, 21,271 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಈ ಬಾರಿ ಕೂಡ ಇವರಿಗೆ ಟಿಕೆಟ್​ ನೀಡಲಾಗಿತ್ತು. ಭರ್ಜರಿ ಪ್ರಚಾರವನ್ನ ಕೂಡ ಮಾಡಿದ್ದರು. ಈ ಮೂಲಕ ಮತ್ತೊಮ್ಮೆ ಶಾಸಕನವಾಗುವ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಸೋಲು ಕಂಡಿದ್ದಾರೆ. ಇದರ ಜೊತೆಗೆ ಜೆಡಿಎಸ್​ ಪಕ್ಷದಿಂದ ಸುನೀತಾ ಎಂ ಪೂಜಾರ್ ಸ್ಪರ್ಧಿಸಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿತ್ತು. ಕಾಂಗ್ರೆಸ್​​ನಿಂದ ಬಸವರಾಜ್‌ ಎನ್‌ ಶಿವಣ್ಣನರ್‌ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಅವರಿಗೆ ನೇರಾನೇರ ಸ್ಪರ್ಧೆ ಏರ್ಪಟ್ಟು, ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಇದೀಗ ಫಲಿತಾಂಶ ಬಂದಿದ್ದು, ಬಸವರಾಜ್‌ ಎನ್‌ ಶಿವಣ್ಣನರ್‌ ಗೆಲುವು ಸಾಧಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ