Byatarayanapura Election Results: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡಗೆ ಗೆಲುವು

|

Updated on: May 13, 2023 | 7:03 PM

Byatarayanapura Assembly Election Result 2023 Live Counting Updates: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಗೆಲುವು

Byatarayanapura Election Results: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡಗೆ ಗೆಲುವು
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಗೆಲುವು
Follow us on

Byatarayanapura Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟವಾಗಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಗೆಲುವು ಕಂಡಿದ್ದಾರೆ. 38,250 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಕೃಷ್ಣಭೈರೇಗೌಡಗೆ 1,59,781 ಮತಗಳು ಬಿದ್ದಿವೆ. ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡಗೆ 1,21,531 ಮತಗಳು ದೊರೆತಿವೆ. ಮೇ 10 ರಂದು ನಡೆದ ಮತದಾನದಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ (Byatarayanapura Assembly Elections 2023) ಶೇ. 51.85ರಷ್ಟು ಮತದಾನವಾಗಿತ್ತು. ರಾಜಧಾನಿ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಬ್ಯಾಟರಾಯನಪುರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನಗರ ಹಾಗೂ ಗ್ರಾಮೀಣ ಮತದಾರ ಕೇಂದ್ರಿತ ಬ್ಯಾಟರಾಯನಪುರ ವಿಧಾನಸಭಾ ರಾಜಧಾನಿಯ ಹೈವೋಲ್ಟೇಜ್​​ ಕಣ.

2008 ರಿಂದ 3 ಚುನಾವಣೆಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿರುವ ಶಾಸಕ ಕೃಷ್ಣ ಬೈರೇಗೌಡ 4ನೇ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಈ ಬಾರಿ ಕೃಷ್ಣ ಬೈರೇಗೌಡ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಪಾಳಯ ಭಾರಿ ಕಸರತ್ತು ನಡೆಸಿದೆ. ಬಿಜೆಪಿ ಹುರಿಯಾಳು ಎಚ್‌.ಸಿ. ತಮ್ಮೇಶ್ ಗೌಡ ಅಖಾಡದಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ವಿದ್ಯಾವಂತ, ಶ್ರೀಮಂತ ವರ್ಗ, ಗ್ರಾಮೀಣ ಮತದಾರರು, ಕೆಳ ಮಧ್ಯಮ ವರ್ಗದ ಮತದಾರರ ಮನ ಗೆಲ್ಲಲು ಉಭಯ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮೂರು ಅವಧಿಯ ಅಭಿವೃದ್ಧಿ ಕಾರ್ಯಗಳು, ವೈಯಕ್ತಿಕ ವರ್ಚಸ್ಸು, ಕ್ಲೀನ್ ಇಮೇಜ್ ನೊಂದಿಗೆ ಗೆಲುವಿನ ದಡ ಸೇರುವ ವಿಶ್ವಾಸದಲ್ಲಿ ಕೃಷ್ಣಬೈರೇಗೌಡ ಇದ್ದಾರೆ. ಇನ್ನು, ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿರುವ ಆರೋಪದ ಅಸ್ತ್ರದ ಜತೆ ಸರಕಾರದ ಸಾಧನೆಗಳನ್ನು ಮುಂದಿಟ್ಟು ತಮ್ಮೇಶ್ ಗೌಡ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮುಂಚೂಣಿ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ಕೃಷ್ಣಬೈರೇಗೌಡ ಅವರಿಗೆ ಕ್ಷೇತ್ರದ ಮತದಾರರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ.

ಸಹಕಾರನಗರ, ವಿದ್ಯಾರಣ್ಯಪುರ, ಜಕ್ಕೂರು ಸೇರಿ ಶಿಕ್ಷಿತ ವರ್ಗವೇ ಹೆಚ್ಚಾಗಿರುವ ಮತದಾರರ ಅಗತ್ಯಗಳನ್ನು ಮನಗಂಡಿದ್ದಾರೆ. ಹೀಗಾಗಿ, ವಿದ್ಯಾರಣ್ಯಪುರದಲ್ಲಿ ಟೆನ್ನಿಸ್ ಕೋರ್ಟ್ ಸ್ಥಾಪನೆ, ಪಾರ್ಕ್‌ಗಳ ಅಭಿವೃದ್ಧಿ, ಅಪಾರ್ಟ್‌ಮೆಂಟ್ ಗಳಿಗೆ ನೀರು ಪೂರೈಕೆ ಸೇರಿ ಇನ್ನಿತರ ಅಭಿವೃದ್ಧಿ ಮುಂದಿಡುತ್ತಿದ್ದಾರೆ. ಸುಶಿಕ್ಷಿತ ವರ್ಗದ ಮತದಾರರ ಜತೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕವಿಟ್ಟುಕೊಂಡು, ಮುಂದಿನ ಯೋಜನೆಗಳ ಬಗ್ಗೆ ಭರವಸೆ ಬಿತ್ತುತ್ತಿದ್ದಾರೆ. ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಿರುವುದು, ಕುಡಿಯುವ ನೀರು ಒದಗಿಸಿರುವುದು ಮತ್ತಿತರ ಸಾಧನೆಗಳನ್ನು ಮುಂದಿಟ್ಟು ಗ್ರಾಮೀಣ ಮತದಾರರನ್ನು ಸೆಳೆಯುತ್ತಿದ್ದಾರೆ. ಜತೆಗೆ, ರಾಜ್ಯ ಸರಕಾರದ ವಿರುದ್ಧದ ಕಮಿಷನ್ ಆರೋಪ, ಆಡಳಿತ ವಿರೋಧಿ ಅಲೆಗಳ ಅಸ್ತಗಳನ್ನು ಪ್ರಯೋಗಿಸಿ ಮತಬುಟ್ಟಿಗೆ ಕೈ ಹಾಕುತ್ತಿದ್ದಾರೆ.

ಬಿಜೆಪಿ ರಣೋತ್ಸಾಹ: ಮೂರು ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಎ.ರವಿ ಸೋಲು ಕಂಡಿದ್ದರು. ಆದರೆ, ಮತ ಗಳಿಕೆ ಪ್ರಮಾಣ ಪ್ರತಿ ಚುನಾವಣೆಯಲ್ಲಿ ಹೆಚ್ಚಾಗಿತ್ತು. ಹೀಗಾಗಿ, ಪಕ್ಷಕ್ಕೆ ಭದ್ರ ನೆಲೆಯಿದೆ ಎಂದು ನಂಬಿರುವ ಬಿಜೆಪಿ ಪಾಳಯ ತಮ್ಮೇಶ್ ಗೌಡ ಅವರನ್ನು ಕಣಕ್ಕಿಳಿಸಿದೆ. ಪ್ರತಿ ರಂತಹ ಸ್ಟಾರ್ ಪ್ರಚಾರಕರನ್ನು ಕರೆಸಿ ರೋಡ್ ಶೋ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಜೆಡಿಎಸ್ ಈ ಬಾರಿಯೂ ಹೆಚ್ಚು ಸದ್ದು ಮಾಡುತ್ತಿಲ್ಲ.

ಎರಡು ವರ್ಷಗಳಿಂದ ’ಬೆಟರ್ ಬ್ಯಾಟರಾಯನಪುರ’ ಅವಕಾಶ ಕೊಡಿ ಎಂದು ಕ್ಷೇತ್ರದ ಮತದಾರರಿಗೆ ಪರಿಚಯವಾಗಿದ್ದ ತಮ್ಮೇಶ್‌ ಗೌಡ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭುಗಿಲೆದ್ದಿದ್ದ ಆಂತರಿಕ ಭಿನ್ನಮತ ಶಮನ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಎ. ರವಿ, ಮುನೀಂದ್ರ ಕುಮಾರ್ ಖುದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಕಮಲ ನಾಯಕರಿಗೆ ಸಮಾಧಾನ ತಂದಿದ್ದು, ಗೆಲುವಿಗಾಗಿ ಕಸರತ್ತು ಮುಂದುವರಿಸಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:08 am, Sat, 13 May 23