Chikkaballapur Election Results: ಗರಿಷ್ಠ ಮತದಾನವಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಅಸೆಂಬ್ಲಿ ಎಲೆಕ್ಷನ್​ ರಿಸಲ್ಟ್: ಸಚಿವ ಡಾ. ಸುಧಾಕರ್, ಜೆಡಿಎಸ್‌ನಿಂದ ಬಚ್ಚೇಗೌಡ ಮಧ್ಯೆ ಹಣಾಹಣಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2023 | 2:52 AM

Chikkaballapur Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇ. 86.90 ರಷ್ಟು ಮತದಾನವಾಗಿತ್ತು.

Chikkaballapur Election Results: ಗರಿಷ್ಠ ಮತದಾನವಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಅಸೆಂಬ್ಲಿ ಎಲೆಕ್ಷನ್​ ರಿಸಲ್ಟ್: ಸಚಿವ ಡಾ. ಸುಧಾಕರ್, ಜೆಡಿಎಸ್‌ನಿಂದ ಬಚ್ಚೇಗೌಡ ಮಧ್ಯೆ ಹಣಾಹಣಿ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್
Follow us on

Chikkaballapur Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಮೇ 10 ರಂದು ನಡೆದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಗರಿಷ್ಠ ಎನ್ನುವಂತೆ ಶೇ. 86.90 ರಷ್ಟು ಮತದಾನವಾಗಿತ್ತು. ಡಿ ಲಿಮಿಟೇಷನ್ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ (Chikkaballapur Assembly Constituency) ಸಾಮಾನ್ಯ ಕ್ಷೇತ್ರವಾಗಿ ಬದಲಾಗಿದೆ. ದಿನಾಂಕ 20-04-2023 ರಂತೆ ಕ್ಷೇತ್ರದಲ್ಲಿ 1,03,308 ಪುರುಷರು, 1,06,464 ಮಹಿಳಾ ಮತದಾರರು ಹಾಗೂ ಇತರರು 19 ಮಂದಿ ಮತದಾರರು ಸೇರಿ ಒಟ್ಟು 2,09,791 ಮತದಾರರಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕೆ.ಪಿ. ಬಚ್ಚೇಗೌಡ 51,575 ಮತಗಳು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಕೆ.ಸುಧಾಕರ್ 82,006 ಮತಗಳು, ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ. ಮಂಜುನಾಥ್ 5,576 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಾ. ಕೆ. ಸುಧಾಕರ್ ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದರ ಫಲವಾಗಿ ಉಪಚುನಾವಣೆ ನಡೆದಿತ್ತು. ಆಗ ಸುಧಾಕರ್ ಬಿಜೆಪಿಯಿಂದ ಸ್ಪರ್ಧಿಸಿ 34,801 ಬಹುಮತಗಳಿಂದ ಗೆಲುವು ಸಾಧಿಸಿದ್ದರು. ಉಪಚುನಾವಣೆಯಲ್ಲಿ ಸುಧಾಕರ್ ಪಡೆದ ಒಟ್ಟು ಮತಗಳು 84,389 ಆಗಿದ್ದವು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ. ಆಂಜಿನಪ್ಪ 49,588 ಮತಗಳನ್ನು ಪಡೆದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎನ್.ರಾಧಕೃಷ್ಣ 35,869 ಮತಗಳನ್ನು ಪಡೆದಿದ್ದರು.

ಈಗ 2023ರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್‌ನಿಂದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಕಾಂಗ್ರೆಸ್‌ನಿಂದ ಪ್ರದೀಪ್ ಈಶ್ವರ್ ಐಯ್ಯರ್ ಹಾಗೂ ಬಿಜೆಪಿಯಿಂದ ಡಾ. ಕೆ. ಸುಧಾಕರ್ ಸ್ಪರ್ಧಿಸಿದ್ದಾರೆ. ಡಾ. ಕೆ. ಸುಧಾಕರ್ ರಾಜ್ಯ ಸರ್ಕಾರದಲ್ಲಿ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸರ್ಕಾರದಲ್ಲಿ ಪ್ರಬಲ ಸಚಿವರೆಂದು ಖ್ಯಾತಿಯಾಗಿದ್ದಾರೆ.

ಇದರಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕ್ಷೇತ್ರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮತಗಳೇ ನಿರ್ಣಯಕವಾಗಿವೆ. ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತಗಳ ಲೆಕ್ಕ ಹಾಕಿದರೆ ಎಸ್‌ಸಿ 50 ಸಾವಿರ, ಎಸ್‌ಟಿ 20 ಸಾವಿರ, ಒಕ್ಕಲಿಗ 45 ಸಾವಿರ, ಬಲಜಿಗ 35 ಸಾವಿರ, ಮುಸ್ಲಿಂ 16 ಸಾವಿರ, ಕುರುಬ 12 ಸಾವಿರ, ಈಡಿಗ 2 ಸಾವಿರ, ಲಿಂಗಾಯಿತ ಮತ್ತು ಬ್ರಾಹ್ಮಣ 5 ಸಾವಿರ, ಇತರೆ 15 ಸಾವಿರಕ್ಕೂ ಹೆಚ್ಚು ಇರುವ ಬಗ್ಗೆ ಮಾಹಿತಿ ಇದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಇದ್ದು, ಪ್ರಸ್ತುತ ಬಿಜೆಪಿ ಮುನ್ನಡೆಯಲ್ಲಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ