ಮೈಸೂರು: ಸಿದ್ದರಾಮಯ್ಯ ಪ್ರಚಾರದ ನಂತರ ಜಾತಿಗಳ ಮುಖಂಡರ ನಡುವೆ ಜಗಳ, ಬೂದಿ ಮುಚ್ಚಿದ ಕೆಂಡದಂತಾದ ದಾಸನಪುರ ಗ್ರಾಮ

|

Updated on: Apr 22, 2023 | 10:00 PM

ದಾಸನೂರಲ್ಲೂ ನೂರಕ್ಕೆ ನೂರು ಬಸವ ಪುತ್ಥಳಿ ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿ ತೆರಳಿದ್ದಾರೆ. ಅಷ್ಟರಲ್ಲೇ ಇದೇ ವಿಚಾರಕ್ಕೆ ಜಾತಿಗಳ ಪ್ರಮುಖರ ನಡುವೆ ಜಗಳ ನಡೆದಿದೆ.

ಮೈಸೂರು: ಸಿದ್ದರಾಮಯ್ಯ ಪ್ರಚಾರದ ನಂತರ ಜಾತಿಗಳ ಮುಖಂಡರ ನಡುವೆ ಜಗಳ, ಬೂದಿ ಮುಚ್ಚಿದ ಕೆಂಡದಂತಾದ ದಾಸನಪುರ ಗ್ರಾಮ
ದಾಸನಪುರ ಗ್ರಾಮದಲ್ಲಿ ಜಗಳ
Follow us on

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರಚಾರ ಆರಂಭಿಸಿದ್ದು, ಇಂದು ಮೈಸೂರು ನಂಜನಗೂಡು ತಾಲೂಕಿನ ದಾಸನಪುರದಲ್ಲೂ ಅಬ್ಬರದ ಪ್ರಚಾರ ನಡೆಸಿದರು. ಇದೇ ವೇಳೆ ಬಸವ ಬಳಗದ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ (Siddaramaiah) ಅವರು, ಬಸವ ಪುತ್ಥಳಿ ಮಾಡಿಸುತ್ತೇವೆ ಎಂದು ಭರವಸೆ ನೀಡಿ ತೆರಳಿದರು. ಅಷ್ಟರಲ್ಲೇ ಈ ವಿಚಾರವಾಗಿ ಜಾತಿಯ ಎರಡು ಗುಂಪಿನ ನಡುವೆ ವಾಗ್ವಾದ ಆರಂಭವಾಗಿದೆ. ಪರಸ್ಪರ ಕೂಗಾಟ, ತಳ್ಳಾಟ ನಡೆಸಿ ಗಲಾಟೆ ಮಾಡಿಕೊಂಡ ಜನರು ಕಡೆಗೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದು, ಸದ್ಯ ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಚುನಾವಣಾ ಪ್ರಚಾರಕ್ಕೆಂದು ನಂಜನಗೂಡು ತಾಲೂಕಿನ ದಾಸನಪುರ ಗ್ರಾಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಬಸವ ಪುತ್ಥಳಿ ಸ್ಥಾಪಿಸುವಂತೆ ಬಸವ ಬಳಗದವರು ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ, ನಾನು ಬಸವನ ಅನುಯಾಯಿ. ಸರ್ಕಾರಿ ಅಧಿಕಾರಿಗಳು ಬಸವಣ್ಣ ಅವರನ್ನು ಅನುಸರಿಸಲಿ ಎಂದು ಕಚೇರಿಯಲ್ಲಿ ಬಸವಣ್ಣನ‌ ಪೋಟೋ ಕಡ್ಡಾಯ ಮಾಡಿಸಿದ್ದೆ. ದಾಸನೂರಲ್ಲೂ ನೂರಕ್ಕೆ ನೂರು ಬಸವ ಪುತ್ಥಳಿ ಮಾಡಿಸುತ್ತೇವೆ, ಬಸವ ಬಳಗ ಹುಡುಗರು ಕೂಡ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದಾರೆ. ನಾನು ಗೆದ್ದ ಬಳಿಕ ಅದನ್ನು ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟು ತೆರಳಿದರು.

ಇದನ್ನೂ ಓದಿ: ವೀರಶೈವ ಲಿಂಗಾಯತರ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

ಸಿದ್ದರಾಮಯ್ಯ ಭರವಸೆ ನೀಡಿ ಗ್ರಾಮದಿಂದ ತೆರಳುತ್ತಿದ್ದಂತೆ ಇದೇ ವಿಚಾರಕ್ಕೆ ಎರಡು ಗುಂಪು ಗಲಾಟೆ ಆರಂಭಿಸಿದ್ದಾರೆ. ಪರಸ್ಪರ ಕೂಗಾಟ, ತಳ್ಳಾಟ ನಡೆಸಿ ಗಲಾಟೆ ನಡೆಸಿದ ಜನರು ಕಡೆಗೆ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಹಾಗೋ ಹೀಗೋ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದರೂ ಸದ್ಯ ಗ್ರಾಮವು ಬೂದಿ ಮುಚ್ಚಿದ ಕೆಂಡದಂತಿದೆ.

ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಭರ್ಜರಿ ಪ್ರಚಾರ

ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕಾರೇಮೋಳೆ ಗ್ರಾಮದಲ್ಲಿ ಪ್ರಚಾರ ನಡೆಸಿದ ನಂತರ ನಂಜನಗೂಡು ತಾಲೂಕು, ಸ್ವ ಕ್ಷೇತ್ರ ವರುಣಾ ಕ್ಷೇತ್ರದಲ್ಲೂ ಪ್ರಚಾರ ನಡೆಸಿದರು. ತೆರೆದ ವಾಹನ ಹತ್ತದೆ ಕಾರಿನಲ್ಲೇ ನಿಂತು ಭಾಷಣ ಮಾಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Sat, 22 April 23