AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಪಡೆದು ಕಾಂಗ್ರೆಸ್ ಬಿ-ಫಾರಂ ನೀಡಿದೆ ಎಂಬ ಶೋಭಾ ಕರಂದ್ಲಾಜೆ ದೂರಿಗೆ ಸತೀಶ್ ಜಾರಕಿಹೊಳಿ ಹೇಳಿದಿಷ್ಟು

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್​ ಹಣ ಪಡೆದು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು ನೀಡಿದ್ದರು. ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on:Apr 22, 2023 | 9:26 PM

Share

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕಮಾರ್​ ಹಣ ಪಡೆದು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಶೋಭಾ ಕರಂದ್ಲಾಜೆ ದೂರು ನೀಡಿದ್ದರು. ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಪ್ರತಿಕ್ರಿಯೆ ನೀಡಿದ್ದು, ಅದು ನಮ್ಮ ಪಕ್ಷದ ಆಂತರಿಕ ವಿಚಾರ ಅವರು ಚೆಕ್ ಮೂಲಕ ಕೊಟ್ಟಿದ್ದಾರೆ. ಚುನಾವಣೆ ಆಯೋಗದಲ್ಲಿ ಅವಕಾಶ ಇದೆ. ಕಾನೂನಿನಲ್ಲಿ ಅವಕಾಶವಿದೆ. ತಪ್ಪೇನಲ್ಲ, ಪೇಪರ್ ಜಾಹೀರಾತಿಗೆ ತೆಗೆದುಕೊಳ್ಳುತ್ತಿದ್ದೇವೆ. ಬಾಕಿ ಉಳಿದರೆ ಬಿಲ್ಡಿಂಗ್ ಫಂಡ್ ಅಂತ ಕಟ್ಟುತ್ತಿವೆ. ಕೊಟ್ಟವರು, ತೆಗೆದುಕೊಂಡವರು ಲೆಕ್ಕ ತೋರಿಸಲೇಬೇಕು ಎಂದು ಹೇಳಿದರು. ಟಿಕೆಟ್ ವಂಚಿತರ ಬಂಡಾಯ ಶಮನ ವಿಚಾರವಾಗಿ ಪ್ರತಿಕ್ರಿಯಿಸಿ, ಕಿತ್ತೂರುನಲ್ಲಿ ಶಿಲ್ಲೇದಾರ್ ಆಗಿದೆ, ಬೇರೆ ಬೇರೆ ಎಲ್ಲ ಕಡೆ ಸಂಧಾನ ನಡಿಯುತ್ತಿದೆ ಎಂದರು.

ಚುಣಾವಣೆ ಗೆಲ್ಲಲು ಬಿಜೆಪಿ ಹೊಸ ತಂತ್ರಗಾರಿಕೆ

ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಒಂದು ಬಾರಿ ಆಗಿದೆ. ಡಿಕೆಶಿ, ರಾಹುಲ್ ಗಾಂಧಿ ಈಗಾಗಲೇ ಬಂದು ಹೋಗಿದ್ದಾರೆ. ಸಿದ್ಧರಾಮಯ್ಯ ಕೊನೆಯ ಬಾರಿಗೆ ಬರುತ್ತಿದ್ದಾರೆ. ಇದಾದ್ಮೇಲೆ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು, ನಾವೇ ಚುನಾವಣೆ ಪ್ರಚಾರ ಮಾಡಬೇಕು.

ಇದನ್ನೂ ಓದಿ: ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ

ಚುಣಾವಣೆ ಗೆಲ್ಲಲು ಬಿಜೆಪಿ ಹೊಸ ತಂತ್ರಗಾರಿಕೆ ನಡೆಸಿದೆಯಾ ಎಂಬ ವಿಚಾರಕ್ಕೆ ಉತ್ತಿರಿಸಿದ ಅವರು, ಏನಾಗಲ್ಲ ಅದು ಹಳೆಯದಾಗಿದೆ ಹೊಸದೇನಿಲ್ಲ ಅವರದು. ಯಾವುದು ವರ್ಕೌಟ್ ಆಗಲ್ಲ. ಪ್ರಾಧಾನಿ ಮೋದಿ, ಅಮಿತ್ ಶಾ, ಸಿಎಂ ಬಂದು ಸುಳ್ಳ ಹೇಳ್ತಾರೆ ಜನ ಎಷ್ಟು ಸಾರಿ ಕೇಳೋದು. ಹೀಗಾಗಿ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ. ಯಮಕನಮರಡಿ ಕ್ಷೇತ್ರ ಈ ಬಾರಿಗೆ ಟಾಪ್ ಟೆನ್​ನಲ್ಲಿ ಬರಬೇಕೆಂದು ನಮ್ಮೆಲ್ಲ ಕಾರ್ಯಕರ್ತರ ಅಭಿಲಾಷೆ ಎಂದು ತಿಳಿಸಿದರು.

ಗೆಲ್ಲಿಸೋದು, ರಿಜೆಕ್ಟ್ ಮಾಡೋದು ಜನ

ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ವಿಚಾರವಾಗಿ ಮಾತನಾಡಿ, ಚುನಾವಣೆಯಲ್ಲಿ ಜನ ವೋಟ್ ಹಾಕುತ್ತಾರೆ. ಯಾರನ್ನು ರಿಜೆಕ್ಟ್ ಮಾಡುವ ಅವಶ್ಯಕತೆಯಿಲ್ಲ. ಯಾರ ಯಾರ ಸ್ಪರ್ಧೆ ಮಾಡುತ್ತಾರೆ ಮಾಡಿದ್ರೆ ಒಳ್ಳೆಯದೇ. ಅಂತಿಮವಾಗಿ ಸೋಲಿಸೋದು, ಗೆಲ್ಲಿಸೋದು ರಿಜೆಕ್ಟ್ ಮಾಡೋದು ಜನ. ಜನರ ಕೈಯಲ್ಲಿ ಇದೆ ನೋಡೋಣ ಏನ್ ಆಗುತ್ತೆ.

ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ದೂರು

ಇಡೀ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಎಲ್ಲೂ ತಿರಸ್ಕಾರ ಆಗಲ್ಲ. ಅದು A ಫಾರ್ಮ್ ಆಗಲಿ B ಫಾರ್ಮ್ ಆಗಲಿ C ಫಾರ್ಮ್ D ಫಾರ್ಮ್‌ ತುಂಬಿದ್ರೂ ಅವರು ಮಾಡಲ್ಲ. ಅದರ ಕಡೆ ನಾವು ಟೈಮ್ ವ್ಯರ್ಥ ಮಾಡದೇ ಮತದಾರರ ಕಡೆ ಹೋಗೋದು ಒಳ್ಳೆಯದು ಎಂದರು.

ಏ.24, 25ರಂದು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತಯಾಚನೆ

ಏ.24, 25ರಂದು ಬೆಳಗಾವಿ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಮತಯಾಚನೆ ಮಾಡಲಿದ್ದಾರೆ. ಒಂದು ದಿನ 4 ಕ್ಷೇತ್ರಗಳು, ಮತ್ತೊಂದು ದಿನ 4 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Sat, 22 April 23