ಹುಬ್ಬಳ್ಳಿ ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಜಗದೀಶ್​ ಶೆಟ್ಟರ್​​ ಭಾವಚಿತ್ರ: ಜನರಿಗೆ ಶಾಕ್​

|

Updated on: May 01, 2023 | 3:25 PM

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಅವರ ಪೋಟೋ ಇದ್ದು, ಅದನ್ನೇ ಹಂಚಲಾಗುತ್ತಿದೆಯಂತೆ.

ಹುಬ್ಬಳ್ಳಿ ಬಿಜೆಪಿ ಅಭ್ಯರ್ಥಿಯ ಕರಪತ್ರದಲ್ಲಿ ಜಗದೀಶ್​ ಶೆಟ್ಟರ್​​ ಭಾವಚಿತ್ರ: ಜನರಿಗೆ ಶಾಕ್​
ಬಿಜೆಪಿ ಅಭ್ಯರ್ಥಿಯ ಕರಪತ್ರ
Follow us on

ಹುಬ್ಬಳ್ಳಿ: ಕರ್ನಾಟಕ ರಾಜಕೀಯದಲ್ಲಿ (Karnataka Politics) ಸಾಕಷ್ಟು ಚರ್ಚೆಯಾಗಿದ್ದು, ಮತ್ತು ಸಂಚಲನ ಮೂಡಿಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಬಿಜೆಪಿ ತೊರೆದು (Jagadish Shettar)​​ ಕಾಂಗ್ರೆಸ್ (Congress) ಸೇರ್ಪಡೆ​. ಸಂಘ ಪರಿವಾರದಿಂದ ಬಂದು, ಬಿಜೆಪಿಯಲ್ಲಿ (BJP) 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ವಿಪಕ್ಷನಾಯಕನಾಗಿ ಕೊನೆಗೆ ಮುಖ್ಯಮಂತ್ರಿಯಾದವರು ಕಾಂಗ್ರೆಸ್​ ಸೇರಿರುವುದು ಬಿಜೆಪಿಗೆ ಶಾಕ್​ ನೀಡಿದೆ. ಅಲ್ಲದೇ ನಾಡಿನ ಪ್ರಬಲ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಸಮುದಾಯ ಮುಖಂಡ ಕಾಂಗ್ರೆಸ್​ ಸೇರ್ಪಡೆಯಾಗಿದ್ದು, ಬಿಜೆಪಿಗೆ ಸಾಕಷ್ಟು ನಷ್ಟವವಾಗಲಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇನ್ನು ಹುಬ್ಬಳ್ಳಿ-ಧಾರವಾಡ ಕೇಂದ್ರ (Hubli-Dharwad Central) ಕ್ಷೇತ್ರದ ಅಭ್ಯರ್ಥಿ ಜಗದೀಶ್​​ ಶೆಟ್ಟರ್​ ಕಾಂಗ್ರೆಸ್​ ಸೇರಿದ್ದು, ಅವರೇ ಹೇಳುವ ಪ್ರಕಾರ ಸ್ವಾಭಿಮಾನಕ್ಕೆ ದಕ್ಕೆಯಾಗಿದ್ದರಿಂದ.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿ ಟಿಕೆಟ್‌ ನೀಡದ್ದಕ್ಕೆ ಜಗದೀಶ್​ ಶೆಟ್ಟರ್‌ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಟಿಕೆಟ್​ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು. ನಂತರ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್​ ಸೇರುತ್ತಾರೆ ಎಂದು ದಟ್ಟ ಹೊಗೆ ಆಡಲು ಶರುವಾಯಿತು. ಈ ವೇಳೆ ಬಿಜೆಪಿ ಹಿರಿಯ ನಾಯಕರು ಮನವೊಲಿಸಲು ಎಷ್ಟೇ ಪ್ರಯತ್ನ ಮಾಡಿದರೂ ಹಠ ಬಿಡಲಿಲ್ಲ. ಕೊನೆಗೂ (ಏ.17) ರಂದು ಕಾಂಗ್ರೆಸ್​​ ಸೇರಿಯೇಬಿಟ್ಟರು.

ಇದನ್ನೂ ಓದಿ: ಶೆಟ್ಟರ್‌ ಕಾಂಗ್ರೆಸ್‌ಗೆ ಹೋಗಿದ್ದರಿಂದ ನಷ್ಟವಾಗಲ್ಲ, ಬಿಜೆಪಿಯೇ ಗೆಲ್ಲಲಿದೆ; ಹುಬ್ಬಳ್ಳಿಯಲ್ಲಿ ಅಮಿತ್ ಶಾ

ಸದ್ಯ ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಬಿಜೆಪಿ vs ಜಗದೀಶ್​ ಶೆಟ್ಟರ್​ ಅಂತ ಪೈಪೋಟಿ ಏರ್ಪಟ್ಟಿದೆ. ಇನ್ನು ಜಗದೀಶ್​ ಶೆಟ್ಟರ್​ ಅವರನ್ನು ಸೋಲಿಸಲು ಬಿಜೆಪಿಯ ಹಿರಿಯ ತಲೆಗಳು ಕೆಡಸಿಕೊಂಡಿದ್ದು, ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ಈಗ ಬಿಜೆಪಿ ಪಕ್ಷದ ಕರಪತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಅವರ ಪೋಟೋ ಇದ್ದು, ಅದನ್ನೇ ಹಂಚಲಾಗುತ್ತಿದೆಯಂತೆ. ಹೌದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರ ಕರಪತ್ರದಲ್ಲಿ ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ರಾರಾಜಿಸುತ್ತಿದ್ದು, ಜನರು ಶಾಕ್​ ಆಗಿದ್ದಾರೆ. ​

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ