ಕಾಂಗ್ರೆಸ್​​ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ: ಅಂತಿಮ ಪಟ್ಟಿಯಲ್ಲಿ ಯಾರಿಗೆಲ್ಲ ಸಿಕ್ತು ಟಿಕೆಟ್? ಇಲ್ಲಿದೆ ವಿವರ

|

Updated on: Apr 20, 2023 | 6:38 AM

Karnataka Assembly Elections 2023: ನಿನ್ನೆ(ಏಪ್ರಿಲ್ 19) ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ, ಬಳಿಕ ಮಧ್ಯ ರಾತ್ರಿ ಫೈನಲ್ ಪಟ್ಟಿ ಬಿಡುಗಡೆ ಮಾಡಿದೆ. ಎಐಸಿಸಿ ಕಾರ್ಯದರ್ಶೀಗೆ ಟಿಕೆಟ್​ ಕೈತಪ್ಪಿದೆ.

ಕಾಂಗ್ರೆಸ್​​ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ: ಅಂತಿಮ ಪಟ್ಟಿಯಲ್ಲಿ ಯಾರಿಗೆಲ್ಲ ಸಿಕ್ತು ಟಿಕೆಟ್? ಇಲ್ಲಿದೆ ವಿವರ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕಾಂಗ್ರೆಸ್​​ನ 6ನೇ ಹಾಗೂ ಅಂತಿಮ ಪಟ್ಟಿ (Karnataka Congress Candidates List) ಬಿಡುಗಡೆ ಮಾಡಿದೆ. ನಿನ್ನೆ(ಏಪ್ರಿಲ್ 19) 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ, ಬಳಿಕ ಮಧ್ಯ ರಾತ್ರಿ ಫೈನಲ್ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.  ಈ ಮೂಲಕ ಕಾಂಗ್ರೆಸ್​ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಮುಖವಾಗಿ ಎಐಸಿಸಿ ಕಾರ್ಯದರ್ಶಿ ಎಸ್​ ಬೋಸರಾಜು ಅವರಿಗೆ ಟಿಕೆಟ್​ ಕೈತಪ್ಪಿದೆ. ಎಸ್ ಬೋಸರಾಜು ಹಾಗೂ ಪುತ್ರ ರವಿ ಬೋಸರಾಜು ರಾಯಚೂರು ನಗರ ಕ್ಷೇತ್ರ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್​ ನೀಡುವಂತೆ ಬೋಸರಾಜು ಪಟ್ಟು ಹಿಡಿದಿದ್ದರು. ಜಿಲ್ಲೆಯ ಪ್ರಬಲ ನಾಯಕರಾಗಿರುವ ಬೋಸರಾಜುಗೆ ಟಿಕೆಟ್​ ಕೈತಪ್ಪಿದ್ದು, ಅಂತಿಮವಾಗಿ ರಾಯಚೂರು ನಗರ ಟಿಕೆಟ್​ ಅನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದೆ.

ಇದನ್ನೂ ಓದಿ: Karnataka Assembly Elections 2023: ಕಾಂಗ್ರೆಸ್​ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ, ಬೊಮ್ಮಾಯಿ ವಿರುದ್ಧ ಅಭ್ಯರ್ಥಿ ಬದಲು

ನಿನ್ನೆ ಅಷ್ಟೇ(ಏಪ್ರಿಲ್ 19)) ಬಿಜೆಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿತ್ತು. ಬಳಿಕ ತೀವ್ರ ಕಗ್ಗಂಟಾಗಿ ಉಳಿದಿದ್ದ 5 ಕ್ಷೇತ್ರಗಳಿಗೆ ಕಾಂಗ್ರೆಸ್​ ಬುಧವಾರ ಮಧ್ಯರಾತ್ರಿ 2ಕ್ಕೆ ಕಾಂಗ್ರೆಸ್​​ ಫೈನಲ್ (6ನೇ ಪಟ್ಟಿ)  ಪಟ್ಟಿಯನ್ನು ಪ್ರಕಟಿಸಿದೆ. ಬಾಕಿ ಉಳಿದುಕೊಂಡಿದ್ದ ರಾಯಚೂರು ನಗರ, ಶಿಡ್ಲಘಟ್ಟ, ಸಿ.ವಿ ರಾಮನ್ ನಗರ, ಅರಕಲಗೂಡು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅವರ ಹೆಸರುಗಳು ಈ ಕೆಳಗಿನಂತಿವೆ.

ಬಾಕಿ ಉಳಿದಿದ್ದ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿದೆ

  • ರಾಯಚೂರು – ಮೊಹಮ್ಮದ್ ಶಾಲಮ್
  • ಶಿಡ್ಲಘಟ್ಟ – ಬಿ ವಿ ರಾಜೀವ್ ಗೌಡ
  • ಸಿ ವಿ ರಾಮನ್ ನಗರ – ಎಸ್ ಆನಂದ್ ಕುಮಾರ್
  • ಅರಕಲಗೂಡು – ಎಚ್.ಪಿ. ಶ್ರೀಧರ್ ಗೌಡ
  • ಮಂಗಳೂರು ಉತ್ತರ – ಇನಾಯತ್ ಅಲಿ

ಮೇ 10ರಂದು ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆದಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:18 am, Thu, 20 April 23