ಚುನಾವಣೆ ಕೊನೇ ಹಂತದಲ್ಲಿ ಅಭ್ಯರ್ಥಿಗಳ ಕಸರತ್ತು; ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಬೆಳ್ಳಿ ಗಣಪ ಹಂಚುತ್ತಿದ್ದ ಯುವಕ ವಶ

|

Updated on: May 08, 2023 | 8:56 AM

ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಾವು ಜೋರಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ಮತದಾರರನ್ನ ಸೆಳೆಯಲು ಹಲವಾರು ಆಮಿಷಗಳನ್ನ ಒಡ್ಡುತ್ತಿದ್ದಾರೆ. ಇದೀಗ ದಾವಣಗೆರೆಯ ದಕ್ಷಿಣ ಕ್ಷೇತ್ರದಲ್ಲಿ ಬೆಳ್ಳಿ ಗಣಪನನ್ನ ಹಂಚಲಾಗುತ್ತಿದ್ದ ವೇಳೆ ಯುವಕರನ್ನ ಅರೆಸ್ಟ್​ ಮಾಡಲಾಗಿದೆ.

ಚುನಾವಣೆ ಕೊನೇ ಹಂತದಲ್ಲಿ ಅಭ್ಯರ್ಥಿಗಳ ಕಸರತ್ತು; ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಬೆಳ್ಳಿ ಗಣಪ ಹಂಚುತ್ತಿದ್ದ ಯುವಕ ವಶ
ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಿಂದ ಬೆಳ್ಳಿ ಗಣಪ ಹಂಚಿಕೆ ಆರೋಪ
Follow us on

ದಾವಣಗೆರೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ(Karnataka Assembly Election 2023) ಕಾವು ಜೋರಾಗಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ಮತದಾರರನ್ನ ಸೆಳೆಯಲು ಹಲವಾರು ಆಮಿಷಗಳನ್ನ ಒಡ್ಡುತ್ತಿದ್ದಾರೆ. ಇದೀಗ ದಾವಣಗೆರೆ(Davanagere)ಯ ದಕ್ಷಿಣ ಕ್ಷೇತ್ರದಲ್ಲಿ ಬೆಳ್ಳಿ ಗಣಪನನ್ನ ಹಂಚಲಾಗುತ್ತಿದೆ. ಹೌದು ಕ್ಷೇತ್ರದಲ್ಲಿ ಬೆಳ್ಳಿ ಗಣೇಶ ಸದ್ದು ಮಾಡುತ್ತಿದ್ದಾನೆ. ಆದರೀಗ ಇದೆ ವಿಘ್ನ ವಿನಾಶಕನ‌ ಮೂಲಕ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಜಿ ಅಜಯ ಕುಮಾರ(Bg Ajay Kumar) ವಿಘ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ಹೌದು ಮತದಾರರನ್ನ ಸೆಳೆಯಲು ಬೆಳ್ಳಿ ಗಣಪ ಹಂಚುವಾಗ ಅಜಯಕುಮಾರ ಹುಡುಗರು ಸಿಕ್ಕಿ ಬಿದ್ದಿದ್ದಾರೆ. ಇನ್ನು ನಗರದ ವ್ಯಾಪ್ತಿಯ ವಿವಿಧ ಮನೆಗಳಿಗೆ ಬೆಳ್ಳಿ ಗಣೇಶ ವಿಗ್ರಹ ಹಂಚುತ್ತಿದ್ದರು. ಈ ವೇಳೆ ಸಿಕ್ಕಿಬಿದ್ದ ತೇಜಸ್ ಎಂಬ 22 ವರ್ಷದ ಯುವಕನನ್ನ ವಶಕ್ಕೆ ಪಡೆದು, ಬೆಳ್ಳಿ ಮೂರ್ತಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಶಶಿಧರ್​ ಅವರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ನಗರದ ಗಾಂಧಿ‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಲಹೊಂಗಲ ತಾಲೂಕಿನಲ್ಲಿ 25 ಲಕ್ಷ ಮೌಲ್ಯದ ಕುಕ್ಕರ್​ ಜಪ್ತಿ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದ ತೋಟದ ಮನೆಯಲ್ಲಿದ್ದ 25 ಲಕ್ಷ ಮೌಲ್ಯದ 1800 ಕುಕ್ಕರ್​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತದಾನದ ಮುನ್ನ ದಿನ ಮತದಾರರಿಗೆ ಹಂಚಲು ಇಟ್ಟಿದ್ದ ಕುಕ್ಕರ್ ಇದಾಗಿದ್ದು ಎನ್ನಲಾಗಿದೆ. ಆದರೆ ಯಾವ ಅಭ್ಯರ್ಥಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ಬಳಿಕ ಗೊತ್ತಾಗಬೇಕಿದೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮುನಿರತ್ನ ಚುನಾವಣೆಗೆ ಸ್ಪರ್ಧೆ; ಅಳಿಯ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

CPIM ಅಭ್ಯರ್ಥಿ ವಾಸವಿದ್ದ ಕಟ್ಟಡಕ್ಕೆ ಬಂದಿದ್ದ 16 ಜನ ಲಾಕ್​

ಚಿಕ್ಕಬಳ್ಳಾಪುರ: ಸಿಪಿಐಎಂ ಅಭ್ಯರ್ಥಿ ಡಾ.ಅನಿಲ್​ ಕುಮಾರ್ ವಾಸವಿದ್ದ ಕಟ್ಟಡಕ್ಕೆ 16 ಜನ ಅಪರಿಚಿತರು ಬಂದು ಲಾಕ್ ಆಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ. ಹೌದು ನಾವು ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಲು ಬಂದಿದ್ದಾಗಿ ಅಪರಿಚಿತರು ಹೇಳಿಕೊಂಡಿದ್ದಾರಂತೆ. ಬಳಿಕ 16 ಜನರು ಸಿಪಿಐಎಂ ಕಾರ್ಯಕರ್ತರನ್ನ ಪೊಲೀಸರಿಗೆ ಒಪ್ಪಿಸಿದೆ. ಇನ್ನು ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಗೇಪಲ್ಲಿ​ ಪೊಲೀಸ್ ಠಾಣೆ ಮುಂದೆ ಸಿಪಿಐಎಂ ಅಭ್ಯರ್ಥಿ ಡಾ.ಅನಿಲ್​ ಕುಮಾರ್ ನೇತೃತ್ವದಲ್ಲಿ ಧರಣಿ ಮಾಡಲಾಗಿದೆ. ಇನ್ನು ವಿಚಾರಣೆ ಬಳಿಕ ಈ 16 ಜನ ಅಪರಿಚಿತರು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮೂಲದವರು ಎನ್ನಲಾಗಿದೆ. ಈ ವ್ಯಕ್ತಿಗಳ ಬಳಿ ಮಾರಕಾಸ್ತ್ರ ಕೂಡ ಇರುವ ಆರೋಪ ಹಿನ್ನೆಲೆ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ