ಮುನಿರತ್ನ ಚುನಾವಣೆಗೆ ಸ್ಪರ್ಧೆ; ಅಳಿಯ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಾಜಿ ಸಚಿವ ಮುನಿರತ್ನ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಅಳಿಯನೂ ಆಗಿರುವ ದಾವಣಗೆರೆ ಎಸ್​ಪಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಮುನಿರತ್ನ ಚುನಾವಣೆಗೆ ಸ್ಪರ್ಧೆ; ಅಳಿಯ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮಾಜಿ ಸಚಿವ ಮುನಿರತ್ನ ಅವರ ಅಳಿಯ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಮತ್ತು ವೈಟ್​ಫೀಲ್ಡ್ ಡಿಸಿಪಿ ಗಿರೀಶ್ ವರ್ಗಾವಣೆ
Follow us
Rakesh Nayak Manchi
|

Updated on:Apr 23, 2023 | 8:25 PM

ದಾವಣಗೆರೆ: ಮಾಜಿ ಸಚಿವ ಮುನಿರತ್ನ (N Munirathna) ಅವರು ಚುನಾವಣೆಯಲ್ಲಿ (Karnataka Assembly Elections 2023) ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಅಳಿಯನೂ ಆಗಿರುವ ದಾವಣಗೆರೆ ಎಸ್​ಪಿ (Davanagere SP) ಸಿಬಿ ರಿಷ್ಯಂತ್ ಸೇರಿ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಬೆಂಗಳೂರಿನ ವೈಟ್​​ಫೀಲ್ಡ್​​​ ಡಿಸಿಪಿ ಗಿರೀಶ್​ ಮತ್ತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರನ್ನು​​ ವರ್ಗಾವಣೆ ಮಾಡಲಾಗಿದೆ. ಅದರಂತೆ ವೈಟ್​​ಫೀಲ್ಡ್ ವಿಭಾಗಕ್ಕೆ​​​ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ನೂತನ ಡಿಸಿಪಿ ಆಗಿ ನೇಮಕ ಮಾಡಲಾಗಿದ್ದು, ಅರೂಣ್ ಕೆ ಅವರನ್ನು ದಾವಣಗೆರೆ ನೂತನ ಎಸ್​ಪಿಯನ್ನಾಗಿ ನೇಮಕ ಮಾಡಲಾಗಿದೆ. ರಿಷ್ಯಂತ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಪ್ರಚೋದನಕಾರಿ ಭಾಷಣ; ಸಚಿವ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು

ಯಾವುದೇ ಅಧಿಕಾರಿಯ ಸಂಬಂಧಿಕರು ಚುನಾವಣೆಗೆ ಸ್ಪರ್ಧಿಸಿದರೆ ಅಂತಹ ಅಧಿಕಾರಿಯನ್ನ ಚುನಾವಣಾ ಸೇವೆಯಿಂದ ಬಿಡುಗಡೆ ಮಾಡಬೇಕು. ಇದು ಚುನಾವಣಾ ಆಯೋಗದ ನಿಯಮವಾಗಿದೆ. ಇದೇ ಕಾರಣಕ್ಕೆ ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್ ಅವರನ್ನು ಯಾವುದೇ ಹುದ್ದೆ ತೊರಿಸದೇ ವರ್ಗಾವಣೆ ಮಾಡಲಾಗಿದೆ. ಸಿಬಿ ರಿಷ್ಯಂತ್ ಅವರು ಸಚಿವ ಮುನಿರತ್ನ ಅವರ ದ್ವಿತೀಯ ಪುತ್ರಿಯ ಪತಿಯಾಗಿದ್ದಾರೆ. ರಿಷ್ಯಂತ್ ಅವರಿಂದ ತರವಾದ ಸ್ಥಾನಕ್ಕೆ ಕಲಬುರ್ಗಿ ಎಸ್​ಪಿ ಡಾ. ಅರುಣ್ ಕೆ ಅವರನ್ನು ನಿಯೋಜಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಖಡಕ್ ಐಪಿಎಸ್ ಅಧಿಕಾರಿ ಎಂದೇ ಹೆಸರಾಗಿದ್ದ ರಿಷ್ಯಂತ್ ಅವರ ವರ್ಗಾವಣೆ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್​ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ವಿರುದ್ಧ ರಿಷ್ಯಂತ್ ಅವರು ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಲ ಪುಡಿ ರೌಡಿಗಳನ್ನ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Sun, 23 April 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ