ಯಾದಗಿರಿಯಲ್ಲಿ 3 ಪಕ್ಷಗಳಿಗೆ ಟಕ್ಕರ್ ಕೊಡುತ್ತಿರುವ ಪಕ್ಷೇತರ ಅಭ್ಯರ್ಥಿ: ಬಲಾಬಲ ಹೇಗಿದೆ?

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು‌‌ ಮೂರು ದಿನ ಬಾಕಿ ಉಳಿದಿದೆ. ಹೀಗಾಗಿ ಕೊನೆ‌ ಹಂತದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ಅಭ್ಯರ್ಥಿಗಳು ಭರ್ಜರಿ ಪ್ರಚಾರದ ಮೂಲಕ ಮತದಾರರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಕ್ಷೇತ್ರದಲ್ಲಿ ಮಾತ್ರ ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿ ಭರ್ಜರಿ ಟಕ್ಕರ್ ಕೊಡುತ್ತಿದ್ದಾರೆ. ಹೇಗಿದೆ ಯಾದಗಿರಿ ಕ್ಷೇತ್ರದ ರಣ ಕಣ ಅಂತೀರಾ? ಈ‌ ಸ್ಟೋರಿ ನೋಡಿ.

ಯಾದಗಿರಿಯಲ್ಲಿ 3 ಪಕ್ಷಗಳಿಗೆ ಟಕ್ಕರ್ ಕೊಡುತ್ತಿರುವ ಪಕ್ಷೇತರ ಅಭ್ಯರ್ಥಿ: ಬಲಾಬಲ ಹೇಗಿದೆ?
ಯಾದಗಿರಿ ಪಕ್ಷೇತರ ಅಭ್ಯರ್ಥಿ ಟಕ್ಕರ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 08, 2023 | 8:04 AM

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Election)ಗೆ ಇನ್ನು ಮೂರೆ ದಿನ ಬಾಕಿ ಉಳಿದಿದೆ. ಹೀಗಾಗಿ ಕೊನೆ‌ ಹಂತದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ಅಭ್ಯರ್ಥಿ ಭರ್ಜರಿ ಪ್ರಚಾರದ ಮೂಲಕ ಮತದಾರರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲಿ ಮಾತ್ರ ಮೂರು ಪಕ್ಷಗಳ ಅಭ್ಯರ್ಥಿಗಳಿಗೂ, ಪಕ್ಷೇತರ ಅಭ್ಯರ್ಥಿ ಭರ್ಜರಿ ಟಕ್ಕರ್ ಕೊಡುತ್ತಿದ್ದಾರೆ. ಹೌದು ಯಾದಗಿರಿ(Yadagiri) ಕ್ಷೇತ್ರ ಅಂದ್ರೆ, ಸಾಕು ರೆಡ್ಡಿ ಸಮುದಾಯದ ನಾಯಕರೆ ಪ್ರಾಬಲ್ಯ ಹೊಂದಿರುವ ಕ್ಷೇತ್ರ, ಪ್ರತಿ ಬಾರಿ ಚುನಾವಣೆಯಲ್ಲೂ ರೆಡ್ಡಿ ಸಮುದಾಯದವರೆ ಇಲ್ಲಿ‌ ಗೆದ್ದು ಬರುತ್ತಾರೆ. ಕಳೆದ ಚುನಾವಣೆಯಲ್ಲೂ ಸಹ ರೆಡ್ಡಿ ಸಮುದಾಯಕ್ಕೆ ವೆಂಕಟರೆಡ್ಡಿ ಮುದ್ನಾಳ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದಾರೆ.

ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿ ಟಕ್ಕರ್  

ಇನ್ನು ಈ ಬಾರಿ ಕೂಡ ಮತ್ತೆ ಬಿಜೆಪಿ ವೆಂಕಟರಡ್ಡಿ ಮುದ್ನಾಳ್ ಸ್ಪರ್ಧೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್​ನಿಂದ ರೆಡ್ಡಿ ಸಮುದಾಯದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಕಣದಲ್ಲಿದ್ರೆ, ಜೆಡಿಎಸ್​ನಿಂದ ಮಾಜಿ ಸಚಿವ ಡಾ.ಎ ಬಿ ಮಾಲಕರೆಡ್ಡಿ ಅಖಾಡದಲ್ಲಿದ್ದಾರೆ. ಹೀಗಾಗಿ ಈ ಬಾರಿ‌ ರೆಡ್ಡಿ ಮದ್ಯವೇ ಕಾಳಗ ನಡೆಯುತ್ತೆ ಅಂತ ಅಂದುಕೊಳ್ಳಲಾಗಿತ್ತು. ಆದ್ರೆ, ಕೊನೆ ಹಂತದಲ್ಲಿ ವಾಲ್ಮೀಕಿ ಸಮುದಾಯದ ಹನುಮೆಗೌಡ ಬಿರನಕಲ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡದಲ್ಲಿ ಇಳಿದಿದ್ದು, ಚುನಾವಣಾ ಅಖಾಡದ ಸ್ವರೂಪವೆ ಬದಲಾಗಿದೆ. ಅಷ್ಟೇ ಅಲ್ಲದೆ ಮೂರು ಪಕ್ಷದ ಅಭ್ಯರ್ಥಿಗಳಿಗೆ ತಳಮಳ ಕೂಡ ಶುರುವಾಗಿದೆ. ಯಾದಗಿರಿ ಸಾಮಾನ್ಯ ಕ್ಷೇತ್ರವಾದ್ರು, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಿರನಕಲ್ ಫಿಲ್ಡಿಗಿಳಿದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ:ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯ: ಮನೆ ಮನೆಗೆ ತೆರಳಿ ಮತಯಾಚನೆ, ಮದ್ಯ ಮಾರಾಟ ನಿಷೇಧ

ಪಕ್ಷೇತರ ಅಭ್ಯರ್ಥಿ ಹನುಮೆಗೌಡ ಬಿರನಕಲ್ ಅಬ್ಬರದ ಪ್ರಚಾರ

ನಾಮಪತ್ರ ಸಲ್ಲಿಸಿದ ದಿನದಿಂದ‌ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿರನಕಲ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಯಾದಗಿರಿ ಮತಕ್ಷೇತ್ರದ ಹಳ್ಳಿಗಳಿಗೆ ಸುತ್ತಾಡಿ ಒಂದು ಅವಕಾಶ ಹಿಂದುಳಿವರಿಗೆ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದ್ದಕ್ಕೂ ಮೊದಲು ಬಿರನಕಲ್ ಜೆಡಿಎಸ್ ಪಕ್ಷದಲ್ಲಿದ್ರು. ನಾಲ್ಕೈದು ವರ್ಷ ಜೆಡಿಎಸ್‌ ಪಕ್ಷವನ್ನ ಯಾದಗಿರಿ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ರು, ಇದೆ ಕಾರಣಕ್ಕೆ ಜೆಡಿಎಸ್ ಟಿಕೆಟ್ ಸಿಗುತ್ತೆ ಎಂದು ಅಂದುಕೊಳ್ಳಲಾಗಿತ್ತು. ಆದ್ರೆ‌, ಕೊನೆ‌ ಹಂತದಲ್ಲಿ ಕಾಂಗ್ರೆಸ್​ನಿಂದ ಮುನಿಸಿಕೊಂಡಿದ್ದ ಮಾಲಕರಡ್ಡಿ ಜೆಡಿಎಸ್‌ ಮಣೆ‌ ಹಾಕಿತ್ತು. ‌ಪಕ್ಷಕ್ಕಾಗಿ ದುಡಿದ್ರು ಟಿಕೆಟ್ ಕೈತಪ್ಪಿತಲ್ಲ ಎನ್ನುವ ಒಂದೇ ಕಾರಣಕ್ಕೆ ಆದದ್ದು ಆಗಲಿ ಎಂದು ಬಿರನಕಲ್ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ.

ಯಾದಗಿರಿ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದ ಮತದಾರರೆ ಹೆಚ್ಚಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಮತದಾರರು ಇಲ್ಲಿ‌‌ ನಿರ್ಣಾಯಕರಾಗಿದ್ದಾರೆ. 50 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಎಸ್ಸಿ, ಎಸ್ಟಿ‌‌, ಕುರುಬ ಹಾಗೂ ಕೋಲಿ ಸಮುದಾಯದ ಮತದಾರರು ಕೂಡ ಗಣನೀಯವಾಗಿದ್ದಾರೆ. ಮೂರು ಪಕ್ಷದಿಂದ ರೆಡ್ಡಿ ಸಮುದಾಯದವರೆ ಕಣದಲ್ಲಿರುವ ಕಾರಣಕ್ಕೆ ಹಿಂದುಳಿದ ಸಮುದಾಯಕ್ಕೆ ಸೇರಿದ ಹನುಮೆಗೌಡ ಬಿರನಕಲ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಹಿಂದೆ‌ ಅಹಿಂದ‌ ಸಂಘಟನೆ ಕಟ್ಟಿ ಸಾಕಷ್ಟು ಹೆಸರು ಕೂಡ‌ ಮಾಡಿದ್ರು, ಅದೇ ಕಾರಣಕ್ಕೆ ಇದೀಗ ಅಹಿಂದ ಸಂಘಟನೆ ಕೂಡ ಬಿರನಕಲ್​ಗೆ ಬೆಂಬಲ ನೀಡಿದೆ. ಅಷ್ಟೇ ಅಲ್ದೆ ಗೆದ್ದು ಬಂದ ಬಳಿಕ 20 ಎಕರೆ‌ ಜಮೀನು ಖರೀದಿ ಮಾಡಿ ಬಡವರಿಗೆ ನಿವೇಶನ ಕೊಡುವ ಭರವಸೆ ಕೊಡುತ್ತಿದ್ದಾರೆ. ‘ಹಿಂದುಳಿದ ಮತದಾರರು ಹೆಚ್ಚಿದ್ರು ಹಿಂದುಳಿದವರು ಶಾಸಕರಾಗುತ್ತಿಲ್ಲ, ಇದೆ ಕಾರಣಕ್ಕೆ ನಾನು ಈ ಸ್ಪರ್ಧೆ ಮಾಡ್ತಾಯಿದ್ದೆನೆ ಹೀಗಾಗಿ ಒಂದು ಅವಕಾಶ ಕೊಡಿ ಎಂದ ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Karnataka Assembly Polls: ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಭಿಕ್ಷೆಯೆತ್ತಿದ ಹಣದಿಂದ ಠೇವಣಿ ಪಾವತಿಸಿದರು!

ಒಟ್ಟಿನಲ್ಲಿ ಯಾದಗಿರಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಕಣದಲ್ಲಿರುವ ಕಾರಣಕ್ಕೆ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಮೂರು ಜನ ರೆಡ್ಡಿಗಳ ಮದ್ಯ ಅಹಿಂದ ನಾಯಕ ಹನುಮೆಗೌಡ ಬಿರನಕಲ್ ಗೆದ್ದು ಬರುತ್ತಾರ ಎಂದು ಕಾದು ನೋಡಬೇಕಾಗಿದೆ. ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ