Karnataka Assembly Polls: ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಭಿಕ್ಷೆಯೆತ್ತಿದ ಹಣದಿಂದ ಠೇವಣಿ ಪಾವತಿಸಿದರು!

Karnataka Assembly Polls: ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಭಿಕ್ಷೆಯೆತ್ತಿದ ಹಣದಿಂದ ಠೇವಣಿ ಪಾವತಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 19, 2023 | 12:32 PM

ಭಿಕ್ಷೆ ಬೇಡಿ ಸಂಗ್ರಹವಾದ ರೂ. 10,000 ಹಣವನ್ನು (ನಾಣ್ಯಗಳನ್ನು) ಯಂಕಪ್ಪ ತಮ್ಮ ನಾಮಪತ್ರ ಸಲ್ಲಿಸುವಾಗ ಪಾವತಿಸಿದ್ದಾರೆ.

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲೊಬ್ಬ ಯುವಕ ಪಕ್ಷೇತರ ಅಭ್ಯರ್ಥಿಯಾಗಿ (independent candidate) ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲೇನು ವಿಶೇಷ ಅಂತ ಹೇಳಬೇಡಿ, ವಿಶೇಷತೆ ಖಂಡಿತವಾಗ್ಲೂ ಇದೆ. ಅತ್ಯಂತ ಬಡಕುಟುಂಬದವರಾಗಿರುವ ಅಭ್ಯರ್ಥಿ ಯಂಕಪ್ಪಗೆ (Yenkappa) ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾದ ರೂ. 10,000 ಠೇವಣಿ (deposit) ಹಣ ಇವರಲ್ಲಿರಲಿಲ್ಲ. ಅಷ್ಟು ಹಣವನ್ನು ಜಮಾಯಿಸಲು ಯಂಕಪ್ಪ ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿರುವ ಎಲ್ಲಾ ಊರುಗಳಲ್ಲಿ ಸಂಚರಿಸಿ ಭಿಕ್ಷೆ ಎತ್ತಿದ್ದಾರೆ. ಭಿಕ್ಷೆ ಬೇಡಿದ ಸ್ಥಳಗಳಲ್ಲಿ ಜನ ನೀಡಿದ ಆಹಾರವನ್ನು ಸೇವಿಸಿ ರಾತ್ರಿ ಸಮಯವನ್ನು ಗುಡಿಗುಂಡಾರಗಳಲ್ಲಿ ಕಳೆದಿದ್ದಾರೆ. ಜನ ನಾಣ್ಯಗಳನ್ನು ಭಿಕ್ಷೆ ಹಾಕುತ್ತಾರೆಯೇ ಹೊರತು ನೋಟುಗಳನ್ನಲ್ಲ. ಹಾಗೆ ಸಂಗ್ರಹವಾದ ರೂ. 10,000 ಹಣವನ್ನು (ನಾಣ್ಯಗಳನ್ನು) ಯಂಕಪ್ಪ ತಮ್ಮ ನಾಮಪತ್ರ ಸಲ್ಲಿಸುವಾಗ ಪಾವತಿಸಿದ್ದಾರೆ. ನಾಣ್ಯಗಳನ್ನು ಎಣಿಸುವುದರಲ್ಲಿ ಅಧಿಕಾರಿಗಳು ಸುಸ್ತಾಗಿತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ