ಯಾದಗಿರಿ; ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಕ್ಯಾಬ್ ಡ್ರೈವರ್; ಲಾಡ್ಜ್ ಪರಿಶೀಲನೆ ವೇಳೆ ಯುವಕ ಅಂದರ್

ಆ ಯುವಕ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ. ಆದ್ರೆ, ಹಣದ ಆಸೆಗೆ ಖತರ್ನಾಕ್ ಕೆಲಸ ಮಾಡಲು ಮುಂದಾಗಿದ್ದ. ಪೊಲೀಸರು ಚುನಾವಣೆ ಎಂದು ಲಾಡ್ಜ್​ಗಳನ್ನ ಪರಿಶೀಲನೆ ಮಾಡಲು ಹೋಗಿದ್ರು. ಇದೆ ವೇಳೆ ಆ ಯುವಕ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಯುವಕನ ಬಳಿಯಿರುವ ವಸ್ತುಗಳು ಹಾಗೂ ಯವಕ ಹೇಳಿದ ಮಾತಿಗೆ ಖುದ್ದು ಪೊಲೀಸರೆ ಶಾಕ್ ಆಗಿದ್ದರು. ಅಷ್ಟಕ್ಕೂ ಆ ಯುವಕ ಯಾರ ಕೊಲೆ ಮಾಡಲು ಹೊಂಚು ಹಾಕಿದ್ದ ಅಂತೀರಾ ಇಲ್ಲಿದೆ ನೋಡಿ.

ಯಾದಗಿರಿ; ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಕ್ಯಾಬ್ ಡ್ರೈವರ್; ಲಾಡ್ಜ್ ಪರಿಶೀಲನೆ ವೇಳೆ ಯುವಕ ಅಂದರ್
ಸುಫಾರಿ ನೀಡಿದ ನಾನ್ಯಾ ನಾಯ್ಕ್, ​ ಕ್ಯಾಬ್ ಡ್ರೈವರ್ ಪವನ್​(ಎಡದಿಂದ)
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 23, 2023 | 1:55 PM

ಯಾದಗಿರಿ: ಕೊಲೆಗೆ ಹೊಂಚು ಹಾಕಿ ಕುಳಿತ್ತಿದ್ದ ಯುವಕನನ್ನ ಅಂದರ್ ಮಾಡಿದ ಪೊಲೀಸರು. ಲಾಡ್ಜ್ ಪರಿಶೀಲನೆ ವೇಳೆ ಮಾರಾಕಾಸ್ತ್ರಗಳ ಜೊತೆಗೆ ಲಾಕ್ ಆದ ಸುಫಾರಿ ಕಿಲ್ಲರ್(Supari Killer) . ಹಣದ ಆಸೆಗೆ ಕೊಲೆ ಮಾಡಲು ಮುಂದಾಗಿದ್ದ ಕ್ಯಾಬ್ ಡ್ರೈವರ್. ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ. ಹೌದು ಈ ಮಾರಾಕಾಸ್ತ್ರಗಳನ್ನೊಮ್ಮೆ ನೋಡಿದ್ರೆ ಎಂತವರಿಗೂ ಕೂಡ ಭಯ ಆಗುತ್ತೆ. ಇಂತಹ ಮಾರಾಕಾಸ್ತ್ರಗಳನ್ನ ಬಳಿಯಿಟ್ಟುಕೊಂಡು ಕೊಲೆ ಮಾಡಲು ಹೊಂಚು ಹಾಕಿ ಕುಳಿತ್ತಿದ್ದ ಯುವಕನನ್ನ ಯಾದಗಿರಿ ನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಈ ಫೋಟೋದಲ್ಲಿರುವ ಯುವಕನ ಹೆಸರು ಪವನ ಕುಮಾರ್. ಮೂಲತ ಯಾದಗಿರಿ ತಾಲೂಕಿನ ಕುರಕುಂಬಳ ತಾಂಡದ ನಿವಾಸಿಯಾಗಿರುವ ಪವನ್ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ, ಇದೆ ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡದ ನಾನ್ಯಾ ನಾಯ್ಕ್ ಎಂಬಾತ ಯುವಕನೋರ್ವನ ಕೊಲೆ ಮಾಡುವಂತೆ ಈ ಪವನ್​ಗೆ ಸುಪಾರಿ ಕೊಟ್ಟಿದ್ದ. ನಾನು ಹೇಳಿದ ಯುವಕನಿಗೆ ಕೊಲೆ ಮಾಡಿದ್ರೆ 50 ಸಾವಿರ ನಗದು ಹಣ ಹಾಗೂ 10 ಗ್ರಾಂನ ಒಂದು ಗೋಲ್ಡ್ ರಿಂಗ್ ಕೊಡಿಸುವುದಾಗಿ ಹೇಳಿದ್ದ. ಇದೆ ಕಾರಣಕ್ಕೆ ಕ್ಯಾಬ್ ಡ್ರೈವಿಂಗ್ ಕೆಲಸ ಬಿಟ್ಟು 50 ಸಾವಿರ ಹಣವನ್ನ ಪಡೆದು ಕೊಲೆ ಮಾಡಲು ಒಂದು ವಾರದಿಂದ ಹಿಂದೆ ಯಾದಗಿರಿ ನಗರಕ್ಕೆ ಬಂದು ಸೇರಿದ್ದ.

ಇದ್ದಕ್ಕೂ ಮೊದಲು ಕೊಲೆ ಮಾಡಲು ಬೇಕಾಗುವ ಮಾರಾಕಾಸ್ತ್ರಗಳನ್ನ ಪುಣೆಗೆ ಹೋಗಿ ಒಂದು ಕಂಟ್ರಿ ಪಿಸ್ತೂಲ್, ಮೂರು ಗುಂಡುಗಳು,ಬಟನ್ ಚಾಕು, ಪಂಚ್ ಹಾಗೂ ಕಟಿಂಗ್ ಪ್ಲೇಯರ್ ಖರೀದಿ ಮಾಡಿಕೊಂಡು ಬಂದಿದ್ದ. ಅಷ್ಟಕ್ಕೂ ಈ ನಾನ್ಯಾ ನಾಯ್ಕ್ ಯಾರ ಕೊಲೆಗೆ ಸುಪಾರಿ ಕೊಟ್ಟಿದ್ದ ಅಂದ್ರೆ, ನಗರದ ಸಾಯಿ ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಎಕ್ಸ್ ರೇ ತೆಗೆಯುವ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತನ ಕೊಲೆಗೆ ಸುಪಾರಿ ಕೊಟ್ಟಿದ್ದ. ಒಂದು ವಾರದ ಹಿಂದೆ ಬೆಂಗಳೂರಿನಿಂದ ಯಾದಗಿರಿಗೆ ಬಂದಿದ್ದ ಪವನ್, ನಗರದ ಅಶೋಕ್ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದ. ಒಂದು ವಾರ ಕಳೆದರೂ ಸಹ ಸುರೇಶ್ ಒಬ್ಬಂಟಿಯಾಗಿ ಸಿಕ್ಕರಲಿಲ್ಲ. ಆದ್ರೆ, ಇವತ್ತು ನಾಳೆ ಒಬ್ಬಂಟಿಯಾಗಿ ಸಿಕ್ಕೆ ಸಿಗುತ್ತಾನೆ, ಆವಾಗ ಕೊಲೆ ಮಾಡಿಯೇ ತೀರುತ್ತೆನೆ ಎಂದು ಪವನ್ ಅಂದುಕೊಂಡಿದ್ದ.

ಇದನ್ನೂ ಓದಿ:ಮಂಗಳೂರು: ಮೊಬೈಲ್​ಗಾಗಿ ಕೊಲೆ ಮಾಡಿದ ಗ್ಯಾಂಗ್; ನಾಲ್ಕು ಜನ ಆರೋಪಿಗಳ ಬಂಧನ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಸಾಮಾನ್ಯವಾಗಿ ನಗರದ ಎಲ್ಲಾ ಲಾಡ್ಜ್ ಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. ಹೀಗಾಗಿ ಅಶೋಕ್ ಲಾಡ್ಜ್ ಪರಿಶೀಲನೆ ವೇಳೆ ಸಂಶಯ ಬಂದಿರುವ ಕಾರಣಕ್ಕೆ ಇತನನ್ನ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪವನ್ ಬಳಿದ್ದ ಮಾರಾಕಾಸ್ತ್ರಗಳನ್ನ ವಶಕ್ಕೆ ಪಡೆದು ಅರೆಸ್ಟ್ ಮಾಡಿದ್ದಾರೆ. ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ನಾನ್ಯಾ ನಾಯ್ಕ್ ಸುರೇಶ್ ಕೊಲೆಗೆ ಸುಪಾರಿ ನೀಡಿರುವ ಬಗ್ಗೆ ಸತ್ಯ ಬಾಯಿ ಬಿಟ್ಟಿದ್ದಾನೆ. ಬಳಿಕ ಕೂಡ್ಲೆ ಪೊಲೀಸರು ನಾನ್ಯಾ ನಾಯ್ಕ್ ನನ್ನ ಯಾದಗಿರಿ ನಗರದಲ್ಲೇ ಅರೆಸ್ಟ್ ಮಾಡಿದ್ದಾರೆ.

ನಾನ್ಯಾ ನಾಯ್ಕ್ ಸುರೇಶ್ ಕೊಲೆಗೆ ಸುಪಾರಿ ಕೊಟ್ಟಿದ್ಯಾಕೆ?

ಅಷ್ಟಕ್ಕೂ ಈ ನಾನ್ಯಾ ನಾಯ್ಕ್ ಸುರೇಶ್ ಕೊಲೆಗೆ ಸುಪಾರಿ ಕೊಟ್ಟಿದಾದ್ರು ಯಾಕೆ ಅಂದ್ರೆ, ಈ ಸುರೇಶ್ ಕಳೆದ ಕೆಲ ವರ್ಷಗಳಿಂದ ಸಾಯಿ ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಎಕ್ಸ್ ರೇ ಮಾಡುತ್ತಿದ್ದ. ಸಾಮಾನ್ಯವಾಗಿ ನಿತ್ಯ ಹತ್ತಾರು ಮಂದಿ ಇಲ್ಲಿಗೆ ಬಂದು ಎಕ್ಸರೇ ಮಾಡಿಸಿಕೊಂಡು ಹೋಗುತ್ತಾರೆ. ಜೊತೆಗೆ ಮಹಿಳೆಯರು ಕೂಡ ಸಾಮಾನ್ಯವಾಗಿ ಬರುತ್ತಾರೆ. ಅದರಂತೆ ಕಳೆದ ಎಂಟು ತಿಂಗಳ ಹಿಂದೆ ಈ ನಾನ್ಯಾ ನಾಯ್ಕ್ ತನ್ನ ಪತ್ನಿಗೆ ಎದೆ ನೋವು ಕಾಣಿಸಿಕೊಂಡಿದ್ದಕ್ಕೆ ಇಲ್ಲಿಗೆ ಎಕ್ಸ್ ರೇ ಮಾಡಿಸಲು ಬಂದಿದ್ದ. ಸಹಜವಾಗಿ ಎಕ್ಸ್ ರೇ ಮಾಡುವಾಗ ಕೇವಲ ರೋಗಿಯನ್ನ ಮಾತ್ರ ಒಳಗೆ ಕರೆದುಕೊಂಡು ಹೋಗಿ ಎಕ್ಸ್ ರೇ ಮಾಡುತ್ತಾರೆ. ಎಕ್ಸ್ ರೇ ಮಾಡಬೇಕು ಅಂದ್ರೆ, 10 ರಿಂದ 15 ನಿಮಿಷ ಸಮಯಬೇಕಾಗುತ್ತೆ. ಆದ್ರೆ, ಈ ನಾನ್ಯಾ ತನ್ನ ಹೆಂಡ್ತಿ ಜೊತೆಗೆ ಸುರೇಶ್ ಒಳಗಡೆ ಕರೆದುಕೊಂಡು ಹೋಗಿ ಮಾಡಬಾರದು ಮಾಡಿದ್ದಾನೆ ಎಂದು ಸಂಶಯ ವ್ಯಕ್ತ ಪಡಿಸಿದ್ದ.

ಇದನ್ನೂ ಓದಿ:ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್

ಹೌದು 10 ರಿಂದ 15 ನಿಮಿಷ ಒಳಗಡೆ ಕರೆದುಕೊಂಡು ಹೋಗಿ ಮಾಡಬಾರದು ಮಾಡಿದ್ದಾನೆ ಹೀಗಾಗಿ ತನ್ನ ಪತ್ನಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯ ವ್ಯಕ್ತ ಪಡಿಸಿ, ಇದೆ ಕಾರಣಕ್ಕೆ ಕಳೆದ ಎಂಟು ತಿಂಗಳಿನಿಂದ ಸುರೇಶ್​ಗೆ ಕೊಲೆ ಮಾಡಬೇಕು ಎಂದು ನಾನ್ಯಾ ಪ್ಲ್ಯಾನ್ ಮಾಡಿದ್ದ. ಹೀಗಾಗಿ ಕಳೆದ ಆರು ತಿಂಗಳ ಹಿಂದೆ ನಾನ್ಯಾ ಇದೆ ಸುರೇಶ್ ಗೆ ಕಾರು ಗುದ್ದಿ ಕೊಲೆ ಮಾಡಲು ಯತ್ನಿಸಿದ್ದ. ಆದ್ರೆ, ಅದೃಷ್ಟವಶಾತ್ ಸುರೇಶ್​ಗೆ ಸಣ್ಣಪುಟ್ಟ ಗಾಯಗಳಾಗಿದ್ವು. ಸುರೇಶ್​ನಿಗೆ ತನಗೆ ನಾನ್ಯಾ ಕೊಲೆ ಮಾಡಲು ಯತ್ನಿಸಿ ಕಾರು ಗುದ್ದಿದ್ದಾನೆ ಎಂದು ಗೊತ್ತೆ ಇರಲಿಲ್ಲ ಇದೊಂದು ಮಿಸ್ ಆಗಿರುವ ಅಪಘಾತ ಅಂದುಕೊಂಡಿದ್ದ.

ಆದರೆ ನಾನ್ಯಾ ಮಾತ್ರ ಹೇಗಾದ್ರು ಮಾಡಿ ಸುರೇಶ್ ಕಥೆ ಮುಗಿಸಿಯೇ ಬಿಡಬೇಕು ಅಂತ ಸ್ಕೆಚ್ ಹಾಕಿದ್ದ. ತನ್ನಿಂದ ಕೊಲೆ ಸಾಧ್ಯವಿಲ್ಲ ಎಂದು ಗೊತ್ತಾಗುತ್ತಿದ್ದ ಹಾಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಗೆ ಕರೆಸಿ ಸುಪಾರಿ ಕೊಟ್ಟು ಕೊಲೆ ಮಾಡಲು ಪ್ಲಾನ್ ಮಾಡಿದ್ದ. ಆದ್ರೆ, ಪ್ಲಾನ್ ಸಕ್ಸಸ್ ಆಗುವ ಮುನ್ನವೇ ನಾನ್ಯಾ ನಾಯ್ಕ್ ಮತ್ತು ಪವನ್ ಅರೆಸ್ಟ್ ಆಗಿದ್ದಾರೆ. ಪೊಲೀಸರು ಲಾಡ್ಜ್ ಪರಿಶೀಲನೆ ಮಾಡಲು ಹೋಗಿಲ್ಲ ಅಂದ್ರೆ, ಒಂದೆರಡು ದಿನದಲ್ಲಿ ಸುರೇಶ್ ಕೊಲೆ ಆಗ್ತಾಯಿದ್ದ ಎಂದು ಹೇಳಲಾಗುತ್ತಿದೆ. ಸುರೇಶ್ ಗೆ ಮಾತ್ರ ತನಗೆ ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಎಂದು ಸ್ವಲ್ಪವೂ ಗೊತ್ತಿರಲಿಲ್ಲ.

ಇದನ್ನೂ ಓದಿ:ಹೊನ್ನಾವರ: ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಭೀಕರ ಕೊಲೆ

ಒಟ್ಟಿನಲ್ಲಿ ಎಕ್ಸ್ ರೇಗೆಂದು ಪತ್ನಿಯನ್ನ ಕರೆದುಕೊಂಡು ಬಂದು ಯವಕನ ಮೇಲೆ ಸಂಶಯ ವ್ಯಕ್ತಪಡಿಸಿ ನಾನ್ಯಾ ಯುವಕನ ಕೊಲೆಗೆ ಸುಪಾರಿ ಕೊಟ್ಟಿದ್ದ. ಅದೃಷ್ಟ ಚೆನ್ನಾಗಿದ್ದ ಸುರೇಶ್, ಒಬ್ಬೊಂಟಿಯಾಗಿ ಸಿಕ್ಕಿರದ ಕಾರಣಕ್ಕೆ ಬದುಕುಳಿದಿದ್ದಾನೆ. ಅಷ್ಟಕ್ಕೂ ಅನೈತಿಕ ಸಂಬಂಧವೋ ಅಥವಾ ಬರಿ ಶಂಕೆಯ ಮೇಲೆ ನಾನ್ಯಾ ಕೊಲೆ ಮಾಡಲು ಸುಫಾರಿ ನೀಡಿದ್ದನು ತನಿಖೆಯಿಂದ ಗೊತ್ತಾಗಬೇಕಿದೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ