AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್

ಈಕೆ ಇತರ ಯುವಕರೊಂದಿಗೆ ಸೇರಿ ಟಿಕ್ ಟಾಕ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಳು. ಇದನ್ನು ಸಹಿಸಲಾಗದ ಪ್ರಿಯಕರ, ಆಕೆಯನ್ನು ಮುಂಬೈನಿಂದ ಯಾದಗಿರಿಗೆ ಕರೆತಂದು ಮೋಜು ಮಸ್ತಿ ಮಾಡಿ ಕೊನೆಗೆ ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ.

ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡುತ್ತಿದ್ದ ಪ್ರಿಯತಮೆಯನ್ನು ಕೊಲೆ ಮಾಡಿದ ಪ್ರೇಮಿ ಅರೆಸ್ಟ್
Rakesh Nayak Manchi
|

Updated on:Apr 22, 2023 | 7:11 PM

Share

ಯಾದಗಿರಿ: ಇದು ಮುಂಬೈ ಟು ಯಾದಗಿರಿ ಮರ್ಡರ್ ಮಿಸ್ಟರಿ. ಟಿಕ್ ಟಾಕ್ (Tiktok) ಸ್ಟಾರ್ ಆಗುವ ಕನಸು ಕಾಣುತ್ತಿದ್ದ ಯುವತಿಯೊಬ್ಬಳು ತನ್ನ ಸ್ನೇಹಿತರ ಜೊತೆ ಸೇರಿ ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಆಕ್ಟಿವ್ ಆಗಿದ್ದಳು. ಇತ್ತ ಆಕೆಯ ಪ್ರಿಯಕರನಿಗೆ ಇದು ಸಹಿಸಲಾಗದ ಸಂಗತಿಯಾಗಿದೆ. ಒಂದೆಡೆ ಬೇರೆ ಯುವಕರೊಂದಿಗೆ ತನ್ನ ಪ್ರಿಯತಮೆ ಟಿಕ್ ಟಾಕ್ ಮಾಡುತ್ತಿದ್ದಾಳೆ, ಇತ್ತ ತನ್ನ ಮದುವೆಯ ಪ್ರಸ್ತಾಪವನ್ನೂ ನಿರಾಕರಿಸಿದ್ದಾಳೆ. ಇದರಿಂದ ಕುಪಿತನಾದ ಪ್ರಿಯಕರ ಆಕೆಯನ್ನು ಮುಂಬೈನಿಂದ ಯಾದಗಿರಿಗೆ ಕರೆತಂದು ಆಕೆಯೊಂದಿಗೆ ಮೋಜು ಮಸ್ತಿ ಮಾಡಿ ನಂತರ ಕೊಲೆ (Murder) ಮಾಡಿ ಸುಟ್ಟು ಹಾಕಿದ್ದಾನೆ.

ಉತ್ತರ ಪ್ರದೇಶದ ಮೂಲದ ಅಂತಿಮಾ ವರ್ಮಾ (25) ಮುಂಬೈನಲ್ಲಿರುವ ಸಹೋದರನ ಮನೆಯಲ್ಲಿ ನೆಲೆಸಿದ್ದಳು. ಈಕೆ ಟಿಕ್ ಟಾಕ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದಳು. ಈಕೆ ನೆಲೆಸಿದ್ದ ಮನೆಯ ಪಕ್ಕದ ಮನೆಯಲ್ಲಿ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ಮೂಲದ ಮಾರುತಿ ರಾಠೋಡ್ ವಾಸವಿದ್ದನು. ಪೇಂಟರ್ ಕೆಲಸ ಮಾಡಿಕೊಂಡಿದ್ದ ಈತನಿಗೆ ಅಂತಿಮಾ ವರ್ಮಾಳ ಮೇಲೆ ಪ್ರೇಮಾಂಕುರವಾಗಿದೆ.

ನಂತರ ಈಕೆಯ ಸಂಪರ್ಕಕ್ಕೆ ಬಂದ ಮಾರುತಿ, ತಾನು ನಿನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಆಕೆ ಸಮ್ಮತಿಯೂ ಸೂಚಿಸಿದ್ದಾಳೆ. ಹೀಗೆ ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಂತಿಮಾ ವರ್ಮಾ ಬೆರೆ ಸ್ನೇಹಿತರ ಜೊತೆ ಸೇರಿ ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಳು. ಇದು ಮಾರುತಿಗೆ ಇಷ್ಟವಿರಲಿಲ್ಲ.

ಬೇರೆ ಯುವಕರೊಂದಿಗೆ ಟಿಕ್ ಟಾಕ್ ಮಾಡಿ ಅದನ್ನು ಹಂಚಿಕೊಳ್ಳುತ್ತಾ ಸಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದ ಅಂತಿಮಾ ವರ್ಮಾ ಎಲ್ಲಿ ತನಗೆ ಕೈ ಕೊಡುತ್ತಾಳೆಯೋ ಎಂಬ ಭಯ ಮಾರುತಿಯನ್ನು ಕಾಡಲು ಆರಂಭಿಸಿದೆ. ಅದರಂತೆ ಆಕೆಯನ್ನು ಪುಸಲಾಯಿಸಿ ಮುಂಬೈನಿಂದ ತನ್ನೂರಿಗೆ ಕರೆತಂದ ಮಾರುತಿ, ಆಕೆಯೊಂದಿಗೆ ಮೋಜು ಮಸ್ತಿ ಮಾಡಿದ್ದಾನೆ.

ಇದನ್ನೂ ಓದಿ: Dangerous Social Media Trend: ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕ

ನಂತರ, ಬೆರೆ ಹುಡುಗನ ಜೊತೆ ಟಿಕ್ ಟಾಕ್ ಮಾಡಿದ್ದಕ್ಕೆ ಆಕ್ಷೇಪ ಎತ್ತಿದ ಮಾರುತಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಅಂತಿಮಾಳನ್ನು ಒತ್ತಾಯಿಸಿದ್ದಾನೆ. ಆದರೆ ಮಾರುತಿಯನ್ನು ಮದುವೆಯಾಗಲು ಆಕೆ ಒಲ್ಲೆ ಎಂದಿದ್ದಾಳೆ. ಈ ವೇಳೆ ಕೋಪಗೊಂಡ ಮಾರುತಿ, ಅಂತಿಮಾ ವರ್ಮಾಳ ಕತ್ತು ಹಿಸುಕಿ ಕೊಲೆ ಮಾಡಿ ಅನುಮಾನ ಬಾರದಂತೆ ಶವವನ್ನ ಪಂಚಶೀಲ ನಗರ ಗ್ರಾಮದಲ್ಲಿರುವ ತನ್ನದೇ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ಮಾತ್ರವಲ್ಲದೆ, ಕೊಲೆ ನಂತರ ತಾನೆ ನದಿಗೆ ಹಾರಿ ಸಾಯುತ್ತೆನೆಂದು ವಿಡಿಯೋದಲ್ಲಿ ಅನುಮಾನ ಬರದಂತೆ ಕಥೆ ಕಟ್ಟಿದ್ದಾನೆ.

ಎಪ್ರಿಲ್ 2 ರಂದು ನಡೆದ ಈ ಕೊಲೆ ಪ್ರಕರಣವನ್ನು ದಾಖಲಿಸಿದ್ದ ಗುರುಮಠಕಲ್ ಠಾಣಾ ಪೊಲೀಸರು, ಸದ್ಯ ಪ್ರಕರಣವನ್ನು ಬೇಧಿಸಿದ್ದಾರೆ. ನದಿಗೆ ಹಾರಿ ಸಾಯುತ್ತೇನೆ ಎಂದು ಮಾರುತಿ ಮಾಡಿಕೊಂಡಿದ್ದ ವಿಡಿಯೋದ ಮೂಲ ಜಾಡು ಹತ್ತಿದ ಪೊಲೀಸರು ಮಾರುತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾರುತಿ ತಾನೇ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪ್ರೇಯತಮೆಯನ್ನು ಬಲಿ ಪಡೆದ ಪಾಗಲ್ ಪ್ರೇಮಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Sat, 22 April 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!