AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dangerous Social Media Trend: ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕ

ಜಾಕೋಬ್ ಸ್ಟೀವನ್ಸ್ ತನ್ನ ಟಿಕ್​​ ಟಾಕ್​​ ಸ್ನೇಹಿತರೊಂದಿಗೆ ಬೆನಾಡ್ರಿಲ್ ಮಾತ್ರೆ ( ನಿದ್ದೆ ಮಾತ್ರೆ) ಯಾರು ಹೆಚ್ಚು ಸೇವಿಸುತ್ತಾರೆ ಎಂಬ ಚಾಲೆಂಜ್​​ನಲ್ಲಿ ಭಾಗಿಯಾಗಿದ್ದಾನೆ. ಈ ಚಾಲೆಂಜ್​​ನ ಭಾಗವಾಗಿ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ಸೇವಿಸಿದ್ದಾನೆ. ಇದು ಆತನಿಗೆ ಓವರ್‌ ಡೋಸ್‌ ಆಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಫೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Dangerous Social Media Trend: ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕ
ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕImage Credit source: NDTV
ಅಕ್ಷತಾ ವರ್ಕಾಡಿ
| Updated By: Rakesh Nayak Manchi|

Updated on:Apr 18, 2023 | 5:06 PM

Share

ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾಗಳಿಂದಲೇ ಜನಪ್ರಿಯತೆಯನ್ನು ಪಡೆದು ಅಭಿಮಾನಿಗಳನ್ನು ಪಡೆದುಕೊಳ್ಳುವ ಯವಕ, ಯುವತಿಯರು ಅದೆಷ್ಟೋ ಇದ್ದಾರೆ. ಸೋಶಿಯಲ್​ ಮೀಡಿಯಾ ಅಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿಗೆ. ಹೌದು ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚಾಲೆಂಜ್ ಹಾಕಲಾಗುತ್ತದೆ. ಇದು ​​ಅದೆಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿರುವ ಪ್ರಸಂಗಗಳು ಇವೆ. ಇದೇ ರೀತಿಯ ಘಟನೆ ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದಿದೆ. ಟಿಕ್​​ ಟಾಕ್​​ನ ಅತಿಯಾದ ಬಳಕೆ ಬಾಲಕನೊರ್ವನ ಪ್ರಾಣವನ್ನೇ ತೆಗೆದಿದೆ.

ಅಮೆರಿಕದ ಓಹಿಯೋದ ಜಾಕೋಬ್ ಸ್ಟೀವನ್ಸ್ (13) ಎನ್ನುವ ಅಪ್ರಾಪ್ತ ಬಾಲಕ ಟಿಕ್​​​ ಟಾಕ್​​​ನಲ್ಲಿ ನೀಡಲಾಗಿದ್ದ ಸವಾಲೊಂದನ್ನು ಸ್ವೀಕರಿಸಿದ್ದಾನೆ. ಇದಾದ ಬಳಿಕ ಅನಾರೋಗ್ಯದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಪತ್ನಿಗೆ ಕಚ್ಚಿತು ಹಾವು: ಪತಿರಾಯ ಪತ್ನಿಗಿಂತ ಮೊದಲು ಹಾವನ್ನು ಆಸ್ಪತ್ರೆಗೆ ಹೊತ್ತು ತಂದ! ಯಾಕೆ ಗೊತ್ತಾ?

ಏನಿದು ಟಿಕ್​​ ಟಾಕ್​​​ ಚಾಲೆಂಜ್?

ಜಾಕೋಬ್ ಸ್ಟೀವನ್ಸ್ ತನ್ನ ಟಿಕ್​​ ಟಾಕ್​​ ಸ್ನೇಹಿತರೊಂದಿಗೆ ಬೆನಾಡ್ರಿಲ್ ಮಾತ್ರೆ ( ನಿದ್ದೆ ಮಾತ್ರೆ) ಯಾರು ಹೆಚ್ಚು ಸೇವಿಸುತ್ತಾರೆ ಎಂಬ ಚಾಲೆಂಜ್​​ನಲ್ಲಿ ಭಾಗಿಯಾಗಿದ್ದಾನೆ. ಈ ಚಾಲೆಂಜ್​​ನ ಭಾಗವಾಗಿ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ಸೇವಿಸಿದ್ದಾನೆ. ಇದು ಆತನಿಗೆ ಓವರ್‌ ಡೋಸ್‌ ಆಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಒಂದು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾಗಿ ABC6.comನ ವರದಿಯಿಂದ ತಿಳಿದು ಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:02 pm, Tue, 18 April 23

‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು