ಗುಂಡಗೆ ಅಲ್ಲ, ಚೌಕಾಕಾರದ ಚಕ್ರಗಳ ಸೈಕಲ್ ಇರಲು ಸಾಧ್ಯವಾ? ಸೈಕಲ್ ಕಂಡುಹಿಡಿದಾಗಿನಿಂದ ಅದರ ಚಕ್ರಗಳು ಗುಂಡಗೇ ಇವೆ. ಉರುಳುವ ಚಕ್ರಗಳು ಗುಂಡಗೇ ಇರಬೇಕು ವಿನಃ, ಬೇರೆ ಯಾವುದೇ ಆಕಾರದಲ್ಲೂ ಚಕ್ರಗಳನ್ನು ನಿರ್ಮಿಸಿದರೆ ಅದು ಮುಂದಕ್ಕೆ ಹೋಗದು, ಅಥವಾ ಅದರ ಉದ್ದೇಶವನ್ನೇ ಪೂರೈಸಲು ಸಾಧ್ಯವಾಗದೆ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಅಲ್ಲವಾ!? ಆದರೆ ಕಾಲಾಯತಸ್ಮೈನಮಃ! ಅಸಾಧ್ಯವೂ ಸಾಧ್ಯವಾಗುವ ಕಾಲ ಇದು. ಸೂರ್ಯ ಗುಂಡಗೆ ಸುತ್ತಿದ್ದಾನೆ, ಚಂದ್ರನೂ ದುಂಡಾಗಿದ್ದಾನೆ. ಅನಾದಿಕಾಲದಿಂದಲೂ ತಿರುಗತ್ತಲೇ ಇರುವ ಭೂಮಿಯೂ ಗುಂಡಗೇ ಅಲ್ಲವಾ ಇರೋದು! ಆದರೆ ಇಲ್ಲಿ ಸೈಕಲ್‌ನ ಟೈರ್‌ಗಳು ಚೌಕವಾಗಿವೆ.