RCB: ಅಮೂಲ್ಯ ಮಕ್ಕಳು ಕೂಡ ಆರ್ಸಿಬಿ ಫ್ಯಾನ್ಸ್; ಕಪ್ ಹಿಡಿದ ಕಂದಮ್ಮಗಳ ಫೋಟೋಸ್ ವೈರಲ್
Royal Challengers Bengaluru: ಲಕ್ಷಾಂತರ ಅಭಿಮಾನಿಗಳು ಆರ್ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಾರೆ. ಅದೇ ರೀತಿ ನಟಿ ಅಮೂಲ್ಯ ಅವರ ಅವಳಿ ಮಕ್ಕಳ ವಿಶೇಷವಾದ ಫೋಟೋಶೂಟ್ ಗಮನ ಸೆಳೆದಿದೆ.
Updated on: Apr 17, 2023 | 8:42 PM

ಕನ್ನಡಿಗರಿಗೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದರೆ ಎಲ್ಲಿಲ್ಲದ ಪ್ರೀತಿ. ಐಪಿಎಲ್ ಪ್ರತಿ ಸೀಸನ್ನಲ್ಲೂ ಆರ್ಸಿಬಿ ಅಭಿಮಾನಿಗಳ ಅಬ್ಬರ ಜೋರಾಗಿರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ.

ಲಕ್ಷಾಂತರ ಅಭಿಮಾನಿಗಳು ಆರ್ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಇದ್ದರಂತೂ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಸೆಲೆಬ್ರಿಟಿಗಳ ವಲಯದಲ್ಲೂ ಐಪಿಎಲ್ ಕ್ರೇಜ್ ಜೋರಾಗಿದೆ.

ನಟಿ ಅಮೂಲ್ಯ ಅವರು ಪ್ರತಿ ವಿಶೇಷ ಸಂದರ್ಭದಲ್ಲಿ ಮಕ್ಕಳ ಫೋಟೋಶೂಟ್ ಮಾಡಿಸುತ್ತಾರೆ. ಅವರ ಅವಳಿ ಗಂಡು ಮಕ್ಕಳು ಈಗ ಆರ್ಸಿಬಿ ಜರ್ನಿ ಧರಿಸಿ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಅಮೂಲ್ಯ ಅಭಿಮಾನಿಗಳ ವಲಯದಲ್ಲಿ ಈ ಫೋಟೋಸ್ ವೈರಲ್ ಆಗಿವೆ. ಇಬ್ಬರು ಕಂದಮ್ಮಗಳು ಕಪ್ ಹಿಡಿದು ಸಂಭ್ರಮಿಸಿದ್ದಾರೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ತಮ್ಮ ಮುದ್ದು ಮಕ್ಕಳಿಗೆ ಅಥರ್ವ್ ಮತ್ತು ಆದವ್ ಎಂದು ಅಮೂಲ್ಯ ಹೆಸರಿಟ್ಟಿದ್ದಾರೆ. ಈ ಮಕ್ಕಳಿಗಾಗಿ ಪ್ರತ್ಯೇಕ ಇನ್ಸ್ಟಾಗ್ರಾಮ್ ಖಾತೆ ಕೂಡ ತೆರೆಯಲಾಗಿದೆ.




