ಐಪಿಎಲ್ನಲ್ಲಿ ಯೂಸುಫ್ ಪಠಾಣ್-ಇರ್ಫಾನ್ ಪಠಾಣ್, ಹಾರ್ದಿಕ್-ಕೃನಾಲ್, ಮೈಕೆಲ್ ಹಸ್ಸಿ-ಡೇವಿಡ್ ಹಸ್ಸಿ...ಹೀಗೆ ಹಲವು ಸಹೋದರರು ಕಣಕ್ಕಿಳಿದಿದ್ದರೂ, ಇದೇ ಮೊದಲ ಬಾರಿಗೆ ಇಬ್ಬರು ಅವಳಿ-ಜವಳಿ ಸಹೋದರರು ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಐಪಿಎಲ್ ಆಡಿದ ಮೊದಲ ಅವಳಿಗಳು ಎಂಬ ಹೆಗ್ಗಳಿಕೆ ಯಾನ್ಸೆನ್ ಬ್ರದರ್ಸ್ ಪಾಲಾಗಿದೆ.