Updated on: Apr 17, 2023 | 11:23 PM
IPL 2023 RCB vs CSK: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ವೇಗಿ ವೈಶಾಕ್ ವಿಜಯಕುಮಾರ್ ಅನಗತ್ಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು.
ಆದರೆ ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ, ಆರ್ಸಿಬಿ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅದರಲ್ಲೂ ಕಳೆದ ಪಂದ್ಯದಲ್ಲಿ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಬಳಿಸಿದ್ದ ವೈಶಾಕ್ ವಿಜಯಕುಮಾರ್ ಈ ಬಾರಿ ದುಬಾರಿಯಾಗಿದ್ದರು.
ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ವೈಶಾಕ್ ಬರೋಬ್ಬರಿ 62 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಆರ್ಸಿಬಿ ಪರ 4 ಓವರ್ಗಳಲ್ಲಿ ಅತ್ಯಧಿಕ ರನ್ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್ಗಳಲ್ಲಿ 20 ರನ್ಗೆ 3 ವಿಕೆಟ್ ಕಬಳಿಸಿ ಆರ್ಸಿಬಿ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಎಂಬ ದಾಖಲೆಯನ್ನು ವೈಶಾಕ್ ವಿಜಯಕುಮಾರ್ ಬರೆದಿದ್ದರು.
ಇದೀಗ 24 ಎಸೆತಗಳಲ್ಲಿ 62 ರನ್ ನೀಡಿ ಅನಗತ್ಯ ದಾಖಲೆಯನ್ನು ಕನ್ನಡಿಗ ವೈಶಾಕ್ ವಿಜಯಕುಮಾರ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಆರ್ಸಿಬಿ ಪರ ಅತ್ಯಂತ ದುಬಾರಿ ಸ್ಪೆಲ್ ಮಾಡಿದ ಕೆಟ್ಟ ದಾಖಲೆ ಜೋಶ್ ಹ್ಯಾಝಲ್ವುಡ್ ಹೆಸರಿನಲ್ಲಿದೆ. ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹ್ಯಾಝಲ್ವುಡ್ 4 ಓವರ್ಗಳಲ್ಲಿ 64 ರನ್ ನೀಡಿದ್ದರು. ಇದೀಗ ಈ ಕಳಪೆ ಬೌಲಿಂಗ್ ದಾಖಲೆ ಪಟ್ಟಿಯಲ್ಲಿ ವೈಶಾಕ್ 2ನೇ ಸ್ಥಾನ ಅಲಂಕರಿಸಿದ್ದಾರೆ.