Magadi: ಕುರಿಗಳನ್ನು ತೊಳೆಯಲು ಹೋಗಿದ್ದವರು ಕೆರೆ ಪಾಲು: ಒಂದೇ ಕುಟುಂಬದ ಮೂವರು ದುರ್ಮರಣ

ಕುರಿಗಳ ಮೈತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವಂತಹ ದಾರುಣ ಘಟನೆಯೊಂದು ಜಿಲ್ಲೆಯ ಮಾಗಡಿ ತಾಲೂಕಿನ ಮುತ್ತಸಾಗರ ಬಳಿ ಕೆರೆಯಲ್ಲಿ ನಡೆದಿದೆ.

Magadi: ಕುರಿಗಳನ್ನು ತೊಳೆಯಲು ಹೋಗಿದ್ದವರು ಕೆರೆ ಪಾಲು: ಒಂದೇ ಕುಟುಂಬದ ಮೂವರು ದುರ್ಮರಣ
ಮುತ್ತಸಾಗರ ಬಳಿ ಕೆರೆ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 22, 2023 | 3:43 PM

ರಾಮನಗರ: ಕುರಿಗಳ ಮೈತೊಳೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ದುರ್ಮರಣ (Death) ಹೊಂದಿರುವಂತಹ ದಾರುಣ ಘಟನೆಯೊಂದು ಜಿಲ್ಲೆಯ ಮಾಗಡಿ (Magadi) ತಾಲೂಕಿನ ಮುತ್ತಸಾಗರ ಬಳಿ ಕೆರೆಯಲ್ಲಿ ನಡೆದಿದೆ. ನಾಗರಾಜು(30), ಜ್ಯೋತಿ(35) ಮತ್ತು ಲಕ್ಷ್ಮೀ(22) ಮೃತರು. ಇಬ್ಬರ ಮೃತದೇಹ ಹೊರತೆಗೆದ ಅಗ್ನಿ ಶಾಮಕ ಸಿಬ್ಬಂದಿ, ಮತ್ತೊಂದು ಶವ ಹೊರತೆಗೆಯಲು ಶೋಧಕಾರ್ಯ ನಡೆಸಿದ್ದಾರೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ನಗರದ ಉದನೂರು‌ ಕ್ರಾಸ್ ಬಳಿ ನಡೆದಿದೆ. ರಾಣೋಜಿ ವಾಡಿ(42), ಪತ್ನಿ ರೇಣುಕಾ(35) ಮೃತರು. ಕಲಬುರಗಿ ತಾಲೂಕಿನ ಶರಣ ಸಿರಸಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕೊಲೆಗೆ ಸುಪಾರಿ ಕೊಟ್ಟವ ಹಾಗೂ ಪಡೆದ ಯುವಕರಿಬ್ಬರು ಅರೆಸ್ಟ್​​

ಯಾದಗಿರಿ: ಕೊಲೆಗೆ ಸುಪಾರಿ ಕೊಟ್ಟವನು ಹಾಗೂ ಸುಪಾರಿ ಪಡೆದವನು ಇಬ್ಬರಿರು ಯುವಕರನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ನಗರದ ಲಾಡ್ಜ್‌‌ ಒಂದರಲ್ಲೇ ಇದ್ದು ಕೊಲೆಗೆ ಹೊಂಚು ಹಾಕಿದ್ದ. ಪವನ್ ಕುಮಾರ್ ಕೊಲೆಗೆ ಸುಪಾರಿ ಪಡೆದಿದ್ದ ಯುವಕ. ನಾನ್ಯಾ ನಾಯ್ಕ್ ಕೊಲೆಗೆ ಸುಪಾರಿ ನೀಡಿದ್ದ ವ್ಯಕ್ತಿ. ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ನಾನ್ಯಾ ನಾಯ್ಕ್ ಯುವಕನಿಗೆ ಕೊಲೆ ಸುಪಾರಿ‌ ನೀಡಿದ್ದಾನೆ.

ಇದನ್ನೂ ಓದಿ: Tarikere: ಮರಕ್ಕೆ ಕಾರು ಡಿಕ್ಕಿ, ದಂಪತಿ ಸ್ಥಳದಲ್ಲೇ ಸಾವು: ಮಕ್ಕಳಿಬ್ಬರಿಗೆ ಗಾಯ

ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ: ಎಕ್ಸ್‌ರೇ ಸೆಂಟರ್​ನಲ್ಲಿ ಕೆಲಸ‌‌‌ ಮಾಡುವ ಸುರೇಶ್ ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಾನ್ಯಾ ನಾಯ್ಕ್​ ಶಂಕಿಸಿದ್ದ. 50 ಸಾವಿರ ಹಣ ಹಾಗೂ 10 ಗ್ರಾಂ ಚಿನ್ನದ ರಿಂಗ್ ಕೊಡುತ್ತೇನೆ ಕೊಲೆ ಮಾಡು ಅಂತ ಹೇಳಿದ್ದ. ಇದ್ದಕ್ಕೆ ಒಪ್ಪಿ ಕಂಟ್ರಿ ಪಿಸ್ತೂಲ್​ ಸೇರಿ ಮಾರಾಕಾಸ್ತ್ರಗಳ‌ನ್ನ ಖರೀದಿ ಮಾಡಿದ್ದ. ಪುಣೆಯಿಂದ ಪಿಸ್ತೂಲ್ ಹಾಗೂ ಮಾರಾಕಾಸ್ತ್ರಗಳನ್ನ ಖರೀದಿ ಮಾಡಿಕೊಂಡು ಬಂದಿದ್ದ.

ಕಳೆದ‌‌‌‌ ಎಂಟು ದಿನಗಳಿಂದ ಕೊಲೆಗೆ ಸ್ಕೆಚ್: ಕಳೆದ‌‌‌‌ ಎಂಟು ದಿನಗಳಿಂದ ಸುರೇಶ್ ಕೊಲೆಗೆ ಸ್ಕೆಚ್ ಹಾಕಿ ಪವನ್​ ಕುಳಿತ್ತಿದ್ದ. ಚುನಾವಣೆ ಹಿನ್ನಲೆ ಸಾಮಾನ್ಯವಾಗಿ ಲಾಡ್ಜ್​ಗಳು ಪರಿಶೀಲನೆ ಮಾಡುವಾಗ ಸಿಕ್ಕ ಬಿದಿದ್ದಾನೆ. ಪವನ್​ಗೆ ಅರೆಸ್ಟ್ ಮಾಡಿ ಚಾರ್ಜ್ ಮಾಡಿದ್ದಾಗ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಬಳಿಕ ಸುಪಾರಿ ಕೊಟ್ಟ ನಾನ್ಯಾ ನಾಯ್ಕ್ ನನ್ನ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಕೊಡಗು: ವ್ಯಾಪಾರಿ ಮೇಲೆ ಗುಂಡಿನ ದಾಳಿ; ಗಾಯಾಳು ಆಸ್ಪತ್ರೆಗೆ ದಾಖಲು

ಚಾಕುವಿನಿಂದ ಇರಿದು ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ

ಕಾರವಾರ: ಚಾಕುವಿನಿಂದ ಇರಿದು ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಕೊಲೆ ಮಾಡಿರುವಂತಹ ದಾರುಣ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಪುತ್ರ ಭರತ್ ಮೇಸ್ತಾನಿಂದ ತಂದೆ ಪಾಂಡುರಂಗ ಮೇಸ್ತಾ(62) ಹತ್ಯೆ. ಆರೋಪಿ ಭರತ್​ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ನಿತ್ಯ ತಂದೆ ಪಾಂಡುರಂಗ, ಪುತ್ರ ಭರತ್​​ ನಡುವೆ ಜಗಳವಾಗುತ್ತಿತ್ತು. ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:37 pm, Sat, 22 April 23