ಪಿಎಫ್​​ಐಗೆ ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಕರೆ

ಪಿಎಫ್​​ಐಗೆ ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದರು.

ಪಿಎಫ್​​ಐಗೆ ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಕರೆ
ಯುಪಿ ಸಿಎಂ ಯೋಗಿ ಆದಿತ್ಯನಾಥ್
Follow us
|

Updated on: May 06, 2023 | 5:54 PM

ಉಡುಪಿ: ಪಿಎಫ್​​ಐಗೆ (PFI) ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಬೇಕು. ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ತನ್ನಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದರು. ಜಿಲ್ಲೆಯ ಕಾರ್ಕಳದಲ್ಲಿ ಬಿಜೆಪಿ ಬೃಹತ್ ಸಮಾವೇಶ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಉತ್ಸಾಹ‌ ನೋಡಿದ್ರೆ ಬಿಜೆಪಿ ಬರುವುದರ ಸೂಚನೆಯಾಗಿದೆ. ಈಗ ಭಾರತ ವಿಶ್ವದ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಐಟಿ ಹಬ್ ಆಗಿ ಕರ್ನಾಟಕ ದೊಡ್ಡ ಕೊಡುಗೆ ನೀಡಿದೆ. ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವಾಗಲೂ ಇರಬೇಕು. ಇಲ್ಲಿನ ಜನ ಯಾವಾಗಲೂ ರಾಷ್ಟ್ರವಾದಕ್ಕೆ ಸಹಕಾರ ನೀಡಿದ್ದೀರಿ ಎಂದು ಹೇಳಿದರು.

ಜನವರಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುತ್ತೆ. ರಾಮಮಂದಿರದಲ್ಲಿ‌ ಕರ್ನಾಟಕದ ಕರಸೇವಕರ ಕೊಡುಗೆ ದೊಡ್ಡದು ಎಂದರು. ಭವ್ಯಮಂದಿರ ನಿರ್ಮಾಣ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆ. ಭವ್ಯ ಮಂದಿರ ನಿರ್ಮಾಣ ಆಗುತ್ತೆ. ರಾಮಮಂದಿರ ಮೂಲಕ ರಾಮರಾಜ್ಯದ ಸುಪ್ರಭಾತವಾಗಲಿದೆ ಎಂದರು.

ಇದನ್ನೂ ಓದಿ: ಹೇಗಿತ್ತು ಪ್ರಧಾನಿ ಮೋದಿ ಬೆಂಗಳೂರು ರೋಡ್​ ಶೋ: ಇಲ್ಲಿದೆ ಚಿತ್ರಣ

ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಪರ ಮತಯಾಚನೆ

ಕಾರ್ಕಳ‌ ವಿಧಾನಸಭಾ ಕ್ಷೇತ್ರದಲ್ಲಿ ಅನಂತಶಯನ ವೃತ್ತದ ಮೂಲಕ ಗಾಂಧಿ ಮೈದಾನದವರೆಗೆ ಯೋಗಿ ಆದಿತ್ಯನಾಥ್ ರೋಡ್ ಶೋ ಮಾಡಿದರು. ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಪರ ಮತಯಾಚನೆ ಮಾಡುವ ಮೂಲಕ ಸುನೀಲ್ ಕುಮಾರ್​ ಅವರನ್ನು ಗೆಲ್ಲಿಸಿ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್​, ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಆಗಮಿಸಿದರು. ಹೊನ್ನಾವರದ ಪ್ರಭಾತ ನಗರದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಿದ್ದು, ಸಮಾವೇಶದಲ್ಲಿ ಭಾಷಣದ ಮೂಲಕ ಮತಯಾಚನೆ ಮಾಡಿದರು.

ಬಜರಂಗದಳ ನಿಷೇಧ ಮಾಡಿದರೇ, ಪಿಎಫ್​ಐ, ಐಎಸ್​ಐ ಆಹ್ವಾನ ನೀಡಿದಂತೆ

ಬಳಿಕ ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್, ಅಯೋಧ್ಯಾ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಭಾರತದ ಅಭಿವೃದ್ಧಿ ಸಹಿಸದವರು ಮೋದಿಯವರ ವಿರೋಧ ಮಾಡುತಿದ್ದಾರೆ. ಬಜರಂಗದಳ ನಿಷೇಧ ಮಾಡಿದರೇ, ಪಿಎಫ್​ಐ, ಐಎಸ್​ಐ ಆಹ್ವಾನ ಮಾಡಿದಂತೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​​ನವರು ಆಂಜನೇಯನನ್ನು ಕೂಡ ಅವಮಾನ ಮಾಡಿದ್ದಾರೆ: ಅಮಿತ್ ಶಾ ವಾಗ್ದಾಳಿ

ಬಜರಂಗದಳವನ್ನು ಕಾಂಗ್ರೆಸ್​ ಏಕೆ ವಿರೋಧಿಸುತ್ತಿದೆ

ನಾವು ಪಿಎಫ್​ಐ, ಐಎಸ್​ಐ ಸೊಂಟ ಮುರಿಯುತ್ತೇವೆ. ಅಂಜನಾದ್ರಿಯಲ್ಲಿ ಶ್ರೀ ಹನುಮಾನ್ ಮಂದಿರವನ್ನು ಯಡಿಯೂರಪ್ಪ, ಬೊಮ್ಮಾಯಿಯವರ ನೇತ್ರತ್ವದಲ್ಲಿ ಹನುಮಾನ್ ಮಂದಿರ ನಿರ್ಮಾಣ ಮಾಡುತಿದ್ದಾರೆ. ಕಾಂಗ್ರೆಸ್ ಹನುಮಾನ್​ ನನ್ನ ಏಕೆ ವಿರೋಧ ಮಾಡುತ್ತಿದೆ. ಹನುಮಾನ್​ ಇರುವಲ್ಲಿ ಭೋತಪೇತಗಳು ನಾಶವಾಗುತ್ತಿದೆ. ಹೀಗಾಗಿ ಭೂತ ಪೇತಗಳು ವಿರೋಧ ಮಾಡುತ್ತಿದೆ. ಉತ್ತರ ಪ್ರದೇಶದ ರಾಮಮಂದಿರದ ಉದ್ಘಾಟನೆಯಲ್ಲಿ ಕರ್ನಾಟಕದವರೂ ಭಾಗಿಯಾಗಬೇಕು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ