ಬಿಜೆಪಿಗೆ ಮತ ಹಾಕಿದ್ದರಿಂದ ಕರಾವಳಿಗರ ಜೀವನದಲ್ಲಿ ಬದಲಾವಣೆ ಆಯ್ತಾ?: ಡಿಕೆ ಶಿವಕುಮಾರ್ ಪ್ರಶ್ನೆ

|

Updated on: Apr 27, 2023 | 8:54 PM

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕರಾವಳಿ ಭಾಗದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಮತ ಹಾಕಿದ್ದರಿಂದ ಕರಾವಳಿಗರ ಜೀವನದಲ್ಲಿ ಬದಲಾವಣೆ ಆಯ್ತಾ?: ಡಿಕೆ ಶಿವಕುಮಾರ್ ಪ್ರಶ್ನೆ
ಡಿಕೆ ಶಿವಕುಮಾರ್
Follow us on

ಮಂಗಳೂರು: ಕಳೆದ ಚುನಾವಣೆಯಲ್ಲಿ (2018) ಕರಾವಳಿ ಭಾಗದಲ್ಲಿ ಒಂದು ಕ್ಷೇತ್ರ ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ಬಿಜೆಪಿಗೆ ಮತ ಹಾಕಿದ್ದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದರು. ಮಂಗಳೂರಿನ ಅಡ್ಯಾರು ಬಳಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ (Mangaluru Congress Convention) ಮಾತನಾಡಿದ ಅವರು, ಬಿಜೆಪಿ (BJP) ಡ್ಯಾಂ ಸಂಪೂರ್ಣ ಒಡೆದು ಹೋಗಿದೆ ಎಂದು ಪುನರುಚ್ಚರಿಸಿದರು.

ಇತ್ತೀಚೆಗೆ ಬೈಂದೂರಿನಲ್ಲಿ 3,000 ಜನ ಕೇಸರಿ ಶಾಲು ಹಾಕಿಕೊಂಡು ಬಂದು ಕಾಂಗ್ರೆಸ್ ಸೇರಿದರು. ನಾವು ಯಾರಿಗೂ ಆಪರೇಷನ್ ಮಾಡಲು ಹೋಗಿಲ್ಲ, ಅವರೇ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೇಳುವ ಪ್ರಶ್ನೆಗಳಿಗೆ ಬಿಜೆಪಿಯಲ್ಲಿ ಉತ್ತರವಿಲ್ಲ. ಹಿಂಡು ಹಿಂಡಾಗಿ ಬಿಜೆಪಿಗರು ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಚಿಂಚನಸೂರ್​ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್​ ಸೇರಿದ ಶೆಟ್ಟರ್, ಸವದಿ ದಡ್ಡರಾ ನೀವೇ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: Karnataka Assembly Polls; ಭ್ರಷ್ಟಾಚಾರ ನಡೆಸಿದ ಕಾರಣ ಡಿಕೆ ಶಿವಕುಮಾರ್ ಜೈಲಿಗೆ ಹೋಗಿದ್ದರು: ಬಸನಗೌಡ ಪಾಟೀಲ್  ಯತ್ನಾಳ್

ಇಂತಹ ಪವಿತ್ರ ಭೂಮಿಯಲ್ಲಿ ಯಾರೂ ಹೂಡಿಕೆ ಮಾಡಲು ಬರುತ್ತಿಲ್ಲ. ಹೂಡಿಕೆ ಸಮಾವೇಶ ಮಾಡಿದರೂ ಕಾರವಳಿ ಭಾಗದಲ್ಲಿ ಯಾಕೆ ಹೂಡಿಕೆ ಮಾಡುತ್ತಿಲ್ಲವೆಂದು ಬಿಜೆಪಿ ಉತ್ತರಿಸಬೇಕು ಎಂದು ಹೇಳಿದ ಡಿಕೆ ಶಿವಕುಮಾರ್, ಕರಾವಳಿ ಭಾಗದಲ್ಲಿ ಬಿಜೆಪಿ ಆಡಳಿತದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದೆ. ಬಿಜೆಪಿ ಭಾವನೆಗಳ ಮೇಲೆ ಹೋಗುತ್ತಿದೆ, ನಾವು ಅಭಿವೃದ್ಧಿ ಮೇಲೆ ಹೋಗುತ್ತಿದ್ದೇವೆ ಎಂದರು.

ಈಗಾಗಲೇ ನಾಲ್ಕು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಇನ್ನೊಂದು ಘೋಷಣೆ ರಾಹುಲ್ ಗಾಂಧಿ ನಿಮ್ಮ ಮುಂದೆ ಇಟ್ಟಿದ್ದಾರೆ. ನಾವು ನುಡಿದಂತೆ ನಡೆಯಲಿಲ್ಲ ಅಂದರೆ ಮತ್ತೆ ನಿಮ್ಮ ಎದುರು ವೋಟ್ ಕೇಳಲು ಬರುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು. ಪ್ರಸಕ್ತ ಚುನಾವಣೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Thu, 27 April 23