ಮಾಡಾಳ್ ಪರ್ಯಾಯ ಅಭ್ಯರ್ಥಿಯಾಗಿ ಚನ್ನಗಿರಿಯಿಂದ ಕಣಕ್ಕಿಳಿಯೋ ಈ ಕ್ಲೀನ್ ಇಮೇಜ್ ವ್ಯಕ್ತಿ ಯಾರು? RSS ಶೋಧಿಸಿದ ಆ ಅಭ್ಯರ್ಥಿ ಹಿನ್ನೆಲೆ ಏನು?

| Updated By: Digi Tech Desk

Updated on: Mar 07, 2023 | 4:24 PM

ಮಾಡಾಳ್ ವಿರೂಪಾಕ್ಷಪ್ಪ ಪರ್ಯಾಯ ಅಭ್ಯರ್ಥಿ ಅಂತಿಮ. ಚನ್ನಗಿರಿಯಿಂದ ಕಣಕ್ಕಿಳಿಯೋ ಈ ಕ್ಲೀನ್ ಇಮೇಜ್ ವ್ಯಕ್ತಿ ಯಾರು...? ಆರ್‌ಎಸ್‌ಎಸ್ ಶೋಧಿಸಿರುವ ಆ ಅಭ್ಯರ್ಥಿ ಹಿನ್ನೆಲೆಯಾದ್ರು ಏನು...? ವೃತ್ತಿಯಲ್ಲಿ ವೈದ್ಯರಾಗಿರೋ ಆ ವ್ಯಕ್ತಿ ಸ್ಪರ್ಧೆಗೆ ಸಮ್ಮತಿಸಿಬಿಟ್ರಾ...? ಯಡಿಯೂರಪ್ಪ-ಈಶ್ವರಪ್ಪ ಪರಮಾಪ್ತ ವಲಯದ ಸದಸ್ಯರಾ...? ಚನ್ನಗಿರಿ ಉತ್ತರಾಧಿಯಾರಿಯ ಬಿಗ್ ಸ್ಟೋರಿ ಇಲ್ಲಿದೆ ನೋಡಿ.

ಮಾಡಾಳ್ ಪರ್ಯಾಯ ಅಭ್ಯರ್ಥಿಯಾಗಿ ಚನ್ನಗಿರಿಯಿಂದ ಕಣಕ್ಕಿಳಿಯೋ ಈ ಕ್ಲೀನ್ ಇಮೇಜ್ ವ್ಯಕ್ತಿ ಯಾರು? RSS ಶೋಧಿಸಿದ ಆ ಅಭ್ಯರ್ಥಿ ಹಿನ್ನೆಲೆ ಏನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪುತ್ರನ ಲಂಚ ಪ್ರಕರಣದಲ್ಲಿ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಎ1 ಆರೋಪಿಯಾಗಿದ್ದಾರೆ. ಮಗನ ಬಂಧನವಾಗುತ್ತಿದ್ದಂತೆಯೇ ನೈತಿಕ ಹೊಣೆ ಹೊತ್ತು ಕೆಎಸ್‍ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಅವರು ರಾಜೀನಾಮೆ ನೀಡಿ ತಲೆ ಮರೆಸಿಕೊಂಡಿದ್ದಾರೆ. ಆದ್ರೆ, ಚುನಾವಣೆ ಹೊತಲ್ಲಿ ಬಿಜೆಪಿಗೆ ಭಾರೀ ಮುಜುಗರು ಉಂಟಾಗಿದೆ. ಇದು ಕಾಂಗ್ರೆಸ್​ ಮೃಷ್ಟಾನ್ನ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷ ಮೇಲೆ ಸೂಕ್ತ ಕ್ರಮಕೈಗೊಂಡು ತಕ್ಕ ಮಟ್ಟಿಗೆ ಡ್ಯಾಮೇಜ್​ ಕಂಟ್ರೋಲ್ ಬಿಜೆಪಿ (BJP) ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ವಿರೂಪಾಕ್ಷಪ್ಪರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಚರ್ಚೆಗಳು ಸಹ ಹೈಕಮಾಂಡ್​ ಮಟ್ಟದಲ್ಲಿ ನಡೆಯುತ್ತಿವೆ ಎಂದು ತಿಳಿದುಬಂದಿದೆ. ಇದರಿಂದ ಈ ಬಾರಿ ಚನ್ನಗಿರಿಯಲ್ಲಿ ಮಾಡಾಳ್ ಪರ್ಯಾಯ ಅಭ್ಯರ್ಥಿಗಾಗಿ ತಲಾಶ್ ನಡೆಸಿದ್ದು, ಈಗ ಆರ್‌ಎಸ್‌ಎಸ್ ಶೋಧಿಸಿ ಒಂದು ಹೆಸರು ತೇಲಿಬಿಟ್ಟಿದೆ. ಆರ್​ಎಸ್​ಎಸ್​ ಅಂತಿಮಗೊಳಿಸಿದ ನಾಯಕ ಯಡಿಯೂರಪ್ಪ ಹಾಗೂ ಈಶ್ವರಪ್ಪ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು ವಿಶೇಷ. ಹೆಚ್ಚಾಗಿ ಕಳೆದ ಹಲವು ವರ್ಷಗಳಿಂದ ಬಿಜೆಪಿಗೆ ಶ್ರಮಿಸಿದ್ದಾರೆ.

ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನದ ಭೀತಿ; ಚನ್ನಗಿರಿ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ

ಹೌದು….ವಿರೂಪಾಕ್ಷಪ್ಪ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಗಾಗಿ ಡಾ. ಧನಂಜಯ ಸರ್ಜಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸ್ಥಳೀಯರೇ ಆಗಿರುವ ಡಾ. ಧನಂಜಯ ಅವರು ಖ್ಯಾತ ಮಕ್ಕಳ ವೈದ್ಯರು. ವಿದ್ಯಾಬ್ಯಾಸ ಹಾಗೂ ವೃತ್ತಿ ಜೀವನ ಆರಂಭಿಸಿದ್ದು ಮಾತ್ರ ಶಿಮೊಗ್ಗದಲ್ಲಿ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಗಿಸಿದ್ದಾರೆ. ಆರಂಭದಲ್ಲಿ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆತಲ್ಲಿ ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ ಧನಂಜಯ ಸರ್ಜಿ, ನಂತರ ಶಿವಮೊಗ್ಗದಲ್ಲೇ ಸ್ವತಃ ತಾವೇ ಸ್ವಂತ ಮಕ್ಕಳ ಆಸ್ಪತ್ರೆಯನ್ನು ತೆರೆದರು. ಅಲ್ಲಿಂದ ಶಿವಮೊಗ್ಗದ ನಾಡಿಮಿಡಿತ ಅರಿತುಕೊಂಡರು. ಅಲ್ಲದೇ ಸಂಘದಲ್ಲಿ ಗುರುತಿಸಿಕೊಂಡು ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ಟಚ್​ ಇಟ್ಟುಕೊಂಡಿದ್ದು, ಕಳೆದ ಮೂರು ಯಿ ಶಿವಮೊಗ್ಗ ನಗರ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಆದ್ರೆ, ಇದೀಗ ಚನ್ನಗಿರಿ ಬಿಜೆಪಿ ಮುಖಂಡರು ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಡಾ. ಧನಂಜಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಸರ್ಜಿ ಪರ ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖಂಡರು ಸಹ ಒಲವು ಹೊಂದಿದ್ದು, ಇವರೇ ಚನ್ನಗಿರಿ ಕ್ಷೇತ್ರದ ಮುಂದಿನ ಬಿಜೆಪಿ ಅಭ್ಯರ್ಥಿ ಎನ್ನಲಾಗಿದೆ.

ಬಿಜೆಪಿ ಪಕ್ಷಕ್ಕಾಗಿ ಶ್ರಮಿಸಿದ ಡಾ. ಧನಂಜಯ ಸರ್ಜಿ

ಹೌದು…ಡಾ. ಧನಂಜಯ ಸರ್ಜಿ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಹಿಂದುತ್ವದ ಕಟ್ಟಾಳಾದ ಡಾ. ಧನಂಜಯ ವಾಜಪೇಯಿ, ಅಡ್ವಾಣಿಯವರ ಕಾಲದಿಂದಲೂ ಬಿಜೆಪಿ ಪಕ್ಷಕ್ಕೆ ದುಡಿಯುತ್ತಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪನವರ ಜೊತೆಗೂ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ. ಕಳೆದ 25 ವರ್ಷಗಳಿಂದ ಬಿಜೆಪಿ ಗೆಲುವಿಗಾಗಿ ಶ್ರಮಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಬಿಜೆಪಿ ಪರ ಕೆಲಸ ಮಾಡಿದ್ದಾರೆ.

ಹಲವು ಸಾಮಾಜಿಕ ಕಾರ್ಯಗಳು

ಸಾಮಾಜಿಕ ಕಳಕಳಿ ಹೊಂದಿರುವ ಸರ್ಜಿ 2018ರಲ್ಲಿ ಸರ್ಜಿ ಪೌಂಡೇಷನ್ ಸ್ಥಾಪಿಸಿದ್ದು, ಈ ಸಂಸ್ಥೆಯ ಮೂಲಕ ಬುದ್ಧಿ ಮಾಂದ್ಯರಿಗೆ ನಿಧಾನ ಕಲಿಕಾ ಕೇಂದ್ರವನ್ನು ತೆರೆದಿದ್ದಾರೆ. ಇನ್ನು ಈ ಪೌಂಡೇಷನ್​ನೊಂದಿಗೆ ಆರೋಗ್ಯ ಸಂಬಂಧಿಸಿದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಅಲ್ಲದೇ ಬಡ ರೋಗಿಗಳ ಅನುಕೂಲಕ್ಕಾಗಿ ನಮ್ಮ ಮನೆ ನಮ್ಮ ಆರೋಗ್ಯ ಹೆಲ್ತ್​ ಕಾರ್ಡ್​ ಮೂಲಕ ಹೆರಿಗೆಗೆ ವಿಶೇಷವಾದ ಪ್ಯಾಕೇಜ್​ ಹಾಗೂ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸಿದ್ದಾರೆ. ಇನ್ನು ಇವರ ವಾಕ್​ ಚಾತುರ್ಯ ಸಹ ಸಖತ್ ಇದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಮಕ್ಕಳ ವಿಭಾಗದ ವೈದ್ಯಕೀಯ ಸಮ್ಮೇಳದಲ್ಲಿ ಉಪನ್ಯಾಸ ಮಾಡಿದ್ದಾರೆ. ಅಲ್ಲದೇ ಮಕ್ಕಳನ್ನು ಉತ್ತೇಜಿಸುವಂತೆ ಮಾಡಲು ಜಿಲ್ಲೆಯ ಹಲವು ವಿದ್ಯಾಸಂಸ್ಥೆಗಳು ಇವರನ್ನು ಶಾಲಾ-ಕಾಲೇಜುಗಳಿಗೆ ಉಪನ್ಯಾಸ ನೀಡಲು ಆಹ್ವಾನಿಸುತ್ತಿವೆ.

ಧನಂಜಯ್ ಆರೋಗ್ಯ ಕ್ಷೇತ್ರದಲ್ಲೂ ವಿವಿಧ ಸಂಘ ಸಂಸ್ಥೆಗಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೇ ಆರ್​ಎಸ್​ಎಸ್​ನ ಐಟಿಸಿ ಮತ್ತು ಓಟಿಸಿ ತರಬೇತಿಯನ್ನು ಪೂಣಗೊಳಿಸಿ ಸಂಘದಲ್ಲಿ ಸಕ್ರಿಯರಾಗಿ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.

ಚನ್ನಗಿರಿ ಬಿಜೆಪಿ ಟಿಕೆಟ್​​ಗಾಗಿ ಇನ್ನಿಬರ ಕಸರತ್ತು

ಯೆಸ್​..ಧನಂಜಯ ಅವರನ್ನು ಸ್ವತಃ ಕೆಲ ಬಿಜೆಪಿ ಮುಖಂಡರು ಹಾಗೂ ಆರ್​ಎಸ್​ಎಸ್​ ನಾಯಕರು ಅಂತಿಮಗೊಳಿಸಿದ್ದಾರೆ. ಆದ್ರೆ, ಇದರ ಮಧ್ಯೆ ನಮಗೂ ಟಿಕೆಟ್ ಬೇಕೆಂದು ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್​ ಹಾಗೂ ತಿಪ್ಪಗೊಂಡನ ಹಳ್ಳಿಯ ಟಿವಿ ರಾಜು ಪಟೇಲ್ ಎದ್ದು ನಿಂತಿದ್ದಾರೆ. ಎಚ್ ಎಸ್ ಶಿವಕುಮಾರ್ ಯಡಿಯೂರಪ್ಪನವರ ಆಪ್ತ ಕೂಡ ಹೌದು. ಇದರ ಮಧ್ಯೆ ಡಾ ಧನಂಜಯ ಹೆಸರ ತೂರಿಬಂದಿದ್ದು ತೀವ್ರ ಕುತೂಹಲ ಮೂಡಿಸಿದೆ.

Published On - 3:45 pm, Tue, 7 March 23