ಕರ್ನಾಟಕ ಚುನಾವಣೆ 2023: ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು ಇವರೇ ನೋಡಿ

|

Updated on: May 13, 2023 | 10:39 PM

ಕರ್ನಾಟಕ ವಿಧಾನಸಭೆ ಚುನಾವಣೆ 2023 ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ ಪಕ್ಷಕ್ಕೆ 136 ಸ್ಥಾನ ಸಿಕ್ಕಿದೆ. ಈ ಪೈಕಿ 35 ಮಂದಿ ಮೊದಲ ಬಾರಿ ಆಯ್ಕೆಯಾದವರಾಗಿದ್ದಾರೆ.

ಕರ್ನಾಟಕ ಚುನಾವಣೆ 2023: ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು ಇವರೇ ನೋಡಿ
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಕಾಂಗ್ರೆಸ್​ನ ಅಭ್ಯರ್ಥಿಗಳು
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ಫಲಿತಾಂಶ (Karnataka Assembly Election Result 2023) ಹೊರಬಿದ್ದಿದ್ದು, ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕಿದೆ. ಹೀಗಾಗಿ ನಾಯಕರು ಸರ್ಕಾರ ರಚನೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇತ್ತ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದವು. ಆದರೆ ಬಿಜೆಪಿಯಲ್ಲಿ ಹೆಚ್ಚಿನ ಹೊಸ ಅಭ್ಯರ್ಥಿಗಳು ಸೋಲು ಅನುಭವಿಸಿದರೆ, ಕಾಂಗ್ರೆಸ್​ನಲ್ಲಿ ಕಣಕ್ಕಿಳಿಸಿದ 42 ಅಭ್ಯರ್ಥಿಗಳ ಪೈಕಿ 35 ಮಂದಿ ಗೆದ್ದಿದ್ದಾರೆ. ಹಾಗಿದ್ದರೆ ಕಾಂಗ್ರೆಸ್​ನಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು ಯಾರು? ಇಲ್ಲಿದೆ ನೋಡಿ ಮಾಹಿತಿ.

  • ಕುಡಚಿ- ಮಹೇಂದ್ರ ಕೆ.ತಮ್ಮಣ್ಣನವರ್
  • ಬೆಳಗಾವಿ ಉತ್ತರ- ಆಸಿಫ್ ಸೇಟ್
  • ಕಿತ್ತೂರು- ಬಾಬಾಸಾಹೇಬ ಪಾಟೀಲ
  • ಸೌಂದತ್ತಿ ಯಲ್ಲಮ್ಮ- ವಿಶ್ವಸ್ ವಸಂತವೈದ್ಯ
  • ಬಾದಾಮಿ- ಭೀಮಸೇನ್ ಬಿ ಚಿಮ್ಮಣ್ಣಕಟ್ಟಿ
  • ನಾಗಥಾನ್ SC- ವಿಠ್ಠಲ ಕಟಕದೊಂಡ
  • ಸಿಂದಗಿ- ಅಶೋಕ್ ಎಂ. ಮನಗೂಳಿ
  • ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
  • ಶಿರಸಿ- ಭೀಮಣ್ಣ ನಾಯ್ಕ
  • ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ
  • ಬಳ್ಳಾರಿ ನಗರ- ನಾರ ಭಾರತ ರೆಡ್ಡಿ
  • ಕೂಡ್ಲಿಗಿ ST- ಡಾ.ಶ್ರೀನಿವಾಸ್ ಎನ್.ಟಿ
  • ಚಿತ್ರದುರ್ಗ- ಎಸ್ಆರ್​ಎಲ್ ಕೆಸಿ ವೀರೇಂದ್ರ
  • ದಾವಣಗೆರೆ ಜಗಳೂರು ಎಸ್​ಟಿ- ಬಿ ದೇವೇಂದ್ರಪ್ಪ
  • ಮಾಯಕೊಂಡ- ಕೆ.ಎಸ್. ಬಸವರಾಜು
  • ಚನ್ನಗರಿ- ಬಸವರಾಜು ವಿ ಶಿವಗಂಗಾ
  • ಮುಡಿಗೆರೆ ಎಸ್​ಸಿ- ನಯನಾ ಜ್ಯೋತಿ ಝಾವರ್
  • ಚಿಕ್ಕಮಗಳೂರು- ಹೆಚ್.ಡಿ. ತಮ್ಮಯ್ಯ
  • ಕಡೂರು- ಆನಂದ್ ಕೆ ಎಸ್
  • ಪಾವಗಡ- ಎಚ್.ವಿ. ವೆಂಕಟೇಶ್
  • ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್ ಅಯ್ಯರ್
  • ಪುಲಕೇಶಿನಗರ- ಎ.ಸಿ.ಶ್ರೀನಿವಾಸ್
  • ದೇವನಹಳ್ಳಿ- ಕೆಎಚ್ ಮುನಿಯಪ್ಪ (ಮಾಜಿ ಸಂಸದ)
  • ನೆಲಮಂಗಲ- ಶ್ರೀನಿವಾಸ ಎನ್
  • ರಾಮನಗರ- ಇಕ್ಬಾಲ್ ಹುಸೇನ್ ಎಚ್.ಎ.
  • ಮದ್ದೂರು- ಕೆ.ಎಂ. ಉದಯ
  • ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಕಾಂಗ್ರೆಸ್ ಬೆಂಬಲಿ ರೈತ ನಾಯಕ)
  • ಮಂಡ್ಯ- ಪ್ರವಿಕುಮಾರ್
  • ಪುತ್ತೂರು- ಅಶೋಕ್ ಕುಮಾರ್ ರೈ
  • ಕೊಡಗು ಮಡಿಕೇರಿ- ಡಾ ಮಂತರ್ ಗೌಡ
  • ವಿರಾಯಪೇಟೆ- ಎ.ಎಸ್. ಪೊನ್ನಣ್ಣ
  • ಕೃಷ್ಣರಾಜನಗರ- ಡಿವಿ ಶಂಕರ್
  • ನಂಜನಗೂಡು- ದರ್ಶನ್ ದ್ರುವನಾರಾಯಣ
  • ಚಾಮರಾಜ- ಕೆ.ಹರೀಶ್ ಗೌಡ
  • ಗುಂಡ್ಲುಪೇಟೆ- ಎಚ್.ಎಂ. ಗಣೇಶ್ ಪ್ರಸಾದ್

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Sat, 13 May 23