ಚುನಾವಣೆ ಕರ್ತವ್ಯಕ್ಕೆ ನಿಯೋಜನೆ; ಮತದಾನದ ಹಕ್ಕಿನಿಂದ ವಂಚಿತರಾದ್ರಾ ಸಾರಿಗೆ ಸಿಬ್ಬಂದಿ?

|

Updated on: May 09, 2023 | 3:25 PM

ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಕರೆದೊಯ್ಯಲು ರಾಜ್ಯಾದ್ಯಂತ ಸಾರಿಗೆ ಬಸ್​​ ಚಾಲಕರನ್ನು ಚುನಾವಣಾ ಕರ್ತವ್ಯಕ್ಕೆ ಹಾಕಲಾಗಿದೆ. ಹೀಗಾಗಿ ಚಾಲಕರು ತಮ್ಮ ಮತವನ್ನು ಚಲಾಯಿಸಲು ಆಗದೇ ಇರಬಹುದು.

ಚುನಾವಣೆ ಕರ್ತವ್ಯಕ್ಕೆ ನಿಯೋಜನೆ; ಮತದಾನದ ಹಕ್ಕಿನಿಂದ ವಂಚಿತರಾದ್ರಾ ಸಾರಿಗೆ ಸಿಬ್ಬಂದಿ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಮತದಾನ ಎನ್ನುವುದು ಕೇವಲ ಅಭ್ಯರ್ಥಿಗಳನ್ನು ಆರಿಸುವ ಪ್ರಕ್ರಿಯೆ ಅಲ್ಲ. ಬದಲಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಮ್ಮ ಹಕ್ಕನ್ನು ಚಲಾಯಿಸುವ ಪವಿತ್ರ ಕಾರ್ಯ. ಈ ಭವ್ಯ ದೇಶದ ಪ್ರಜೆಗಳಾಗಿ ಒಳ್ಳೆಯ ವ್ಯಕ್ತಿಯನ್ನ ಆಯ್ಕೆ ಮಾಡೋ ಪ್ರಕ್ರಿಯೆ. ಆದ್ರೆ ಇದೇ ಮತದಾನದ ಹಕ್ಕಿನಿಂದ ಒಂದಲ್ಲ ಒಂದು ಕಾರಣದಿಂದ ಅನೇಕರು ವಂಚಿತರಾಗುತ್ತಿದ್ದಾರೆ. ಸದ್ಯ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಮತ್ತೊಂದೆಡೆ ಈ ಮತದಾನ ಪ್ರಕ್ರಿಯೆಯಿಂದ ಸಾರಿಗೆ ಸಿಬ್ಬಂದಿ ವಂಚಿತರಾಗಲಿದ್ದಾರೆ.

ಬಿಎಂಟಿಸಿ, ಕೆಸ್‌ಆರ್‌ಟಿಸಿ, ವಾಯವ್ಯ & ಈಶಾನ್ಯ ಸಾರಿಗೆ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಕರೆದೊಯ್ಯಲು ರಾಜ್ಯಾದ್ಯಂತ ಸಾರಿಗೆ ಬಸ್​​ ಚಾಲಕರನ್ನು ಚುನಾವಣಾ ಕರ್ತವ್ಯಕ್ಕೆ ಹಾಕಲಾಗಿದೆ. ಹೀಗಾಗಿ ಚಾಲಕರು ತಮ್ಮ ಮತವನ್ನು ಚಲಾಯಿಸಲು ಆಗದೇ ಇರಬಹುದು. ಅಲ್ಲದೆ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿಲ್ಲ. ಕರ್ತವ್ಯಕ್ಕೆ ಮುನ್ನ, ಕರ್ತವ್ಯದ ನಡುವೆ ಮತದಾನ ಮಾಡುವಂತೆ ಆದೇಶ ಹೊರಡಿಸಲಾಗಿದ್ದು ದೂರದ ಊರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮತದಾನ ಕಷ್ಟ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಸಾರಿಗೆ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೇ.10ರ ಮತದಾನಕ್ಕೆ ಮಳೆ ಅಡ್ಡಿ ಆತಂಕ: ವಿಸ್ತರಣೆಯಾಗುತ್ತಾ ಮತದಾನದ ಸಮಯ? ಆಯುಕ್ತ ತುಷಾರ್​ ಗಿರಿನಾಥ್ ಸ್ಪಷ್ಟನೆ

ರಾಜ್ಯದಲ್ಲಿ ಒಟ್ಟು 5 ಕೋಟಿ 31 ಲಕ್ಷದ 33 ಸಾವಿರದ 054 ಮತದಾರರಿದ್ದಾರೆ. ಈ ಪೈಕಿ 2 ಕೋಟಿ 66 ಲಕ್ಷದ 82 ಸಾವಿರದ 156 ಪುರುಷ ಮತದಾರರಿದ್ದಾರೆ. ಇನ್ನು 2ಕೋಟಿ 63 ಲಕ್ಷದ 98 ಸಾವಿರದ 483ಮಹಿಳಾ ಮತದಾರರಿದ್ದಾರೆ. ಅಲ್ಲದೆ 4 ಸಾವಿರದ 927 ಇತರೆ ಮತದಾರರೂ ಇದ್ದಾರೆ. ರಾಜ್ಯದಲ್ಲಿ ಒಟ್ಟು 58 ಸಾವಿರದ 282 ಬೂತ್​ಗಳು ಇವೆ. ಅದರಲ್ಲಿ 11 ಸಾವಿರದ 631 ಸೂಕ್ಷ್ಮ ಮತ್ತು 617 ಅತಿ ಸೂಕ್ಷ್ಮ ಮತಗಟ್ಟೆಗಳಿವೆ.

ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ