Haveri Election Results: ಹಾವೇರಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಗವಿಸಿದ್ದಪ್ಪ ದ್ಯಾಮಣ್ಣವರ್, ರುದ್ರಪ್ಪ ಲಮಾಣಿ ಮಧ್ಯೆ ಪೈಪೋಟಿ

| Updated By: Rakesh Nayak Manchi

Updated on: May 13, 2023 | 4:26 AM

Haveri Assembly Election Result 2023 Live Counting Updates: ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗವಿಸಿದ್ದಪ್ಪ ದ್ಯಾಮಣ್ಣವರ್, ಕಾಂಗ್ರೆಸ್​ನಿಂದ ರುದ್ರಪ್ಪ ಲಮಾಣಿ ಹಾಗೂ ಜೆಡಿಎಸ್​ನಿಂದ ತುಕಾರಾಂ ಮಾಳಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Haveri Election Results: ಹಾವೇರಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಗವಿಸಿದ್ದಪ್ಪ ದ್ಯಾಮಣ್ಣವರ್, ರುದ್ರಪ್ಪ ಲಮಾಣಿ ಮಧ್ಯೆ ಪೈಪೋಟಿ
ರುದ್ರಪ್ಪ ಲಮಾಣಿ,
Follow us on

Haveri Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ​ಹಾವೇರಿ ವಿಧಾನಸಭಾ ಕ್ಷೇತ್ರದಿಂದ (Haveri Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗವಿಸಿದ್ದಪ್ಪ ದ್ಯಾಮಣ್ಣವರ್ ಸ್ಪರ್ಧಿಸಿದ್ದಾರೆ. ಈ ಮೂಲಕ ಬಿಜೆಪಿ ಹೊಸ ಮುಖಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ನು ಇವರು 2005 ರಿಂದ 2021ರವರೆಗೆ ಜಿಲ್ಲೆಯ ಉಪತಹಶೀಲ್ದಾರ್ ಆಗಿ ಸೇವೆ ಮಾಡಿದ್ದಾರೆ. ‘2005 ರಿಂದಲೂ ನಾನು ಹಾವೇರಿಯನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಎರಡೂವರೆ ದಶಕಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರದ ಜನರ ಅಭಿವೃದ್ಧಿಗೆ ಸಂಕಲ್ಪ ತೊಟ್ಟೆ ನಾನು ರಾಜಕೀಯ ಪ್ರವೇಶಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಾಂಗ್ರೆಸ್​​ನಿಂದ ರುದ್ರಪ್ಪ ಲಮಾಣಿ ಸ್ಪರ್ಧಿಸಿದ್ದಾರೆ. ಇವರು 2013 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಒಂದು ಬಾರಿ ಸಚಿವರು ಆದಂತವರು. ಬಳಿಕ 2018 ರ ಚುನಾವಣೆಯಲ್ಲಿ 75,261ಮತಗಳನ್ನ ಪಡೆದಿದ್ದು, ಬಿಜೆಪಿ ವಿರುದ್ದ 11,304 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಗೆಲುವುನ್ನ ಸಾಧಿಸಲೇಬೇಕೆಂಬ ಆಕಾಂಕ್ಷೆಯಿಂದ ಭರ್ಜರಿ ಮತಬೇಟೆ ನಡೆಸಿದ್ದಾರೆ. ಇನ್ನು ಜೆಡಿಎಸ್​ನಿಂದ ತುಕಾರಾಂ ಮಾಳಗಿ ಸ್ಪರ್ಧೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಣಕ್ಕೀಳಿದಿದ್ದಾರೆ. ಈ ಹಿಂದೆ ಸಂಜಯ್ ಡಾಂಗೆ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಿರೀಕ್ಷಿಸಿದ ಮಟ್ಟಿಗೆ ಮತದಾರರನ್ನ ಒಲಿಸಲು ಸೋತಿದ್ದರು. ಈ ಬಾರಿ ಕೂಡ ಇಲ್ಲಿ ಜೆಡಿಎಸ್​ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ನೇರಾನೇರ ಹಣಾಹಣಿ ನಡೆಯುತ್ತಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ