Hirekeruru Election Results: ಹೀರೆಕೆರೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಬಿಸಿ ಪಾಟೀಲ್, ಯುಬಿ ಬಣಕರ್ ಮಧ್ಯೆ ಪೈಪೋಟಿ
Hirekerur Assembly Election Results 2023 Live Counting Updates: ಹೀರೆಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿಸಿ ಪಾಟೀಲ್ ಕಾಂಗ್ರೆಸ್ನಿಂದ ಯುಬಿ ಬಣಕರ್ ಹಾಗೂ ಜೆಡಿಎಸ್ನಿಂದ ಜಯಾನಂದ ಜವಣ್ಣನವರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Hirekeruru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಹೀರೆಕೆರೂರು ವಿಧಾನಸಭಾ ಕ್ಷೇತ್ರದಿಂದ ( Hirekerur Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಿಸಿ ಪಾಟೀಲ್ ಸ್ಪರ್ಧಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಇವರು ಬಿಜೆಪಿಗೆ ಸೇರ್ಪಡೆಯಾಗಿ, ಇಡೀ ಸರ್ಕಾರವನ್ನ ಉರುಳಿಸಿದ್ದವರಲ್ಲಿ ಇವರು ಕೂಡ ಒಬ್ಬರು. ಬಳಿಕ ಉಪ ಚುನಾವಣೆಯಲ್ಲಿ ಸ್ಫರ್ಧಿಸಿ 85,562 ಮತಗಳನ್ನ ಪಡೆದು, 29,067 ಮತಗಳ ಅಂತರದಲ್ಲಿ ಗೆದ್ದು, ಹಾಲಿ ಕೃಷಿ ಸಚಿವರಾಗಿದ್ದಾರೆ. ಈ ಬಾರಿ ಕೂಡ ಭರ್ಜರಿ ಪ್ರಚಾರ ನಡೆಸುತ್ತಿರುವ ಇವರು ಮತ್ತೊಮ್ಮೆ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಯುಬಿ ಬಣಕರ್ ಸ್ಪರ್ಧಿಸಿದ್ದು, ಈ ಹಿಂದೆ ನಡೆದ 2018ರ ಚುನಾವಣೆಯಲ್ಲಿ ಕೇವಲ 555 ಮತಗಳಿಂದ ಸೋತಿದ್ದರು. ಜೊತೆಗೆ ಕಳೆದ ಬಾರಿ ಬಿಜೆಪಿಯಲ್ಲಿದ್ದ ಇವರು ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇಬೇಕೆಂದು ಹರಸಾಹಸ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್ನಿಂದ ಜಯಾನಂದ ಜವಣ್ಣನವರ್ ಸ್ಪರ್ಧೆ ಮಾಡಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಇನ್ನು ಇಡೀ ಜಿಲ್ಲೆಯಲ್ಲಿ ಹಿರೇಕೆರೂರು ಕ್ಷೇತ್ರ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನೇರಾನೇರ ಹಣಾಹಣಿ ಎದುರಾಗಿದೆ. ಯಾರಿಗೆ ಮತದಾರ ಒಲಿಯಲಿದ್ದಾನೆ, ಯಾರ ಕೊರಳಿಗೆ ವಿಜಯದ ಮಾಲೆ ಬಿಳಲಿದೆ ಕಾದುನೋಡಬೇಕಾಗಿದೆ.