Ranebennuru Election Results: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಅರುಣ್ ಕುಮಾರ್, ಪ್ರಕಾಶ್ಕೆ ಕೋಳಿವಾಡ ಮಧ್ಯೆ ಪೈಪೋಟಿ
Ranebennur Assembly Election Result 2023 Live Counting Updates: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್ ಕುಮಾರ್ ಕಾಂಗ್ರೆಸ್ನಿಂದ ಪ್ರಕಾಶ್ಕೆ ಕೋಳಿವಾಡ ಹಾಗೂ ಜೆಡಿಎಸ್ನಿಂದ ಮಂಜುನಾಥ್ ಗೌಡರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Ranebennuru Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ (Ranebennur Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಸ್ಪರ್ಧಿಸಿದ್ದಾರೆ. ಇನ್ನು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ 95,438 ಮತಗಳನ್ನ ಪಡೆದು ವಿಜಯಪತಾಕೆ ಹಾರಿಸಿದ್ದರು. ಈ ಬಾರಿ ಕೂಡ ಇವರಿಗೆ ಟಿಕೆಟ್ ನೀಡಿದ್ದು, ಅಬ್ಬರದ ಪ್ರಚಾರ ಮಾಡಿದ್ದು, ಮತ್ತೊಮ್ಮೆ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಪ್ರಕಾಶ್ಕೆ ಕೋಳಿವಾಡ ಸ್ಪರ್ಧಿಸಿದ್ದು, ಈ ಹಿಂದೆ ನಡೆದ 2018ರ ಚುನಾವಣೆಯಲ್ಲಿ ಇವರ ತಂದೆ ಕೆ.ಬಿ ಕೋಳಿವಾಡ ಅವರು ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಎದುರು 23,222 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಇನ್ನು ಜೆಡಿಎಸ್ನಿಂದ ಮಂಜುನಾಥ್ ಗೌಡರ್ ಸ್ಪರ್ಧೆ ಮಾಡಿದ್ದು, ಇದರ ಜೊತೆ ಈ ಹಿಂದೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್ ಶಂಕರ್, ಈ ಬಾರಿ ಎನ್ಸಿಪಿ ಪಕ್ಷದಿಂದ ಕಣಕ್ಕೀಳಿದಿದ್ದು, ಬಾರಿ ಕುತೂಹಲ ಮೂಡಿಸಿದೆ. ಇನ್ನು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಕುರುಬ ಮತಗಳು ನಿರ್ಣಾಯಕ ಮತಗಳಾಗಿವೆ. ಹೀಗಾಗಿ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ಕುತೂಹಲ ಕೆರಳಿಸಿದೆ.
Published On - 4:31 am, Sat, 13 May 23