ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್​ 3 ವರ್ಷ ಸಿಎಂ ಅಂತೆ-ಕಂತೆಗೆ ಸ್ಪಷ್ಟನೆ ನೀಡಿದ ಹೆಚ್​.ಸಿ ಮಹಾದೇವಪ್ಪ

|

Updated on: May 17, 2023 | 3:09 PM

ರಾಜ್ಯಕ್ಕೆ ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್​ 3 ವರ್ಷ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಅಂತೆ-ಕಂತೆಗಳು ಶರುವಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಆಪ್ತ, ಶಾಸಕ ಹೆಚ್​.ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್​ 3 ವರ್ಷ ಸಿಎಂ ಅಂತೆ-ಕಂತೆಗೆ ಸ್ಪಷ್ಟನೆ ನೀಡಿದ ಹೆಚ್​.ಸಿ ಮಹಾದೇವಪ್ಪ
ಹೆಚ್​. ಸಿ ಮಹದೇವಪ್ಪ
Follow us on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ (Karnataka Chief Minister) ಯಾರು ಎಂಬ ವಿಚಾರ ಕಾಂಗ್ರೆಸ್​ ಕೇಂದ್ರ ನಾಯಕರಲ್ಲಿ ಇನ್ನು ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ (Congress)​ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಇನ್ನು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ಮತ್ತು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಸ್ಥಾನ ಇಬ್ಬರ ನಡುವೆ ಹಂಚಿಕೆಯಾಗುತ್ತದೆ, ಸಿದ್ದರಾಮಯ್ಯ 2 ವರ್ಷ ಸಿಎಂ, ಡಿಕೆ ಶಿವಕುಮಾರ್​ 3 ವರ್ಷ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಆಪ್ತ, ಶಾಸಕ ಹೆಚ್​.ಸಿ ಮಹದೇವಪ್ಪ (HC Mahadevappa) ಅಧಿಕಾರ ಹಂಚಿಕೆ ಕೇವಲ ಅಂತೆ ಕಂತೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದೇ ಅಂತಿಮ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರೋದು ನನಗೆ ಖುಷಿ ತಂದಿದೆ. ಡಿಕೆ ಶಿವಕುಮಾರ್​ ಸೇರಿ ಅನೇಕ ನಾಯಕರು ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಆದರೆ ಒಬ್ಬರಿಗೆ ಸಿಎಂ ಸ್ಥಾನ ಕೊಡಲು ಸಾಧ್ಯ. ವರಿಷ್ಠರು ಎಲ್ಲವನ್ನೂ ಅಳೆದು ತೂಗಿ ತೀರ್ಮಾನ ಮಾಡಿದ್ದಾರೆ. ಅವಲೋಕನದ ಬಳಿಕವೇ ಸಿದ್ದರಾಮಯ್ಯಗೆ ಹೊಣೆ ನೀಡಲಾಗಿದೆ. ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆಗಬೇಕು ಅಂತ ಬಯಸುವುದರಲ್ಲಿ ತಪ್ಪಿಲ್ಲ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಇದನ್ನೂ ಓದಿ: ಮುಖ್ಯಮಂತ್ರಿ ಪ್ರಮಾಣ ವಚನಕ್ಕೆ ಭರದ ಸಿದ್ಧತೆ: ಎರಡು ಕಡೆ ಪ್ರಮಾಣವಚನಕ್ಕೆ ಪ್ಲ್ಯಾನ್, ಹಾಗಾದ್ರೆ ಸಿಎಂ ಯಾರು?

ಸಿದ್ದರಾಮಯ್ಯ ಅವರ ಮಾಸ್ ಲೀಡರ್ ಶಿಪ್, ಕ್ಲೀನ್ ಇಮೇಜ್ ಜನರಿಗೆ ನಂಬಿಕೆ ಮೂಡಿಸಿತ್ತು. ಡಿಕೆ ಶಿವಕುಮಾರ್​ ಶಿಸ್ತಿನ ಸಿಪಾಯಿಯಾಗಿ ಕೊಟ್ಟ ಕಾರ್ಯಕ್ರಮಗಳನ್ನು ಸಂಘಟಿತವಾಗಿ ಅನುಷ್ಟಾನಕ್ಕೆ ತಂದೆವು. ಹೀಗಾಗಿ 135 ಸ್ಥಾನ ಕಾಂಗ್ರೆಸ್ ಗೆಲ್ಲಲು ಕಾರಣವಾಯ್ತು ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ವಿಚಾರದಲ್ಲಿ ಸ್ಟ್ರಿಕ್ಟ್ ಆಗಿ ಹೇಳಬೇಕೆಂದರೇ ಡಿಸಿಎಂ ಹುದ್ದೆ ಸಾಂವಿಧಾನಕ ಅಲ್ಲ. ಅವರಿಗೊಂದು ಇವರಿಗೊಂದು ಅಂತ ಕೊಟ್ಟು ಡಿಸಿಎಂ ಸ್ಥಾನದ ಮಹತ್ವ ಹಾಳಾಗಬಾರದು. ಡಿಸಿಎಂ ಹುದ್ದೆಗೆ ಅಂತ ಮಹತ್ವವೇನೂ ಇಲ್ಲ. ನಾನು ಸಚಿವನಾಗಬೇಕಾ ಇಲ್ವಾ ಅನ್ನೋದನ್ನು ಸಿದ್ದರಾಮಯ್ಯನವರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ